ದ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯಿಂದ ಬಡ ವಿದ್ಯಾವಂತ ಅಭ್ಯರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ

0

ಪುತ್ತೂರು: ದ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ, ಕಡಬ ಈ ಸಂಸ್ಥೆಯು ಕಡಬ ಸುತ್ತ ಮುತ್ತಲಿನ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ 35 ವರ್ಷದೊಳಗಿನ ಬಡ ವಿದ್ಯಾವಂತ, ಮಹಿಳೆ ಹಾಗೂ ಪುರುಷ ಅಭ್ಯರ್ಥಿಗಳಿಗೆ ಉದ್ಯೋಗ ಸೃಷ್ಟಿಸುವಲ್ಲಿ ನೆರವಾಗುವ ಕೌಶಲ್ಯ / ಕಂಪ್ಯೂಟರ್ ಕೋರ್ಸುಗಳನ್ನು ಉಚಿತವಾಗಿ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಿದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ.1,20,೦೦೦/- (ರೂಪಾಯಿ ಒಂದು ಲಕ್ಷದ ಇಪ್ಪತ್ತೈದು ಸಾವಿರ)ಕ್ಕಿಂತ ಮೀರಿರಬಾರದು. ತರಬೇತಿಯು 4 ರಿಂದ 5 ತಿಂಗಳದಾಗಿದ್ದು, ಸಂಪೂರ್ಣ ಉಚಿತವಾಗಿದೆ. ತರಬೇತಿ ಮುಗಿದ ಬಳಿಕ ಉದ್ಯೋಗ ಮಾರ್ಗದರ್ಶನ ನೀಡಲಾಗುವುದು. ಇದನ್ನು ಎಸ್‌ಎಸ್‌ಎಲ್‌ಸಿ/ಪಿಯುಸಿ/ಡಿಗ್ರಿ ಪಾಸ್/ಫೈಲ್ ಆಗಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸದುಪಯೋಗ ಪಡೆದುಕೊಳ್ಳಬಹುದು. ಡಿ.22ರಂದು ಅರ್ಜಿ ಹಾಕಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ Website: www.thercss.com, 8618495889, 6360880696 ಸಂಪರ್ಕಿಸಬಹುದು ಎಂದು ದ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ನಿರ್ದೇಶಕರು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here