ಪುತ್ತೂರು: ಕಾರಂತರ ಕರ್ಮಭೂಮಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ 17 ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟ ‘ಕ್ರೀಡಾ ಕಾರಂಜಿ’ ಇದರ ಕ್ರೀಡಾಜ್ಯೋತಿಯು ದ.2 ರಂದು ಬೆಳಿಗ್ಗೆ ಈಶ್ವರಮಂಗಲಕ್ಕೆ ಆಗಮಿಸಿತು. ಇಲ್ಲಿನ ಉನ್ನಿಕೃಷ್ಣನ್ ವೃತ್ತದಲ್ಲಿ ಕ್ರೀಡಾಜ್ಯೋತಿಯನ್ನು ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಗ್ರಾಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯ ಶ್ರೀರಾಮ್ ಪಕ್ಕಳ, ವೈದ್ಯರಾದ ಡಾ.ಶ್ರೀಕುಮಾರ್, ಉದ್ಯಮಿ ಅಬ್ದುಲ್ ರಹೀಮಾನ್ ಹಾಜಿ ಮೇನಾಲ, ರಾಮ್‌ಪ್ರಸಾದ್ ಮೇನಾಲ, ಜಯಚಂದ್ರ ಸೇರಾಜೆ, ಅಬ್ದುಲ್ಲಾ ಮೆಣಸಿನಕಾನ, ಗ್ರಾಪಂ ಮಾಜಿ ಸದಸ್ಯ ಮೂಸನ್, ಕ್ರೀಡಾಜ್ಯೋತಿ ಉಸ್ತುವಾರಿ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್, ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ಸುಧೀರ್ ಶೆಟ್ಟಿ, ರಮೇಶ್ ಶಿರ್ಲಾಲು, ಮೇನಾಲ ಕ್ಲಸ್ಟರ್‌ನ ಸಿಆರ್‌ಪಿ ಜಯಂತಿ ಅಲ್ಲದೆ ಮೇನಾಲ, ಕರ್ನೂರು, ನೆಟ್ಟಣಿಗೆ ಮುಡ್ನೂರು, ಹನುಮಗಿರಿ, ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು, ಊರಿನ ಗಣ್ಯರು, ಗ್ರಾಮಸ್ಥರು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು.
ಉನ್ನಿಕೃಷ್ಣನ್ ವೃತ್ತದಿಂದ ಮೆರವಣಿಗೆ ಮೂಲಕ ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆ ಆವರಣಕ್ಕೆ ಆಗಮಿಸಿದ ಕ್ರೀಡಾಜ್ಯೋತಿಯನ್ನು ವಿದ್ಯಾಸಂಸ್ಥೆಯ ಸಂಚಾಲಕ ಶಿವರಾಮ ಪಿ, ಪ್ರಾಂಶುಪಾಲ ಶ್ಯಾಮಣ್ಣ, ಮುಖ್ಯಗುರು ಅಮರನಾಥ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಹಾಗೂ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು. ಬಳಿಕ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ಮುಖ್ಯಗುರು ವನಿತಾ ಕೆ, ದೈಹಿಕ ಶಿಕ್ಷಣ ಶಿಕ್ಷಕ ಮುರಳಿಮೋಹನ ಶೆಟ್ಟಿ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು.