ಸೇವಾ ಮನೋಭಾವನೆಯ ಗೃಹ ರಕ್ಷಕರಿಗೊಂದು ಸಲಾಂ – ಡಿ.6 ವಿಶ್ವ ಗೃಹರಕ್ಷಕರ ದಿನಾಚರಣೆ

0

ಡಿ.6 ದೇಶದಾದ್ಯಂತ ವಿಶ್ವ ಗೃಹರಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಸಕ್ತ ದೇಶದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯಲ್ಲಿ ಸರಕಾರಿ ಭದ್ರತಾ ಪಡೆಗಳಿಗೆ ನೆರವಾಗುವ ದಿಶೆಯಲ್ಲಿ ಸರಕಾರದ ಗೃಹ ಇಲಾಖೆಯ ಅಧಿನದಲ್ಲಿರುವ ಖಾಕಿ ಸಮವಸ್ತ್ರಧಾರಿ ಸ್ವಯಂ ಸೇವಾ ಸಂಸ್ಥೆಯಾಗಿ ಅಪೂರ್ವ ಸೇವಾದಳವಾಗಿ ಗೃಹರಕ್ಷಕದಳ ಕಾರ್ಯನಿರ್ವಹಿಸುತ್ತಿದೆ.

ಸರಕಾರದ ಗೃಹ ಇಲಾಖೆಯ ಅಧಿನದಲ್ಲಿರುವ ಖಾಕಿ ಸಮವಸ್ತ್ರ ಧರಿಸಿದ ಒಂದು ಸ್ವಯಂಸೇವಾ ಸಂಸ್ಥೆ ‘ನಿಷ್ಕಾಮ ಸೇವಾ’ ಇದರ ಮೂಲ ಧ್ಯೇಯ ರಾಜಕೀಯ, ಕೋಮುವಾರು ಮತ್ತು ಭಾಷಾವಾರು ಪಂಗಡಗಳಿಂದ ದೂರವಿದ್ದು ತಮ್ಮ ನಿತ್ಯದ ಉದ್ಯೋಗದ ಮತ್ತು ದಿನಚರಿಯ ಜೊತೆ ದೇಶ ಸೇವೆಗೆ ಕೊಂಚ ಕಾಲವನ್ನು ಮೀಸಲಿಡುವ ರಾಷ್ಟೀಕರ ಸೇವಾದಳವಿದು ಶಾಂತಿ ಪಾಲನೆಯೇ ಇದರ ಮುಖ್ಯ ಧ್ಯೇಯ. ಶಾಂತಿ ಪಾಲನೆಯಲ್ಲಿ ಪೊಲೀಸರೊಂದಿಗೆ ಭುಜಕ್ಕೆ ಭುಜ ಕೊಟ್ಟು ಸೇವೆ ಸಲ್ಲಿಸುತ್ತಾರೆ.

