ಮುತ್ತಿನ ನಗರಿ ಪುತ್ತೂರಿನಲ್ಲಿ ಜೋಸ್ ಆಲುಕ್ಕಾಸ್‌ನ 5ನೇ ವರ್ಷಾಚರಣೆ ಸಂಭ್ರಮಕ್ಕೆ ಶಾಸಕರಿಂದ ಚಾಲನೆ

0

ಸಂಸ್ಥೆಯ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿ: ಅಶೋಕ್ ಕುಮಾರ್ ರೈ
ಸಂಸ್ಥೆ ಎಂದಿಗೂ ಕ್ವಾಲಿಟಿಯಲ್ಲಿ ರಾಜಿ ಮಾಡುವುದಿಲ್ಲ: ಚಲನ ಚಿತ್ರ ನಟಿ ರಚನಾ ರೈ
ಅನುದಾನವನ್ನು ಸರಕಾರಿ ಶಾಲೆಗಳಿಗೆ ನೀಡಿರುವುದು ತುಂಬಾ ಸಂತಸ ತಂದಿದೆ: ಲೊಕೇಶ್ ಎಸ್.ಆರ್

ಪುತ್ತೂರು: ಉತ್ತಮ ಕ್ವಾಲಿಟಿಯ‌ ಚಿನ್ನಾಭರಣಗಳನ್ನು ನೀಡುವ ಮೂಲಕ ಜೋಸ್ ಆಲೂಕ್ಕಾಸ್ ಚಿನ್ನಾಭರಣ ಮಳಿಗೆ ಜನಮಾನಸ ತಲುಪಲು ಸಾಧ್ಯವಾಗಿದೆ. ಸಂಸ್ಥೆ ತಮ್ಮ ಸಿಎಸ್.ಆರ್ ಫಂಡ್ ನ ಮೂಲಕ ಸರಕಾರಿ ಶಾಲೆಗಳಿಗೆ ಅನುದಾನವನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಂಸ್ಥೆಯ ಇಂತಹ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿಯಾಗಿದೆ. ಪ್ರತಿಯೊಂದು ದೊಡ್ಡದೊಡ್ಡ ಸಂಸ್ಥೆಗಳು ತಮ್ಮ ವ್ಯವಹಾರದ ಲಾಭದಲ್ಲಿ ಒಂದಂಶವನ್ನು ಸಮಾಜದ ಏಳಿಗೆಗಾಗಿ ನೀಡುವ ಕೆಲಸವಾಗಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ‌ ಅಶೋಕ್ ಕುಮಾರ್ ರೈರವರು ಹೇಳಿದರು.

ಅವರು ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯ ಐದನೇ ವಾರ್ಷಿಕ ಸಂಭ್ರಮಾಚರಣೆಯನ್ನು ಡಿ.2ರಂದು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿಗೆ ಹೊಸಹೊಸ ಉದ್ಯಮಗಳು ಬರಬೇಕಾಗಿದೆ‌. ಆ ಮೂಲಕ ಈ ಭಾಗದ ಜನರಿಗೆ ಉದ್ಯೋಗ ಲಭಿಸುವ ಕೆಲಸವಾಗುತ್ತದೆ. ಸಂಸ್ಥೆಯು ಸುತ್ತಮುತ್ತಲು ಪ್ರದೇಶದ ಕೆಲವೊಂದು ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಅಲ್ಲಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವ ಸಲುವಾಗಿ ಸಹಾಯ ಹಸ್ತವನ್ನು‌ ಚಾಚಿದೆ. ಆ ಮೂಲಕ ಸರಕಾರಿ ಶಾಲೆಗಳನ್ನು ಮೇಲಕ್ಕೆತ್ತುವ ಕೆಲಸ ಸಂಸ್ಥೆಯಿಂದ ಆಗುತ್ತಿರುವುದು ಅಭಿನಂದನೀಯ.‌ ಸಂಸ್ಥೆಯ ಸೇವೆಯನ್ನು ಮನಗಂಡ ಗ್ರಾಹಕರು ಸಂಸ್ಥೆಯನ್ನು ಒಪ್ಪಿಕೊಂಡಿದ್ದಾರೆ. ಕೇವಲ ಐದು ವರುಷಗಳಲ್ಲಿ ಈ ಭಾಗದ ಜನರ ಮೆಚ್ಚಿನ ಸಂಸ್ಥೆಗಳಲ್ಲಿ ಒಂದಾಗಿದೆ. ಇನ್ನುಮುಂದೆಯೂ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದರು.

ತುಳು ಚಲನಚಿತ್ರ ನಟಿ ರಚನಾ ರೈರವರು ಮಾತನಾಡಿ, ನಾನು ಈ ಸಂಸ್ಥೆಯ ಓರ್ವ ಗ್ರಾಹಕಳಾಗಿದ್ದೇ‌ನೆ. ಸಂಸ್ಥೆ ಎಂದಿಗೂ ಕ್ವಾಲಿಟಿಯಲ್ಲಿ ರಾಜಿ ಮಾಡುವುದಿಲ್ಲ. ಸಂಸ್ಥೆಯ ಸಿಬ್ಬಂದಿಗಳ ನಗುಮುಖದ ಸೇವೆ ಸಂಸ್ಥೆಯ ಯಶಸ್ಸಿನ ಮೈಲಿಗಲ್ಲಾಗಿದೆ. ಜೋಸ್ ಆಲುಕ್ಕಾಸ್ ಎಲ್ಲಾ ವಿಧದ ಚೆನ್ನಾಭರಣಗಳ ಬೃಹತ್ ಸಂಗ್ರಹವಿದೆ. ಎಲ್ಲರೂ ಸಂಸ್ಥೆಯನ್ನು ಪ್ರೋತ್ಸಾಹಿಸಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ರವರು ಮಾತನಾಡಿ, ಸಿ.ಎಸ್.ಆರ್. ಫಂಡ್ ಅನ್ನು ಸರಕಾರಿ ಶಾಲೆಗಳಿಗೆ ನೀಡಿರುವುದು ತುಂಬಾ ಸಂತಸ ತಂದಿದೆ.
ಇದೇ ರೀತಿ ಇನ್ಮಷ್ಟು‌ ಸಂಸ್ಥೆಗಳು ಸರಕಾರಿ ಶಾಲೆಗಳಿಗೆ ಸಹಕಾರ ನೀಡಲು ಮುಂದೆ ಬರಬೇಕಿದೆ. ನಮ್ಮ ಸರಕಾರಿ ಶಾಲೆಗಳಿಗೆ ಸಹಕಾರಿ ಮಾಡಿರುವುದಕ್ಕೆ ನಾವು ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದರು.

ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ, ಸಂಸ್ಥೆಯ ಏರಿಯಾ ಮ್ಯಾನೇಜರ್ ಬಿಜು, ಪುತ್ತೂರು ಶಾಖಾ ವ್ಯವಸ್ಥಾಪಕ ರತೀಶ್ ಸಿ.ಪಿ., ಸಹ ವ್ಯವಸ್ಥಾಪಮ ಲೆನೀಶ್, ಮಂಗಳೂರು ಶಾಖಾ ವ್ಯವಸ್ಥಾಪಕ ಅಗಸ್ಟಿನ್ ಮೊದಲಾವದರು ವೇದಿಕೆಯಲ್ಲಿ ಉಪಸ್ಥಿತರಿದ್ದು. ಮಂಗಳೂರು ಶಾಖಾ ಫ್ಲೋರ್ ಮ್ಯಾನೇಜರ್ ರಾಕೇಶ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ಐದನೇ ವಾರ್ಷಿಕೋತ್ಸವದ ಭರ್ಜರಿ ಆಫರ್:
ಐದನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡುವುದರ ಮೂಲಕ ಅದ್ದೂರಿಯ ಆಚರಣೆಗೆ ಸಿದ್ಧತೆ ಮಾಡಲಾಗಿದೆ. ಹೊಸ ಸ್ಟಾಕ್, ಹೊಸ ಸಂಗ್ರಹಗಳು ಮತ್ತು ಹೊಚ್ಚ ಹೊಸ ಅನುಭವವನ್ನು ತನ್ನ ಗ್ರಾಹಕರಿಗೆ ನೀಡಲು ಸಂಸ್ಥೆ ಸಿದ್ಧವಾಗಿದೆ. ಪ್ರತಿ ಐವತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿ ವೇಳೆ ಒಂದು ಚಿನ್ನದ ನಾಣ್ಯ ಉಚಿತವಾಗಿ‌ ಸಿಗಲಿದೆ. ಪ್ಲಾಟಿನಂ ಆಭರಣಗಳಿಗೆ 7% ರಿಯಾಯಿತಿ, ವಜ್ರಗಳ ಮೇಲೆ 20% ರಿಯಾಯಿತಿ ದೊರೆಯಲಿದೆ.

