ಬೆಂಗಳೂರು: ಕರ್ನಾಟಕ ಸ್ಟೈಲ್ ಐಕಾನ್-2023 – ಪುತ್ತೂರಿನ ಡೊನಾಲ್ಡ್ ನೊರೋನ್ಹಾರವರಿಗೆ “ಬೆಸ್ಟ್ ಟ್ರಾನ್ಸ್ಫಾರ್ಮೇಶನ್” ಟೈಟಲ್

0

ಪುತ್ತೂರು: ಬೆಂಗಳೂರಿನ ಹೋಟೆಲ್ ರೇಡಿಸನ್ ಬ್ಲೂ ಆಟ್ರಿಯಾದಲ್ಲಿ ನಿಶಿತಾ ಸುವರ್ಣ ಇಮೇಜ್ ಕನ್ಸಲ್ಟೆಂಟ್ ಆಯೋಜಿಸಿದ್ದ ಮಿಸ್ಟರ್, ಮಿಸ್ಸ್ ಹಾಗೂ ಮಿಸಸ್ ಕರ್ನಾಟಕ ಸ್ಟೈಲ್ ಐಕಾನ್-2023 ಸೀಸನ್ 4 ರ ಸ್ಫರ್ಧೆಯಲ್ಲಿ ಪೆರ್ನೆ ನಾಗಮೂಲೆಯ ಡೊನಾಲ್ಡ್ ನೊರೋನ್ಹಾರವರಿಗೆ “ಬೆಸ್ಟ್ ಟ್ರಾನ್ಸ್ಫಾರ್ಮೇಶನ್” ಸಬ್ ಟೈಟಲ್ ಗೆ ಭಾಜನರಾಗಿದ್ದಾರೆ.



ಡೊನಾಲ್ಡ್ ನೊರೋನ್ಹಾರವರು ಮಂಗಳೂರಿನ ಪದುವಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು, ಕೆನರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದರು. ಮಾತ್ರವಲ್ಲ 2015ರಲ್ಲಿ ಅಲ್ ಕಾಲೇಜು ವರ್ಕಿಂಗ್ ಪ್ರೆಸಿಡೆಂಟ್ ಆಗಿ ಕರ್ತವ್ಯ ನಿರ್ವಹಿದ್ದರು. ಅಲ್ಲದೆ ಗಿಲ್ಗಿಸ್ಟಿಕ್ ಫ್ಯಾಮಿಲಿ, ಮರ್ಲ್ ಗುದ್ದೋಲಿ ಎಂಬ ತುಳು ಹಾಗೂ ಕನ್ನಡ ವೆಬ್ ಸೀರೀಸ್ ನಲ್ಲಿ ಕೆಲಸ ನಿರ್ವಹಿಸಿರುತ್ತಾರೆ. ಪೆರ್ನೆ ನಾಗಮೂಲೆ ಡೆನ್ನಿಸ್ ನೊರೋನ್ಹಾ ಹಾಗೂ ಲಿಲ್ಲಿ ನೊರೋನ್ಹಾರವರ ಪುತ್ರರಾಗಿರುವ ಡೊನಾಲ್ಡ್ ನೊರೋನ್ಹಾರವರು ಪ್ರಸ್ತುತ ಮಂಗಳೂರಿನಲ್ಲಿರುವ ಟಾಟಾ ಎ.ಐ.ಜಿ ಕಂಪೆನಿಯು ಸಂಯೋಜಿತ ಆಕ್ಸಿಸ್ ಬ್ಯಾಂಕಿನಲ್ಲಿ ಕ್ಲಸ್ಟರ್ ರಿಲೇಶನ್ ಶಿಪ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here