ಪುತ್ತೂರು: ಅರಿಯಡ್ಕ ಗ್ರಾಮದ ಎರ್ಕ ನಿವಾಸಿ ಕೃಷಿಕ ನಾರಾಯಣ ಬೆಳ್ಚಾಪಾಡ (82) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಡಿ.1 ರಂದು ನಿಧನರಾದರು. ಮೃತರು ಪತ್ನಿ ಪುಷ್ಪಾವತಿ, ಸಹೋದರ ಬಾಬು ಗುರುಸ್ವಾಮಿ, ಪುತ್ರರಾದ ಬಾಲಕೃಷ್ಣ ಕೋಡಿಂಬಳ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ವೈ, ರಾಧಾಕೃಷ್ಣ, ದಿನೇಶ್, ಪುತ್ರಿಯರಾದ ಗೀತಾ, ಸುಗಂಧಿ ಮತ್ತು ಶಶಿಕಲಾ ಮತ್ತು ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.