ನಿಮ್ಮ ಹಳೆಯ ಚಿನ್ನದ ಆಭರಣಗಳನ್ನು ಹೆಚ್ಚಿನ ಲಾಭದೊಂದಿಗೆ ಹೆಚ್ ಯು ಐಡಿ ಹಾಲ್ ಮಾರ್ಕ್ ಚಿನ್ನದ ಆಭರಣಗಳುಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಸುವರ್ಣ ಅವಕಾಶವನ್ನು‌ ಸಂಸ್ಥೆ ಕಲ್ಪಿಸಿದೆ. ಇಷ್ಟು ಮಾತ್ರವಲ್ಲದೆ ಗ್ರಾಹಕರಿಗೆ ಪ್ರತೀ ಖರೀದಿಗೆ ಉಚಿತ ಉಡುಗೊರೆಗಳ‌ನ್ನು ಸಂಸ್ಥೆ ನೀಡಲಿದೆ. ಬಿಐಎಸ್ ಪ್ರಮಾಣೀಕೃತ 916 ಚಿನ್ನದ ಆಭರಣಗಳ ಅತ್ಯಪೂರ್ವ ಸಂಗ್ರಹವೇ ಇಲ್ಲಿದ್ದು, ಕಡಿಮೆ ಮೇಕಿಂಗ್ ಚಾರ್ಜಸ್ ಹಾಗೂ ಬಯ್ ಬ್ಯಾಕ್ ಗ್ಯಾರಂಟಿ ಯನ್ನು ಸಂಸ್ಥೆ ನೀಡಲಿದೆ. ವಾರ್ಷಿಕೋತ್ಸವದ ವಿಶೇಷ ಆಫರ್ ಗಳು ಡಿ.2ರಂದು ಆರಂಭಗೊಂಡು ಡಿ.6ರಂದು ಕೊನೆಗೊಳ್ಳಲಿದೆ.

ಸಿ.ಎಸ್.ಆರ್ ಫಂಡ್ ನ ಸಹಾಯಧನ ವಿತರಣೆ:
ಇದೇ ಸಂದರ್ಭದಲ್ಲಿ ತಾಲೂಕಿನ 6 ಸರಕಾರಿ ಶಾಲೆಗಳಿಗೆ ಜೋಸ್ ಆಲುಕ್ಕಾಸ್ ಫೌಂಡೇಶನ್ ನಿಂದ ನೀಡಲಾಗುವ ಸಿ.ಎಸ್.ಆರ್ ನಿಧಿಯಿಂದ ಸುಮಾರು 5.50 ಲಕ್ಷರೂಪಾಯಿಗಳ ಸಹಾಯಧನದ ಚೆಕ್ ಅನ್ನು ಶಾಸಕರಾದ ಅಶೋಕ್ ಕುಮಾರ್ ರೈರವರು ವಿತರಣೆ ಮಾಡಿದರು.

ಸಂಭ್ರಮಾಚರಣೆ ಕೊಡುಗೆಗಳು:

ಡಿ.6ರ ವರೆಗೆ ಮುಂದುವರೆಯಲಿದೆ ಸಂಭ್ರಮಾಚರಣೆ
ಚಿನ್ನ ಖರೀದಿಗೆ ಚಿನ್ನದ ನಾಣ್ಯ ಉಚಿತ
ಪ್ಲಾಟಿನಂ ಅಭರಣಗಳಿಗೆ 7% ರಿಯಾಯಿತಿ
ವಜ್ರಗಳ ಮೇಲೆ 20% ರಿಯಾಯಿತಿ
ಪ್ರತಿ ಖರೀದಿಗೆ ಉಚಿತ ಬೆಲೆಬಾಳುವ ಉಡುಗೊರೆಗಳು

LEAVE A REPLY

Please enter your comment!
Please enter your name here