ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ: ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ಕಂಬಳ ಕ್ರೀಡೆಯ ಕ್ಷೇತ್ರ ಕಾರ್ಯ ಅಧ್ಯಯನ

0

ನೆಲ್ಯಾಡಿ:ಪ್ರಕೃತಿಯೊಂದಿಗೆನ ಅವಿನಾಭಾವ ಸಂಬಂಧಗಳನ್ನು ಇಟ್ಟುಕೊಂಡು ಬೆಳೆದು ಬಂದಿರುವ ತುಳುನಾಡಿನ ಸಂಸ್ಕೃತಿಯು ಪ್ರಸ್ತುತ ಬೇಸಾಯ ಮಾಡುವ ಗದ್ದೆಗಳೇ ವಿರಳವಾಗಿರುವ ಈ ಸಂದರ್ಭದಲ್ಲಿ ಪಾರಂಪರಿಕ ಸಂಸ್ಕೃತಿಗಳ ಅರಿವಿನ ಹಿನ್ನೆಲೆಯಲ್ಲಿ ಬಹುತೇಕ ವಿಸ್ಮೃತಿಗೆ ಒಳಗಾಗಿದ್ದು, ಅನೇಕ ಪಾರಂಪರಿಕ ಕ್ರೀಡೆಗಳು ಕೃಷಿ ಆಚರಣೆಗಳ ಮೂಲ ಬೇರುಗಳನ್ನು ಕಳಚಿಕೊಂಡು ಕೇವಲ ಮನರಂಜನಾತ್ಮಕ ಸ್ಪರ್ಧೆಗಳ ಸ್ವರೂಪದಲ್ಲಿ ನೆಲೆ ನಿಂತರೂ ಕೂಡ ಪಾರಂಪರಿಕ ಬೇರುಗಳನ್ನು ಈ ಕಂಬಳ ಕ್ರೀಡೆಯ ಸಮಗ್ರ ಅಧ್ಯಯನದ ಮೂಲಕ ಕಂಡುಕೊಳ್ಳಲು ಸಾಧ್ಯವಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನೂರಂದಪ್ಪ ಮತ್ತು ಹೇಮಾವತಿ ಅವರ ಅಭಿಪ್ರಾಯವಾಗಿದೆ .

ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ಕಂಬಳ ಕ್ರೀಡೆಯ ಕ್ಷೇತ್ರ ಕಾರ್ಯ ಅಧ್ಯಯನ ನಡೆಸಿದ್ದಾರೆ ಅದರಂತೆ ಕಾವ್ಯ, ಚೈತನ್ಯ, ಪುಷ್ಪಲತಾ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರ್ಗಾಲು ಗ್ರಾಮದ ನಾಯಕನ ಕಟ್ಟೆಯ ರಾಜ ಮತ್ತು ಪಾಂಡು ಎಂಬ ಕೋಣಗಳ ದಿನಚರಿ ಹಾಗೂ ಯಜಮಾನರು ಹಾಗೂ ಓಟಗಾರವಿಶ್ವನಾಥ ದೇವಾಡಿಗರ ಸಂದರ್ಶನವನ್ನು ಮಾಡಿದರು.ವಿದ್ಯಾರ್ಥಿಗಳಾದ ಲೀಲೆಶ್ ಮತ್ತು ದೀಪಕ್ ಇವರು ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಮೂಡೆ ಮತ್ತು ಪಾಂಡು ಕೋಣಗಳ ದಿನಚರಿ ಹಾಗೂ ಅವು ಸ್ಪರ್ಧಿಸಿದ ಕಂಬಳಗಳ ಸಾಧನೆ, ಓಟಗಾರರಾದ ರವಿಕುಮಾರ್ ಅಳದಂಗಡಿ ಇವರ ಸಂದರ್ಶನವನ್ನು ಮಾಡಿದರು.ಚೇತನ್, ಗಿರೀಶ್ ಮತ್ತು ಯತಿನ್ ಇವರು ಬಂಟ್ವಾಳ ತಾಲೂಕಿನ ಕುಂಟಾಲಪಲ್ಕೆಯ ಕಕ್ಕೆಪದವು ಗ್ರಾಮದ ಬೋಲ್ಲ ಮತ್ತು ಜಯ ಎಂಬ ಕೋಣಗಳ, ಹಾಗೂ ಓಟಗಾರರಾದ ದಿನೇಶ್ ಅವರ ಸಂದರ್ಶನ ಮಾಡಿದರು. ಮೆರ್ಲಿನ್, ಮಂಜರಿ, ಅಫ್ರಿನಾ ಹಾಗೂ ಮುಶ್ರಿಫಾ ಇವರು ಮಾಣಿ ಸಾಹು ಹೊಸ ಮನೆಯ ಉಮೇಶ್ ಮಹಾಬಲ ಶೆಟ್ಟಿ ಇವರ ಸಂದರ್ಶನ ಮತ್ತು ಕೋಣಗಳ ಜನಚರಿಯನ್ನು ಕುರಿತು ಕ್ಷೇತ್ರ ಅಧ್ಯಯನವನ್ನು ಮಾಡಿದರು. ವಿದ್ಯಾರ್ಥಿಗಳಾದ ರಿತೇಶ್ ಮತ್ತು ಹರೀಶ್ ಇವರು ಪುತ್ತೂರು ತಾಲೂಕಿನ ಕೈಪ ಗ್ರಾಮದವರಾದ ಯಜಮಾನ ಕೇಶವ ಭಂಡಾರಿ ಹಾಗೂ ಕಂಬಳ ಕ್ರೀಡೆಯ ಉಸೇನ್ ಬೋಲ್ಟ್ ಎಂದೇ ಪ್ರಖ್ಯಾತರಾದ ಓಟಗಾರರಾದ ಶ್ರೀನಿವಾಸಗೌಡ ಅವರ ಸಂದರ್ಶನವನ್ನು ಮಾಡಿದರು.

LEAVE A REPLY

Please enter your comment!
Please enter your name here