ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಹಾದ್ವಾರ ಹಾಗೂ ನೂತನ ಬಸ್‌ತಂಗುದಾಣ ನಿರ್ಮಾಣಕ್ಕೆ ಶಿಲಾನ್ಯಾಸ

0

ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ದಿಗೆ 20 ಲಕ್ಷ ರೂ ಅನುದಾನ- ಅಶೋಕ್‌ಕುಮಾರ್‌ರೈ
ದೇವಸ್ಥಾನ ನಿರ್ಮಾಣದ ಕೆಲಸ ಕೇವಲ ಹಣವಿದ್ದರೆ ಸಾಲದು.ಹೃದಯ ವೈಶಾಲ್ಯತೆ ಹಾಗೂ ಯೋಗ , ತ್ಯಾಗ ,ಶ್ರದ್ದೆ ಬೇಕು-ಗಿರಿಧರ ಶೆಟ್ಟಿ
ಪೆರ್ಲಂಪಾಡಿಯಲ್ಲಿ ಭಕ್ತಾದಿಗಳ ಸಭೆ-ಪ್ರಮೋದ್‌ಕೆ.ಎಸ್.‌
ಡಿ.17-18ರಂದು ಚಂಪಾ ಷಷ್ಟಿ ಮಹೋತ್ಸವ ,ಬ್ರಹ್ಮಕಲಶದ ಆಮಂತ್ರಣ ಬಿಡುಗಡೆ -ಸಂತೋಷ್‌ಕುಮಾರ್‌ರೈ

ಪುತ್ತೂರು : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯ ಅಭಿವೃದ್ದಿಗೆ 20 ಲಕ್ಷ ರೂ ಅನುದಾನ ನೀಡಲಿದ್ದು, ಬ್ರಹ್ಮಕಲಶೋತ್ಸವಕ್ಕೆ ಮುನ್ನ ರಸ್ತೆ ಅಭಿವೃದ್ದಿಯಾಗಲಿದೆ ಎಂದು ಪುತ್ತೂರು ಶಾಸಕ ಹಾಗೂ ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಅಶೋಕ್‌ಕುಮಾರ್‌ರೈ ಹೇಳಿದರು.ಅವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಹಾದ್ವಾರ ಹಾಗೂ ನೂತನ ಬಸ್‌ತಂಗುದಾಣ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಇತರೆರಡೆ ಮಾದರಿಯಾಗಿ ನಡೆಯಬೇಕು. ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಸಂತರ್ಪಣೆಯೂ ಮುಖ್ಯ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ ,ಸಂಜೆ ಉಪಾಹಾರ ,ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಬೇಕು.ಊರವರು ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ಚೆನ್ನಾಗಿ ಸತ್ಕರಿಸಬೇಕು.ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲಾ ಕಾರ್ಯದಲ್ಲೂ ಭಕ್ತರು ಸಮರ್ಪಣಾ ಭಾವದಿಂದ ಸೇವೆ ಮಾಡಬೇಕು.ನಾನೂ ಜತೆಯಾಗುತ್ತೇನೆ. ಕ್ಷೇತ್ರಕ್ಕೆ ಆರ್ಥಿಕ ಕ್ರೋಢಿಕರಣವೂ ಮುಖ್ಯ ಈ ನಿಟ್ಟಿನಲ್ಲಿ ಭಕ್ತರು ಕೈ ಜೋಡಿಸಬೇಕು.ಒಟ್ಟಿನಲ್ಲಿ ಬ್ರಹ್ಮಕಲಶೋತ್ಸವ ಮಾದರಿಯಾಗಿ ನಡೆಯಬೇಕು ಎಂದು ಅಶೋಕ್‌ಕುಮಾರ್‌ರೈ ಹೇಳಿದರು.

ಊರಿನ ಭಕ್ತಾದಿಗಳೆಲ್ಲರೂ ತಮ್ಮ ನೆಂಟರು ಹಾಗೂ ಬಂಧುಗಳಿರುವ ಊರಿನಲ್ಲೂ ಆಮಂತ್ರಣ ನೀಡಬೇಕು.ಬೇರೆ ಬೇರೆ ಕಡೆ ಬ್ರಹ್ಮಕಲಶೋತ್ಸವದ ಹೋರ್ಡಿಂಗ್‌ಅಳವಡಿಸುವ ಮೂಲಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವಂತೆ ಮಾಡಬೇಕು ಹಾಗೂ ಎಲ್ಲಾ ದೇವಸ್ಥಾನಗಳಿಗೂ ತೆರಳಿ ಆಮಂತ್ರಣ ನೀಡಬೇಕು.ಒಟ್ಟಿನಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಮಹಾದ್ವಾರದ ದಾನಿ ಮಂಗಳೂರು ಸಾಗರ್‌ಕನ್ ಸ್ಟ್ರಕ್ಷನ್‌ಮಾಲಕ ಗಿರಿಧರ ಶೆಟ್ಟಿ  ಅವರು ಮಾತನಾಡಿ , ದೇವಸ್ಥಾನದ ಅಭಿವೃದ್ದಿ ನಿಟ್ಟಿನಲ್ಲಿ ಭಕ್ತಾದಿಗಳು ಎಲ್ಲಾ ರೀತಿಯಿಂದಲೂ ಕೈ ಜೋಡಿಸಬೇಕು.ಈಗ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ.ದೇವಸ್ಥಾನದ ಹುಂಡಿಯ ಹಣ ಸರಕಾರಕ್ಕೆ ಎಂದು.ಆದರೆ ವಾಸ್ತವವಾಗಿ ದೇವಸ್ಥಾನದ ಹುಂಡಿಯ ಹಣ ದೇವಸ್ಥಾನದ ಅಭಿವೃದ್ದಿ ಹಾಗೂ ಇತರ ವಿನಿಯೋಗಕ್ಕೆ ಬಳಕೆಮಾಡಲಾಗುತ್ತದೆ. ಎ ಗ್ರೇಡ್‌ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಮೊತ್ತವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ.ಅಲ್ಲಿಂದ ಬಳಿಕ ಇತರ ದೇವಸ್ಥಾನಗಳ ಅಭಿವೃದ್ದಿಗೆ ಅನುದಾನವನ್ನು ನೀಡಲಾಗುತ್ತದೆ.ಆದ್ದರಿಂದ ಭಕ್ತಾದಿಗಳು ಸುಳ್ಳು ಸುದ್ದಿಗಳನ್ನು ನಂಬಬಾರದು.ನಳೀಲು ದೇವಸ್ಥಾನದ ಹಿಂದಿನ ಬ್ರಹ್ಮಕಲಶೋತ್ಸವದಲ್ಲೂ ಭಾಗಿಯಾಗಿದ್ದೇನೆ.ಇದೀಗ ದೇವಸ್ಥಾನಕ್ಕೆ ದ್ವಾರ ನಿರ್ಮಾಣದ ಸೇವೆ ಮಾಡಲು ದೇವರು ಅನುಗ್ರಹಿಸಿದ್ದಾರೆ.ದೇವಸ್ಥಾನ ನಿರ್ಮಾಣದ ಕೆಲಸ ಕೇವಲ ಹಣವಿದ್ದರೆ ಸಾಲದು.ಹೃದಯ ವೈಶಾಲ್ಯತೆ ಹಾಗೂ ಯೋಗ , ತ್ಯಾಗ ಬೇಕು.ಈ ನಿಟ್ಟಿನಲ್ಲಿ  ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ಕುಮಾರ್‌ರೈ ಹಾಗೂ ಅವರ ತಂಡದ ಶ್ರದ್ದೆ ,ತ್ಯಾಗ,ಹೃದಯ ವೈಶಾಲ್ಯತೆ ಎದ್ದು ಕಾಣುತ್ತಿದೆ.ದೇವಸ್ಥಾನದ ಕೆಲಸವೆಂದರೆ ಅದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.ನಾನು ಕೂಡ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೂ ,ಅಲ್ಲಿಯೂ ನಿರಂತರವಾಗಿ ಅಭಿವೃದ್ದಿಯಾಗುತ್ತಿದೆ ಎಂದರು.

ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷ  ಪ್ರಮೋದ್‌ಕೆ.ಎಸ್‌ಮಾತನಾಡಿ , ಕೊಳ್ತಿಗೆ ಗ್ರಾಮದ ಗಡಿಯಲ್ಲಿರುವ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಈ ಹಿಂದಿನ ಬ್ರಹ್ಮಕಲಶದಲ್ಲೂ ನಾನು ಭಾಗವಹಿಸಿದ್ದೇನೆ.20 ವರ್ಷಗಳ ಅವಧಿಯಲ್ಲಿ ಈ ದೇವಸ್ಥಾನವು ಬಹಳಷ್ಟು ಅಭಿವೃದ್ದಿಯಾಗಿದೆ.ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಟ್ಟಿನಲ್ಲಿ ಕೊಳ್ತಿಗೆ ಗ್ರಾಮದ ಕೇಂದ್ರವಾದ ಪೆರ್ಲಂಪಾಡಿಯಲ್ಲಿ ಭಕ್ತಾದಿಗಳ ಸಭೆ ನಡೆಸಬೇಕು.ಈ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲಾಗುವುದು.ದೇವಸ್ಥಾನದ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಎಲ್ಲರಿಗೂ ಗೌರವ ಸಲ್ಲುತ್ತದೆ ಎಂದರು.

ಪೆರ್ಲಂಪಾಡಿಯ ಸಭೆಗೆ ನಾನೂ ಬರುತ್ತೇನೆ- ಅಶೋಕ್‌ಕುಮಾರ್‌ರೈ
ಪ್ರಮೋದ್‌ಕೆ.ಎಸ್.‌ ಅವರ ಸಲಹೆಗೆ ಪೂರಕವಾಗಿ ಮಾತನಾಡಿದ ಶಾಸಕ ಅಶೋಕ್‌ಕುಮಾರ್‌ರೈ ಅವರು ,ಪೆರ್ಲಂಪಾಡಿಯಲ್ಲಿ ನಡೆಯವ ನಳೀಲು ಬ್ರಹ್ಮಕಲಶೋತ್ಸವದ ಸಭೆಗೆ ನಾನೂ ಭಾಗವಹಿಸುತ್ತೇನೆ.ಆ ಭಾಗದ ಭಕ್ತರಿಗೂ ಬ್ರಹ್ಮಕಲಶದಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಗಲಿದೆ.ಒಟ್ಟಿನಲ್ಲಿ ನಳೀಲು ಬ್ರಹ್ಮಕಲಶೋತ್ಸವ ಹತ್ತೂರಿಗೂ ಮಾದರಿಯಾಗಬೇಕು ಎಂದರು.