ಗೃಹರಕ್ಷಕದಳದ ಸ್ಥಾಪನೆ: ಗೃಹರಕ್ಷಕದಳವು ಸ್ವಯು ಸೇವಾ ಸಂಸ್ಥೆಯಾಗಿ ಪ್ರಪಂಚದ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪ್ರಾರಂಭವಾಯಿತು. 1948 ಡಿಸೆಂಬರ್ ನಲ್ಲಿ ಗೃಹರಕ್ಷಕದಳವು ಮುಂಬೈಯಲ್ಲಿ ಸ್ಥಾಪನೆಯಾಯಿತು. ಸೈನ್ಯಪಡೆಯನ್ನು ಹಿಮ್ಮಟ್ಟಿಸಲು ಪೊಲೀಸ್, ಮಿಲಿಟರಿ ಪಡೆಯ ಪರ್ಯಾಯವಾಗಿ ಜನರೇ ದೇಶವನ್ನು ರಕ್ಷಿಸಲು ರೂಪಿಸಿದ ನಾಗರಿಕ ಪಡೆ [Local Defence Volllinter] ಸ್ಥಳೀಯ ರಕ್ಷಣಾ ಕಾರ್ಯಕರ್ತ ಎಂದು ಕರೆಯುತ್ತಾರೆ ಆಗಿನ ಮುಂಬೈ ಪ್ರಾಂತ್ಯ ಕೋಮುಗಲಭೆಗಳಿಂದ ತತ್ತರಿಸಿದಾಗ ಕೆಲವು ಮಂದಿ ಸಮಾಜ ಸೇವಕರು, ನಾಗರಿಕ ಪ್ರಜ್ಞೆಯುಳ್ಳ ಯುವಕರು ನಾಡಿನ ಶಾಂತಿಪಾಲನೆ, ಜನರ ಮಾನ-ಪ್ರಾಣ ಮತ್ತು ಆಸ್ತಿ-ಪಾಸ್ತಿ ರಕ್ಷಣೆಗೆ ಮುಂದೆ ಬಂದರು. ಈ ಸಮಯದಲ್ಲಿ ಆಗಿನ ಮುಂಬೈ ಸರಕಾರ ಇಂಥ ಸ್ವಯುಂ ಸೇವಾದಳದ ಅಗತ್ಯತೆಯನ್ನು ಮನಗಂಡು 1947ರಲ್ಲಿ ಮೊರಾರ್ಜಿ ದೇಸಾಯಿ ಗೃಹ ಮಂತ್ರಿ ಆಗಿದ್ದಾಗ ಈ ಸಂಬಂಧ ಶಾಸನ ಬದ್ಧ ಕಾಯ್ದೆ ರೂಪಿಸಿ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂಧರ್ಭದಲ್ಲಿ ರಕ್ಷಣೆ ನೀಡಲು ಗೃಹರಕ್ಷಕದಳವನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ಆರಂಭಿಸಿ ಖಾಕಿ ಸಮವಸ್ತ್ರಕ್ಕೆ ಮನ್ನಣೆ ನೀಡಲಾಯಿತು. ನಂತರ ಕಾಲಕ್ರಮೇಣ ಇತರ ರಾಜ್ಯಗಳು ಆ ಮಾರ್ಗವನ್ನು ಅನುಸರಿಸಿದವು. ಮೊದಲು ಪೊಲೀಸರ ಜೊತೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇದರ ಸೇವೆಯನ್ನು ಬಳಸಲಾಗುತ್ತಿತ್ತು. ಬರುಬರುತ್ತಾ ಗೃಹರಕ್ಷಕದಳ ಸೇವೆಯನ್ನು ರಾಷ್ಟ್ರದ ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲಿ ಪೋಲಿಸರು ಮತ್ತು ರಾಷ್ಟ್ರ ರಕ್ಷಣಾ ಪಡೆಗಳ ಜೊತೆ ಉಪಯೋಗಿಸಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಗೃಹರಕ್ಷಕದಳ ಸ್ಥಾಪನೆ: ಕರ್ನಾಟಕ ರಾಜ್ಯದಲ್ಲಿ ಗೃಹರಕ್ಷಕದಳ 1962 ರಲ್ಲಿ ಉದಯವಾಯಿತು. ಗೃಹರಕ್ಷಕ ಕಾಯ್ದೆ (1962 ರ ಕಾಯ್ದೆ ಸಂಖ್ಯೆ 35ರಲ್ಲಿ)ರಚಿತಗೊಂಡಿದೆ. ಕರ್ನಾಟಕದಲ್ಲಿ ಗೃಹರಕ್ಷಕರ ಕಾಯ್ದೆಯನ್ನು ರೂಪಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಯಿತು. ಗೃಹರಕ್ಷಕದಳದಲ್ಲಿ ವಿಶೇಷ ಸಾಧನೆ ಮಾಡಿದ ಗೃಹರಕ್ಷಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ, ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ನೀಡಿ ಸರ್ಕಾರ ಗೌರವಿಸುತ್ತಿದೆ.

ಗೃಹರಕ್ಷಕದಳ ಸೇರಲು ಯಾರು ಅರ್ಹರು: ಆಯಾ ಜಿಲ್ಲಾ ವಾಸಿಗಳು ಭಾರತೀಯ ನಾಗರಿಕರು ಈ ದಳವನ್ನು ಸೇರಬಹುದು. ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ವಯಸ್ಸು 19-50 ಅಂತರವಿರಬೇಕು. ನಿರ್ದಿಷ್ಟ ದೇಹದ ಅಳತೆಯೊಂದಿಗೆ ಕೂಡಿ ದೃಢಕಾಯವಾಗಿರಬೇಕು. ಓದು ಬರಹ ತಿಳಿದರಬೇಕು ಹಾಗೂ ಯಾವುದೇ ರೀತಿಯಿಂದಲೂ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರಬಾರದು. ಸಮಾಜ ಕಂಟಕ ವ್ಯಕ್ತಿಯಾಗಿರಬಾರದು. ಯಾವುದೇ ರೀತಿಯಲ್ಲೂ ಅಂಗಂಗಾ ನ್ಯೂನತೆಗಳು ಇರಬಾರದು. ವ್ಯಕ್ತಿಯ ಘನತೆ, ದೇಹ ದೃಢತೆ, ಆತನ ಸೇವೆ ಎಲ್ಲವನ್ನು ಪರಿಗಣಿಸಿ ಸರಕಾರ ವಿಧಿಸಿರುವ ನಿಯಮದಂತೆ ಆಯ್ಕೆ ಮಾಡಲಾಗುತ್ತದೆ.

ಗೃಹರಕ್ಷಕರ ಆಯ್ಕೆ ಪ್ರಕ್ರಿಯೆಗೆ ಇದೆ ಒಂದು ಸಮಿತಿ: ಗೃಹರಕ್ಷಕರ ಆಯ್ಕೆ ಪ್ರಕ್ರಿಯೆಯ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಅಧ್ಯಕ್ಷರು ಹಾಗೂ ಅಪರ ಜಿಲ್ಲಾಧಿಕಾರಿ, ಡಿ.ಡಿ.ಪಿ.ಐ.ಸದಸ್ಯರು ಹಾಗೂ ಜಿಲ್ಲಾ ಕಮಾಂಡೆಂಟ್ ಕಾರ್ಯದರ್ಶಿಯಾಗಿರುತ್ತಾರೆ.

