ನಾಳೆ(ಡಿ.7): ವಿದ್ಯುತ್ ನಿಲುಗಡೆ

0

ಪುತ್ತೂರು: ರಸ್ತೆ ಅಗಲೀಕರಣಕ್ಕಾಗಿ ವಿದ್ಯುತ್ ಲೈನ್ ಸ್ಥಳಾಂತರ ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ, ವಾಟರ್ ಸಪ್ಲೈ ಮತ್ತು ಉಪ್ಪಿನಂಗಡಿ ಎಕ್ಸ್‌ಪ್ರೆಸ್ ಹಾಗೂ 110/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಫೀಡರ್‌ನಲ್ಲಿ ಡಿ.7(ಗುರುವಾರ) ರಂದು ಪೂರ್ವಾಹ್ನ ಗಂಟೆ 10:00ರಿಂದ ಅಪರಾಹ್ನ 5:00ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಮತ್ತು 110/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಹಾರಾಡಿ, ಚಿಕ್ಕಪುತ್ತೂರು, ನೆಲ್ಲಿಕಟ್ಟೆ, ಎಳ್ಮುಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರ, ಕಲ್ಲಾರೆ, ಕೂರ್ನಡ್ಕ, ದರ್ಬೆ, ಮರೀಲು, ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here