ಡಿ.17-18ರಂದು ಚಂಪಾ ಷಷ್ಟಿ ಮಹೋತ್ಸವ ಬ್ರಹ್ಮಕಲಶದ ಆಮಂತ್ರಣ ಬಿಡುಗಡೆ ,ಶ್ರೀ ದೇವಿಮಹಾತ್ಮೆ ಯಕ್ಷಗಾನ
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್‌ರೈ ನಳೀಲು ಮಾತನಾಡಿ, ಬ್ರಹ್ಮಕಲಶೋತ್ಸವವು 2024 ಫೆ.17ರಿಂದ ಫೆ.24ರವರೆಗೆ ನಡೆಯಲಿದ್ದು ,ಈ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ನಿರಂತರ ಅಭಿವೃದ್ದಿ ಕಾರ್ಯಗಳು ನಡೆಯುತ್ತಾ ಬಂದಿದೆ.ದೇವಸ್ಥಾನದ ಗರ್ಭಗುಡಿ ಹಾಗೂ ಪ್ರಸಾದ ಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಸಲಾಗಿದೆ.ನೂತನವಾಗಿ ವಸಂತ ಮಂಟಪ ನಿರ್ಮಾಣವಾಗಿದೆ.ಡಿ.17-18ರಂದು ಚಂಪಾ ಷಷ್ಟಿ ಮಹೋತ್ಸವ ನಡೆಯಲಿದ್ದು ,ಡಿ.17ರಂದು ರಾತ್ರಿ ವಿಶೇಷ ಕಾರ್ತಿಕ ಪೂಜೆ ,ಡಿ.18ರಂದು ಆಶ್ಲೇಷಾ ಬಲಿ ,ನಾಗತಂಬಿಲ,ಚಂಪಾ ಷಷ್ಟಿ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ ಹಾಗೂ ಭಕ್ತರ ಸಭೆ ನಡೆಯಲಿದೆ.ಸಂಜೆ ಸೇವಾ ರೂಪದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.ಈ ಎಲ್ಲಾ ಕಾರ್ಯದಲ್ಲೂ ಭಕ್ತಾದಿಗಳು ಪಾಲ್ಗೊಳ್ಳಬೇಕು ಎಂದರು.ವೇದಿಕೆಯಲ್ಲಿ ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರಾದ ನಾರಾಯಣ ರೈ ಮೊದೆಲ್ಕಾಡಿ,ಮೋಹನ್‌ದಾಸ್‌ರೈ ನಳೀಲು,ಕಿಶೋರ್‌ಕುಮಾರ್‌ರೈ ನಳೀಲು,ಸತೀಶ್‌ರೈ  ನಳೀಲು,ಪ್ರವೀಣ್‌ಕುಮಾರ್‌ರೈ ನಳೀಲು,ದೇವಸ್ಥಾನದ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಅರುಣ್‌ಕುಮಾರ್‌ರೈ ನಳೀಲು ,ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ಚಂದ್ರ ರೈ ನಳೀಲು,ಉಪಾಧ್ಯಕ್ಷ ವಿನೋದ್‌ರೈ ಪಾಲ್ತಾಡು, ನವೀನ್‌ರೈ ನಡುಮನೆ, ಸಂಜೀವ ಗೌಡ ಪಾಲ್ತಾಡಿ, ಸ್ವಾಗತ ಸಮಿತಿ ಸಂಚಾಲಕ ಸುನೀಲ್‌ರೈ ಪಾಲ್ತಾಡು,ಕಿಟ್ಟಣ್ಣ ರೈ ನಡುಕೂಟೇಲು, ರಘುನಾಥ ರೈ ನಡುಕೂಟೇಲು,ಕೊಳ್ತಿಗೆ ಗ್ರಾ.ಪಂ.ಸದಸ್ಯರಾದ ಶುಭಲತಾ ಜೆ. ರೈ ,ಸುಂದರ ಪಾಲ್ತಾಡು,ಸವಣೂರು ಗ್ರಾ.ಪಂ.ಸದಸ್ಯ ತಾರಾನಾಥ ಬೊಳಿಯಾಲ,ಬಾಲಕೃಷ್ಣ ಗೌಡ, ರಾಮಣ್ಣ ರೈ ,ಉಮೇಶ್‌ನಾಯ್ಕ, ಬಾಲಕೃಷ್ಣ ಗೌಡ ಬಾರ್ತಿಕುಮೇರು,ಹರೀಶ್‌ನ್ಯಾಕ್‌,ಅಶಿತ್‌ಶೆಟ್ಟಿ ಜಗನ್ನಾಥ ರೈ ,ಸುರೇಶ್‌ಭಟ್‌ಅಂಕತ್ತಡ್ಕ,ಸದಾಶಿವ ರೈ ಬಾಕಿಜಾಲು,ಮಹಾಬಲ ರೈ ಚೆನ್ನಾವರ,ಪ್ರಜ್ವಲ್‌ರೈ ಚೆನ್ನಾವರ,ದೇವಿಪ್ರಸಾದ್‌ಮಣಿಯಾಣಿ,ಅಮರನಾಥ ರೈ ,ಪ್ರಸಾದ್‌ರೈ,ಜಯಪ್ರಶಾಂತ್‌,ಸುಂದರ ,ಸುಧಾಕರ ರೈ ಹೊಸಮನೆ,ಶೇಷಪ್ಪ ರೈ ಮೊದಲಾದವರಿದ್ದರು.ಸಮಿತಿ ಪದಾಧಿಕಾರಿಗಳಾದ  ಪ್ರವೀಣ್‌ರೈ ನಡುಕೂಟೇಲು ಸ್ವಾಗತಿಸಿ ,ಪ್ರವೀಣ್‌ಚೆನ್ನಾವರ ವಂದಿಸಿದರು.

LEAVE A REPLY

Please enter your comment!
Please enter your name here