ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ “ಶಾಲಾ ವಾರ್ಷಿಕೋತ್ಸವ”ದ ಸಂಭ್ರಮ

0

ಪುತ್ತೂರು: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಭಾವ ಬಹಳ ಮಹತ್ವದ್ದಾಗಿರುತ್ತದೆ. ವಿವೇಕಾನಂದ ಸೆಂಟ್ರಲ್ ಸ್ಕೂಲ್ ಹಂತ ಹಂತವಾಗಿ ಬೆಳೆಯುತ್ತಿದೆ. ಉತ್ತಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳನ್ನು ಹೊಂದಿರುವ ಈ ಸಂಸ್ಥೆಗೆ ಮಾತೃಸಂಸ್ಥೆಯಿಂದ ಯಾವತ್ತೂ ಸಹಕಾರವಿದೆ ಎಂಬುದಾಗಿ, ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ಡಿ.2ರಂದು ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಎನ್ನುತ್ತಾ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಏನಪೋಯ ರಿಸರ್ಚ್ ಸೆಂಟರ್ ನ ನಿರ್ದೇಶಕರಾದ ಡಾ.ರೇಖಾ ಪಿ.ಡಿ ಅವರು, ಜೀವನವು ಯಾವಾಗಲೂ ಸುಲಭದ ಹಾದಿಯಲ್ಲ. ಪುಟ್ಟ ಹೆಜ್ಜೆಗಳೊಂದಿಗೆ ದೊಡ್ಡ ಕನಸನ್ನು ಕಾಣುತ್ತಾ ಪಯಣಿಸಬೇಕು. ಇಂದು ಕಂಡ ಕನಸಿಂದ ಮಾತ್ರವೇ ಮುಂದೆ ಉತ್ತಮ ಸಾಧನೆಗೈಯಲು ಸಾಧ್ಯ. ಸಿಕ್ಕಿದ ಅವಕಾಶಗಳನ್ನು ಬಾಚಿಕೊಳ್ಳಬೇಕು ಎಂಬುದಾಗಿ ತಮ್ಮ ಜೀವನದ ಘಟನೆಗಳ ಉದಾಹರಣೆಗಳೊಂದಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆ ಕಾರ್ಯಕ್ರಮಕ್ಕೆ ಶುಭಕೋರಿದರು. ಶಾಲಾ ಸಂಚಾಲಕ ಭರತ್ ಪೈ ಯೋಗ , ಧ್ಯಾನ ಮತ್ತು ಧಾರ್ಮಿಕ ಶಿಕ್ಷಣ ಇತ್ಯಾದಿಗಳು ಮಕ್ಕಳಿಗೆ ಎಳವೆಯಲ್ಲಿಯೇ ನಾಯಕತ್ವ ಗುಣ ಮತ್ತು ಸಾಮಾಜಿಕವಾಗಿ ಬೆರೆಯುವ ಕಲೆಯನ್ನು ಕಲಿಸುತ್ತವೆ. ನಮ್ಮ ಶಾಲೆಯು ಪೋಷಕರಿಂದ, ಸಹೃದಯಿ ದಾನಿಗಳಿಂದ ಬೆಳವಣಿಗೆ ಹೊಂದುತ್ತಲಿದೆ ಎಂದು ಕೃತಜ್ಞತಾಪೂರ್ವಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ, ಶಾಲೆಯ ಮಹಾದಾನಿಗಳನ್ನು ನೆನಪಿಸಿ ಗೌರವಿಸಲಾಯಿತು.

ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಯಿತು ಹಾಗೂ ತರಗತಿವಾರು ಶೈಕ್ಷಣಿಕ ವಿಭಾಗದಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿ ವತಿಯಿಂದ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರನ್ನು ಗುರುತಿಸಿ ಗೌರವಿಸಲಾಯಿತು.

ಶಾಲಾ ಪ್ರಾಂಶುಪಾಲೆ ಸಿಂಧೂ.ವಿ.ಜಿ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ಉಪಪ್ರಾಂಶುಪಾಲೆ ಹೇಮಾವತಿ ಎಮ್. ಎಸ್ ಅಭ್ಯಾಗತರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಪೋಷಕ ಸಂಘದ ಅಧ್ಯಕ್ಷೆ ಅಕ್ಷತಾ ಶೆಣೈ, ವಿದ್ಯಾರ್ಥಿ ನಾಯಕ ಚಿರಾಗ್ ಎಸ್. ಗೌಡ, ವಿದ್ಯಾರ್ಥಿನಿ ನಾಯಕಿ ಚಿನ್ಮಯಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಸಾಯಿಗೀತಾ ಮತ್ತು ಜ್ಯೋತಿ ಕುಮಾರಿ ಅವರು ನಿರೂಪಿಸಿದರು. ಅಶ್ವಿನಿ ಮಲ್ಯ ಅವರು ವಂದಿಸಿದರು.

ಸಭಾ ಕಾರ್ಯಕ್ರಮದ ತರುವಾಯ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಂದ, “ಭೂಮಿಯನ್ನು ಉಳಿಸಿ, ಭವಿಷ್ಯವನ್ನು ಉಳಿಸಿ” ಎಂಬ ಥೀಮಿನ ಮೇಲೆ ನಡೆದ ನಾಟಕ, ಹಾಡು, ತರಹೇವಾರಿ ನೃತ್ಯಗಳನ್ನೊಳಗೊಂಡ ವೈಭವೋಪೇತ ಸಾಂಸ್ಕೃತಿಕ ಕಾರ್ಯಕ್ರಮಗಳು ವಾರ್ಷಿಕೋತ್ಸವಕ್ಕೆ ಅಪೂರ್ವ ಕಳೆಯನ್ನು ನೀಡಿದವು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರೆಲ್ಲರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ನೆರವೇರಿಸಿರುವುದು ವಿಶೇಷ. ಶಿಕ್ಷಕ-ಶಿಕ್ಷಕೇತರ ಬಂಧುಗಳ ತುಂಬು ಉತ್ಸಾಹ, ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here