
ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ ಮತ್ತು ಇಂದಿರಾ ದಂಪತಿಗಳು ಅವರ ಪುತ್ರ ವಿಶಾಲ್ 10ನೇ ತರಗತಿಯಲ್ಲಿ ಕಲಿಯುತ್ತಿದ್ದು ಅವರ ಹೆಸರಿನಲ್ಲಿ ಸಂಸ್ಥೆಗೆ ಕೊಡುಗೆಯಾಗಿ ನೀಡಿರುವ ಡಿಜಿಟಲ್ ಬೋರ್ಡನ್ನು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಮೇಶ್ ಕೆ.ಎಂ. ಬಿ ಅವರ ಪುತ್ರಿ ವೀಕ್ಷಿತಾ ಉಪಸ್ಥಿತರಿದ್ದರು.