ಕೆಯ್ಯೂರು: ಕೆಯ್ಯೂರು, ಮಾಡಾವು ವರ್ತಕ ಸಂಘ, ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಇದರ ಸಹಯೋಗದೊಂದಿಗೆ ಕೆಯ್ಯೂರು ಗ್ರಾಮ ಜನತೆಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಯ ವಿಶೇಷ ಶಿಬಿರವು ವಿಶ್ವಚೇತನ್ ಟವರ್ಸ್ ಕೆಯ್ಯೂರು ಮಾಡಾವು ಸಭಾಂಗಣದಲ್ಲಿ ಡಿ.1 ರಿಂದ 2ರ ತನಕ ನಡೆದು ಒಟ್ಟು 2 ದಿವಸಗಳ ಕಾಲ ಆಧಾರ್ ನೋಂದಣಿ ಮತ್ತು ತಿದ್ದುಪಡಿಯ ವಿಶೇಷ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಪುತ್ತೂರು ಭಾರತೀಯ ಅಂಚೆ ಇಲಾಖಾ ಪುತ್ತೂರು ವಿಭಾಗ ಅಧಿಕಾರಿ ಗುರುಪ್ರಸಾದ್ ನೀಡಿದರು.
ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮದಲ್ಲಿ ಕೆಯ್ಯೂರು ಗ್ರಾಮದ ಮಾಡಾವು, ದೇವಿನಗರ, ಕೆಯ್ಯೂರು, ದೇರ್ಲ, ಕಣಿಯಾರು, ಇಳಾಂತಜೆ, ಬೊಳಿಕಲ, ತೆಗ್ಗು, ಕಟ್ಟತ್ತಾರು ಪ್ರದೇಶಗಳಲ್ಲಿ 2 ದಿನಗಳಲ್ಲಿ 165 ಮಂದಿ ಪ್ರಯೋಜನ ಪಡೆದುಕೊಂಡರು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಕೆಯ್ಯೂರು ಮಾಡಾವು ವರ್ತಕ ಸಂಘದ ಅಧ್ಯಕ್ಷ ಅಬ್ದುಲ್ ರಝಕ್ ಎ. ವಹಿಸಿದ್ದು, ಕೆಯ್ಯೂರು ಗ್ರಾಮ.ಪಂ.ಅಧ್ಯಕ್ಷ ಶರತ್ ಕುಮಾರ್ ಮಾಡಾವು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆಯ್ಯೂರು ಮಾಡಾವು ವರ್ತಕ ಸಂಘದ ಸ್ಥಾಪಕಾಧ್ಯಕ್ಷ ಆನಂದ ರೈ ದೇವಿನಗರ, ಕರ್ನಾಟಕ ಬ್ಯಾಂಕ್ ಕೆಯ್ಯೂರು ಶಾಖೆಯ ಮ್ಯಾನೇಜರ್ ಸುಬ್ರಮಣ್ಯ ಎಂ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್, ಕೆಯ್ಯೂರು ಮಾಡಾವು ವರ್ತಕ ಸಂಘದ ಮಾಜಿ ಅದ್ಯಕ್ಷ ಸುಬ್ರಾಯ ಗೌಡ, ಪಿ.ವೈ.ಮೊಹಮ್ಮದ್, ಕೆಯ್ಯೂರು ಗ್ರಾ.ಪಂ.ಉಪಾದ್ಯಕ್ಷೆ ಸುಮಿತ್ರಾ ದಿವಾಕರ್ ಪಲ್ಲತ್ತಡ್ಕ, ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಉಪಸ್ಥಿತರಿದ್ದರು. ಕೆಯ್ಯೂರು, ಮಾಡಾವು ವರ್ತಕ ಸಂಘದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕೆಂಗುಡೇಲು ಸ್ವಾಗತಿಸಿ, ವಂದಿಸಿದರು. ವರ್ತಕ ಸಂಘದ ಕೋಶಾಧಿಕಾರಿ ಶೀನಪ್ಪ ರೈ ದೇವಿನಗರ, ಜೊತೆ ಕಾರ್ಯದರ್ಶಿ ಜಗದೀಶ ಪಿ.ಎಂ ಸಹಕರಿಸಿದರು.
ಕೆಯ್ಯೂರು ಮಾಡಾವು ವರ್ತಕ ಸಂಘ, ಭಾರತೀಯ ಅಂಚೆ ಇಲಾಖೆ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಸಮಾಜ ಸೇವೆ ಕಾರ್ಯಕ್ಕೆ ಶ್ಲಾಘನೀಯ, ಈಗಲೇ ಪಟ್ಟಣಗಳಲ್ಲಿ ನಡೆಯುವ ಕೆಲಸಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವುದರ ಬಗ್ಗೆ ಗ್ರಾಮೀಣ ಪ್ರದೇಶದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇಂತಹ ಸಮಾಜ ಸೇವೆ ಕಾರ್ಯಗಳು ಇನ್ನಷ್ಟು ನಡೆಯಲಿ ಎಂಬುವುದು ಜನರ ಆಶಯವಾಗಿದೆ.
-ಕೆಯ್ಯೂರು ಮಾಡಾವು ವರ್ತಕ ಸಂಘದ ಅದ್ಯಕ್ಷ ಅಬ್ದುಲ್ ರಝಕ್.ಎ
ಅಂಚೆ ಇಲಾಖಾ ಸಿಬ್ಬಂದಿಗಳಿಗೆ ಅಭಿನಂದನೆ:
ಕೆಯ್ಯೂರು ಗ್ರಾಮದಲ್ಲಿ ಎರಡು ದಿವಸಗಳ ಕಾಲ ನಡೆದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಅಧಿಕಾರಿ ಗುರುಪ್ರಸಾದ್ ಸಿಬ್ಬಂದಿಗಳಾದ ಯತಿರಾಜ್, ಸುಶ್ಮೀತಾ ಬನ್ನೂರು, ಅಭಿನಂದಿಸಲಾಯಿತು.