ಸಂಬಂಧಿಕ ಯುವಕನಿಂದಲೇ ಹಾಸನದ ಶಿಕ್ಷಕಿ ಅಪಹರಣ ಪ್ರಕರಣ-ನೆಲ್ಯಾಡಿಯಲ್ಲಿ ಹಾಸನ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಗಳು

0

ನೆಲ್ಯಾಡಿ: ಮದುವೆಗೆ ನಿರಾಕರಿಸಿದ ಸಂಬಂಧಿಕ ಯುವಕನಿಂದಲೇ ಅಪಹರಣಕ್ಕೊಳಗಾದ ಯುವತಿಯನ್ನು ನೆಲ್ಯಾಡಿಯಲ್ಲಿ ಹಾಸನ ಪೊಲೀಸರು ಪತ್ತೆ ಹಚ್ಚಿ ಮನೆಯವರ ವಶಕ್ಕೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.

ಹಾಸನ ಹೊರವಲಯದ ಬಿಟ್ಟಗೌಡನ ಹಳ್ಳಿ ಬಳಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿ ಅರ್ಪಿತಾ ಅವರನ್ನು ಕಾರೊಂದರಲ್ಲಿ ಸಿನಿಮೀಯಾ ರೀತಿಯಲ್ಲಿ ಅಪಹರಿಸಲಾಗಿತ್ತು. ಮದುವೆಗೆ ನಿರಾಕರಿಸಿದ ಕಾರಣಕ್ಕೆ ಸಂಬಂಧಿಕ ಯುವಕ ರಾಮು ಇತರರೊಂದಿಗೆ ಸೇರಿಕೊಂಡು ಪುತ್ರಿಯನ್ನು ಅಪಹರಿಸಿದ್ದಾರೆ ಎಂದು ಅರ್ಪಿತಾ ತಾಯಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಪಹರಣದ ದ್ರಶ್ಯ ಸಿಸಿಟಿವಿ ಯಲ್ಲೂ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ಹಾಸನ ಎಸ್ ಪಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚಿಸಿದ್ದರು. ಆರೋಪಿಗಳು ಹಾಸನದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನೆಲ್ಯಾಡಿ ಕಡೆಗೆ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಬೆನ್ನಟ್ಟಿ ಬಂದ ಹಾಸನ ಪೊಲೀಸರ ತಂಡ ನೆಲ್ಯಾಡಿಯಲ್ಲಿ ಪತ್ತೆ ಹಚ್ಚಿ ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ವರದಿಯಾಗಿದೆ. ಯುವತಿಯನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here