ವೀರಮಂಗಲ: ಮಹಾವಿಷ್ಣು ಸೇವಾ ಪ್ರತಿಷ್ಠಾನದಿಂದ 23ನೇ ವರ್ಷದ ಶನೈಶ್ಚರ ಪೂಜೆ, ಧಾರ್ಮಿಕ ಸಭೆ

0

ಪುತ್ತೂರು: ವೀರಮಂಗಲದ ಆನಾಜೆ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದಿಂದ ಆನಾಜೆ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿಯ ಸಹಯೋಗದಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಡಿ.2ರಂದು ವೀರಮಂಗಲ ಆನಾಜೆ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ನಡೆಯಿತು. ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿತು. ಸೂರ್ಯನಾರಾಯಣ ಕಾರಂತ ಕಥಾ‌ ಪ್ರವಚನ ನೀಡಿದರು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮಾತನಾಡಿ, ಶನಿ ದೇವರ ಲೀಲೆಯ ಬಗ್ಗೆ ಯಾರೂ ಭಯ ಪಡಬೇಕಾಗಿಲ್ಲ. ಧೈರ್ಯದಿಂದ ನ್ಯಾಯ ಕೊಡುವ ಏಕೈಕ ದೇವರು. ಶನಿಯಲ್ಲಿ ಒಳ್ಳೆಯದು ಕೆಟ್ಟದೂ ಇದೆ. ಶನಿ ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ. ಶ್ರದ್ದಾ‌ಭಕ್ತಿಯಿಂದ ಮಾಡುವ ಸೇವೆಗೆ ದೇವರು ಒಳಿಯುತ್ತಾರೆ. ವೀರಮಂಗಲದಲ್ಲಿ ಸಮಾಜಕ್ಕೋಸ್ಕರ ಮಾಡಿದ‌ ಕಾರ್ಯಕ್ರಮ ಇನ್ನಷ್ಟು ಶಕ್ತಿ ನೀಡಲಿ ಎಂದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉದಯ ತಂತ್ರಿ ಮಾತನಾಡಿ, ವೀರಮಂಗಲ ಎಂಬ ಸಣ್ಣ ಊರಿನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ಈ ಮೂಲಕ ಊರಿಗೆ ಬರುವ ದೋಷ ನಿವಾರಿಸಿ,‌ನೆಮ್ಮದಿ ಕರುಣಿಸುವಂತಾಗಲಿ ಎಂದರು.