ಗೃಹರಕ್ಷಕದಳ ಸೇವೆಯನ್ನು ಎಲ್ಲೆಲ್ಲಿ ಬಳಸಲಾಗುತ್ತದೆ:
1.ದೇಶದ ಅಂತರಿಕ ಭದ್ರತೆಯಲ್ಲಿ ಪೊಲೀಸರೊಂದಿಗೆ ಸೇರಿ ಸೇವೆ ಸಲ್ಲಿಸುವುದು. ಹಾಗೂ ಪೊಲೀಸರ ಜೊತೆ ಸಂಚಾರ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು
2. ಅಪರಾಧ ತಡೆಗಟ್ಟುವ ದೃಷ್ಟಿಯಿಂದ ಪೊಲೀಸರ ಜೊತೆಯಲ್ಲಿ ಗಸ್ತು ತಿರುಗುವುದು ಹಾಗೂ ಕಾರಾಗೃಹ (ಜೈಲು) ಇಲಾಖೆ ಜೊತೆ ಪಹರೆ ಕರ್ತವ್ಯ.
3. ನೆರೆಹಾವಳಿ, ಸುನಾಮಿ, ಭೂಕುಸಿತ, ಭೂಕಂಪ ಇತ್ಯಾದಿ ಪ್ರಾಕೃತಿಕ ವಿಕೋಪಗಳು ನಡೆದಾಗ ಜಿಲ್ಲಾ ವಿಪತ್ತು ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಜೊತೆ ಸೇರಿ ಸೇವೆ ಸಲ್ಲಿಸುವುದು
4.1961 ರ ಕರ್ನಾಟಕ ಮದ್ಯಪಾನ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲು ಅಬಕಾರಿ ಇಲಾಖೆಯ ಕಳ್ಳಭಟ್ಟಿ ಸಾರಾಯಿ ಮತ್ತು ಅನಧಿಕೃತ ಮದ್ಯ ಮಾರಟ ನಿಯಂತ್ರಣಕ್ಕೆ ಸಂಬಂಧ ಪಟ್ಟ ಇಲಾಖೆಯ ಜೊತೆ ಕೈ ಜೋಡಿಸಿವುದು.
5. ಪ್ರತಿಭಟನೆ, ಮುಷ್ಕರ, ವಿವಾದಾತ್ಮಕವಲ್ಲದ ಪ್ರತಿಭಟನೆ, ಯಾವುದೇ ಸಂಘಟನೆಗಳು ನಡೆಸುವ ಕಾರ್ಯಕ್ರಮಕ್ಕೆ ಗೃಹರಕ್ಷಕರನ್ನು ಬಳಸಬಹುದು. ಆದರೆ ಇದಕ್ಕೆ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಗೃಹರಕ್ಷಕದಳದ ಮಾಹಾಸಮಾದೇಷ್ಠರು ಇವರ ಪೂರ್ವಾನುಮತಿ ಕಡ್ಡಾಯ

ದ.ಕ ಜಿಲ್ಲೆಯಲ್ಲಿ ಜಿಲ್ಲಾ ಗೃಹರಕ್ಷಕದಳ ಸರಕಾರಿ ಕಟ್ಟಡ ಮಂಗಳೂರಿನ ಮೇರಿಹಿಲ್‌ನಲ್ಲಿದ್ದು, ಜಿಲ್ಲಾ ಗೃಹರಕ್ಷಕದಳ ಕಮಾಂಡೆಂಟ್ ಆಗಿ ಡಾ.ಮುರಲೀ ಮೋಹನ್ ಚೂಂತಾರು ಸೇವೆ ಸಲ್ಲಿಸುತ್ತಿದ್ದಾರೆ ಜಿಲ್ಲೆಯಲ್ಲಿ ಒಟ್ಟು 15 ಘಟಕ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಡಿಸೆಂಬರ್ 6ನ್ನು ದೇಶದಾದ್ಯಂತ ಅಖಿಲ ಭಾರತ ಗೃಹರಕ್ಷಕರ ಆಚರಿಸರಿಸಲಾಗುತ್ತದೆ ಈ ಸಂದರ್ಭದಲ್ಲಿ ಸರಕಾರದ ನಿರ್ದೇಶನದಂತೆ ಗೃಹರಕ್ಷಕದಳದ ದಿನಾಚರಣೆಯನ್ನು ಆಚರಿಸುತ್ತಾರೆ

ಏನೇ ಇರಲಿ ಸಮಾಜದಲ್ಲಿ ಯಾವುದೇ ಪ್ರತಿಫಲ ಬಯಸದೇ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ಧನ್ಯವಾದಗಳನ್ನು ಸಲ್ಲಿಸೋಣ.

ಹೋಂ ಗಾರ್ಡ್
ದಿನೇಶ್ ಬೊಳ್ಳಾರ್
 ಬರಹ: ದಿನೇಶ್ ಬೊಳ್ಳಾರ್
     ಪ್ರಭಾರ ಘಟಕಾಧಿಕಾರಿ
     ಗೃಹರಕ್ಷಕದಳ ಉಪ್ಪಿನಂಗಡಿ ಘಟಕ

LEAVE A REPLY

Please enter your comment!
Please enter your name here