ಪುತ್ತೂರು: ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ನೆಲೆನಿಂತು ಭಕ್ತರನ್ನು ಸಲಹುತ್ತಿರುವ ವಿಶೇಷ ಕಾರಣಿಕತೆಯನ್ನು ಹೊಂದಿರುವ ಶ್ರೀ ಮಲರಾಯ ದೈವಸ್ಥಾನದ ಶ್ರೀ ಮಲರಾಯ ಮತ್ತು ಮಲರಾಯ ಬಂಟ ಮಹಿಶಾಂತಯ ದೈವಗಳ ಅದ್ಧೂರಿ ನೇಮೋತ್ಸವವು ಡಿ.5ರಂದು ರಾತ್ರಿ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ರಾತ್ರಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ 9ರಿಂದ ಕಳಲ್ತಾ ಗುಳಿಗ ನೇಮೋತ್ಸವ, ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪ್ರಾರ್ಥನೆ, ಬಡಿಸುವ ಕಾರ್ಯಕ್ರಮ ನಡೆಯಿತು. ಆ ಬಳಿಕ ಶ್ರೀ ಮಲರಾಯ ಮತ್ತು ಮಲರಾಯ ಬಂಟ ಮಹಿಶಾಂತಯ ದೈವಗಳ ಅದ್ಧೂರಿ ನೇಮೋತ್ಸವ ಜರಗಿತು. ಡಿ.6ರಂದು ಸಂಜೆ 7ರಿಂದ ಇತರ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಸಾವಿರಾರು ಭಕ್ತಾಧಿಗಳು ನೇಮೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೈವದ ಗಂಧ ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು. ಕೂರೇಲು ಶ್ರೀ ದೈವಸ್ಥಾನದ ಆಡಳಿತ ಮುಖ್ಯಸ್ಥ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳನ್ನು ಸ್ವಾಗತಿಸಿ, ದೈವದ ಪ್ರಸಾದ ನೀಡಿ ಸತ್ಕರಿಸಿದರು. ಹರ್ಷಿತ್ ಕೂರೇಲು ಸಹಕರಿಸಿದ್ದರು. ಸರಸ್ವತಿ ಸಂಜೀವ ಪೂಜಾರಿ ಸಹಿತ ಕೂರೇಲು ಕುಟುಂಬಸ್ಥರು, ಗ್ರಾಮದ ಭಕ್ತಾಧಿಗಳು ಉಪಸ್ಥಿತರಿದ್ದರು.
ವೈಭವದ ನೇಮೋತ್ಸವ
ಭಕ್ತಿಯಿಂದ ನಂಬಿದ ಭಕ್ತರ ಕೋರಿಕೆಗಳನ್ನು ಈಡೇರಿಸುವ ವಿಶೇಷ ಕಾರಣಿಕ ಶಕ್ತಿ ಹೊಂದಿರುವ ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಮಲರಾಯ ದೈವ, ಮಲರಾಯ ಬಂಟ ಮಹಿಶಂತಾಯ ದೈವ, ಕಳಲ್ತಾ ಗುಳಿಗ ದೈವಗಳಿಗೆ ಅದ್ಧೂರಿ ನೇಮೋತ್ಸವ ಜರಗಿತು. ಪ್ರತಿವರ್ಷದಂತೆ ರಾತ್ರಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ವಿಶೇಷವಾಗಿ ಕೂರೇಲು ಕುಟುಂಬಸ್ಥರು ಸೇರಿದಂತೆ ಊರಪರವೂರ ನೂರಾರು ಭಕ್ತಾಧಿಗಳು ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.