ಧಾರ್ಮಿಕ ಭಾಷಣ ಮಾಡಿದ ಆದರ್ಶ ಗೋಖಲೆ ಮಾತನಾಡಿ, ಹಿಂದೂ ಸಮಾಜದ ಪ್ರತಿ‌ ಹಬ್ಬದ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಮೋಜಿಗಾಗಿ ಪೂಜಾ ಕಾರ್ಯಕ್ರಮ ನಡೆಸುತ್ತಿಲ್ಲ. ಅದರಲ್ಲಿ ಧರ್ಮದ ಪ್ರೇರಣೆಯ ಶಕ್ತಿಯಿದೆ. ಹಿಂದೂ ಧರ್ಮವು ಹಿಂದಿನಂತಿಲ್ಲ. ಬಹಳಷ್ಟು ಆಕ್ರಮಣಗಳು ನಡೆಯುತ್ತಿದೆ. ದೂರದ ಊರಿನಲ್ಲಿ ನಡೆಯುವ ಘಟನೆಗಳು ಖಂಡನೆಗೆ ಸೀಮಿತವಾಗಿರದೆ ನಮ್ಮ ಮನೆಯಲ್ಲಿ ಬದಲಾವಣೆಗೆ ಅಪೇಕ್ಷಿಸಬೇಕು. ಯಾರ ಷರತ್ತು ಇಲ್ಲದೆಯೇ ನಮ್ಮಲ್ಲಿ ನಾವು ಬದಲಾವಣೆ ತರಬೇಕು. ಯುವ ಪೀಳಿಗೆಗೆ ವೀರಪರಂಪರೆಯ ಪಾಠಮಾಡಬೇಕು. ದೇಶದ ಉಳಿವು ಬೇರೆ ಯಾರ ಕೈಯಲ್ಲಿ ಇಲ್ಲ. ನಮ್ಮ ಕೈಯಲ್ಲಿದೆ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ ಧರ್ಮದ ಜೊತೆಗೆ ದೇಶ ಉಳಿಸುವ ಕಾರ್ಯವಾದಾಗ ಸನಾತನ ಧರ್ಮ ಉಳಿಯಲಿದೆ. ದೇಶವು ಆದರ್ಶ ಗುರುವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ರಾಜರ ಕಾಲದಲ್ಲಿ ರಕ್ಷಣೆ ಮಾಡಬೇಕಾದ ಆವಶ್ಯಕ ಇಲ್ಲ. ಈಗ ಧರ್ಮದ ಉಳಿವಿನ ಬಗ್ಗೆ ಎಲ್ಲರೂ ಯೋಚಿಸಬೇಕಾಗಿದೆ. ಜಾತ್ಯಾತೀತೆಯ ನೆಪದಲ್ಲಿ ಹಿಂದೂ ಧರ್ಮಕ್ಕೆ ಹೊಡೆತ ನೀಡುತ್ತಿದೆ. ಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ಸಿಗುತ್ತಿಲ್ಲ. ಹೀಗಾದರೆ ಹಿಂದೂ ಧರ್ಮದ ಆಚರಣೆ ಮುಂದಿನ‌ ಪೀಲಿಗೆಗೆ ಮುಂದುವರಿಯುವುದು ಅಸಾಧ್ಯವಾಗಿದ್ದು. ಇಂತಹ ಧಾರ್ಮಿಕ ಕಾರ್ಯಕ್ರಮ ಗಳ ಮೂಲಕ ತಿಳಿಸಬೇಕು. ಧರ್ಮವನ್ನು ಉಳಿಸಿಬೇಕಾದ ಹೊಣೆ ನಮ್ಮ ಮೇಲಿದೆ. ಧಾರ್ಮಿಕ ನಾಯಕನ್ನು ಬೆಂಬಲಿಸಬೇಕು ಎಂದರು.

ಸನ್ಮಾನ:
ಶಾಲಾ ಶಿಕ್ಷಣ ಇಲಾಖೆಯ 14ರ ವಯೋಮಾನದ ಕಬಡ್ಡಿಯಲ್ಲಿ ಸರ್ವಾಂಗೀಣ ಆಟಗಾರನಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಶಾಂಕ ವೀರಮಂಗಲರವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಕೃತಿಕ ಹಾಗೂ ಸಿಂಚನ ಪ್ರಾರ್ಥಿಸಿದರು. ಭವಿತ್ ಆನಾಜೆ ಸ್ವಾಗತಿಸಿದರು. ವಸಂತ ಗೌಡ ಸೇರಾಜೆ, ಲಕ್ಷ್ಮಣ ಗೌಡ ಡೆಬ್ಬೇಲಿ, ಉಷಾ ಜಗನ್ನಾಥ ರೈ, ಮಹೇಶ್ ರೈ ಆನಾಜೆ, ಅಶ್ವತ್ಥ ಸುವರ್ಣ ಅತಿಥಿಗಳಿಗೆ ಫಲ ತಾಂಬೂಲ ನೀಡಿ ಸ್ವಾಗತಿಸಿದರು. ಮಹಾವಿಷ್ಣು ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಹರೀಶ್ ಆನಾಜೆ ವರದಿ ಮಂಡಿಸಿದರು. ವಿಜೀತ್ ಅಭಿನಂದನಾ ಪತ್ರ ವಾಚಿಸಿದರು. ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ನಂತರ ಶ್ರೀಕೃಷ್ಣ ಕಲಾ ಕೇಂದ್ರ ವೀರಮಂಗಲ ಹಾಗೂ ಭಕ್ತಕೋಡಿ ಇದರ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ಹಾಗೂ ಶಾರದ ಕಲಾ ಆರ್ಟ್ಸ್ ಮಂಜೇಶ್ವರ ಇವರಿಂದ ಕಥೆ ಎಡ್ಡೆಂಡು ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.

LEAVE A REPLY

Please enter your comment!
Please enter your name here