ಸುದಾನ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

0

ಕ್ರೀಡಾಪಟುಗಳಿಗೆ ಪುತ್ತೂರಿನ ಕ್ರೀಡಾಪಟು ಚರೀಶ್ಮಾ ಮೇಲ್ಪಂಕ್ತಿಯಾಗಿದ್ದಾರೆ-ಸುಂದರ ಗೌಡ

ಪುತ್ತೂರು: ಸಾಧನೆಗೆ ಕಲಿಕೆ, ಬಡತನ ಅಡ್ಡಿಯಾಗುವುದಿಲ್ಲ. ನಿರಂತರ ಶ್ರಮ, ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸಾಧಿಸಬಲ್ಲೆ ಎಂಬ ಛಲದೊಂದಿಗೆ ಮುನ್ನುಗ್ಗಿದಾಗ ಯಶಸ್ಸು ಕೈಗೂಡುವುದು ಎಂಬುದಕ್ಕೆ ಪುತ್ತೂರಿನ ಹುಡುಗಿ, ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಅದ್ವಿತೀಯ ಸಾಧನೆಗೈದ ಚರೀಶ್ಮಾರವರು ಮೇಲ್ಪಂಕ್ತಿಯಾಗಿದ್ದಾರೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಹೇಳಿದರು.


ದ.7 ರಂದು ನೆಹರುನಗರದ ಸುದಾನ ವಿದ್ಯಾಸಂಸ್ಥೆಯಲ್ಲಿ ಜರಗಿದ ಶಾಲೆಯ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಾಂತಿಯ ದ್ಯೋತಕವಾದ ಪಾರಿವಾಳವನ್ನು ಆಗಸಕ್ಕೆ ಹಾರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಸುದಾನ ಶಾಲೆಯು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ, ಕಾರ್ಯಕ್ರಮಗಳು ಬಹಳ ಶಿಸ್ತುಬದ್ಧವಾಗಿ, ಎಲ್ಲರ ಒಗ್ಗೂಡುವಿಕೆಯಿಂದ ನಡೆಯುತ್ತಾ ಎಲ್ಲರಿಗೂ ಮಾದರಿ ಎನಿಸಿದೆ. ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ನಿಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಿಸುವುದಕ್ಕೆ ಸೂಕ್ತ ವೇದಿಕೆಯಾಗಿದೆ. ಜೀವನದಲ್ಲಿ ಸೋತಾಗ ದೃತಿಗೆಡುವ ಬದಲು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸಾಧಿಸುತ್ತೇನೆ ಎಂಬ ಛಲದೊಂದಿಗೆ ಮುಂದಡಿಯಿಡಬೇಕು. ಇದನ್ನು ವಿದ್ಯಾರ್ಥಿ ದಿಸೆಯೆಂದಲೇ ಆರಂಭಿಸಬೇಕು ಎಂದರು.


ಬಹುಮಾನ ವಿತರಣೆ:
ಶಾಲೆಯು ಏರ್ಪಡಿಸಿದ ಹಗ್ಗಜಗ್ಗಾಟ ಹಾಗೂ ಲಗೋರಿ ಪಂದ್ಯಾಟದಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಶಾಲೆಯ ಸಂಚಾಲಕರಾದ ರೆ|ವಿಜಯ ಹಾರ್ವಿನ್ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜ್, ಸುದಾನ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಆಸ್ಕರ್ ಆನಂದ್, ಕ್ರೀಡಾ ಮಂತ್ರಿ ನಿಹಾರಿಕಾ ಎನ್, ರೈ, ದೈಹಿಕ ಶಿಕ್ಷಣ ಶಿಕ್ಷಕ ಪುಷ್ಪರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ತಂಡ ಪ್ರಾರ್ಥಿಸಿದರು. ಶಿಕ್ಷಕಿ ಲೀಲಾವತಿ ಸ್ವಾಗತಿಸಿದರು. ಕ್ರೀಡಾ ಮಂತ್ರಿ ಸೃಜನ್ ಎಸ್.ಜಿರವರು ಪ್ರಮಾಣವಚನವನ್ನು ಬೋಧಿಸಿ ವಂದಿಸಿದರು. ಶಿಕ್ಷಕಿಯರಾದ ಜಯಸ್ಮಿತಾ ಹಾಗೂ ಹರ್ಷಿತಾರವರು ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಪಥಸಂಚಲನ…
ವಿದ್ಯಾಸಂಸ್ಥೆಯ ಸ್ಫೂರ್ತಿ, ದೀಪ್ತಿ, ಕೀರ್ತಿ, ಜ್ಯೋತಿ ತಂಡಗಳಲ್ಲಿನ ವಿದ್ಯಾರ್ಥಿಗಳು ಶಾಲಾ ಬ್ಯಾಂಡ್ ವಾದ್ಯದೊಂದಿಗೆ ಕ್ರೀಡಾಂಗಣಕ್ಕೆ ಶಿಸ್ತುಬದ್ಧವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಗಿದ್ದು ಕಾರ್ಯಕ್ರಮದ ಮುಖ್ಯ ಅತಿಥಿ ದೈಹಿಕ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಗೌರವ ವಂದನೆಯನ್ನು ಸ್ವೀಕರಿಸಿದರು.

ಕ್ರೀಡಾಜ್ಯೋತಿ…
ಕ್ರೀಡಾಪಟುಗಳಾದ ಅಕ್ಷತ್ ಕುಮಾರ್, ವಿಖೇಶ್ ರೈ, ಗಗನ್ ಎ.ಜಿ, ಸಂಭ್ರಮ್ ಕೆ.ಶೆಟ್ಟಿ, ಶೇಖ್ ಮಹಮದ್ ನಿಹಾಲ್, ಅಕ್ಷಯ್, ತೇಜಸ್ ಎಸ್.ಕೆ, ಜೆಸಿತ್ ಸಿ.ಎಚ್, ಹನಿಕಾ, ನಿಕೋಲಸ್ ಮಥಾಯಿಸ್ ರವರನ್ನೊಳಗೊಂಡ ತಂಡವು ಕ್ರೀಡಾಜ್ಯೋತಿಯೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿ, ಕ್ರೀಡಾಂಗಣಕ್ಕೆ ಪ್ರದಕ್ಷಿಣೆ ಹಾಕುತ್ತಾ ಕ್ರೀಡಾಜ್ಯೋತಿಯನ್ನು ಮುಖ್ಯ ಅತಿಥಿ ಸುಂದರ ಗೌಡರವರಿಗೆ ಹಸ್ತಾಂತರಿಸಿದರು. ಬಳಿಕ ಸುಂದರ ಗೌಡರವರು ಕ್ರೀಡಾಜ್ಯೋತಿಯನ್ನು ಮೇಲಕ್ಕೆತ್ತಿ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು. ವೇದಿಕೆ ಬದಿಯಲ್ಲಿ ನೇತಾಡಿಸಲಾಗಿದ್ದ ಅಗ್ನಿ ಅಸ್ತ್ರವನ್ನು ಉರಿಸಿದ್ದು ಬಳಿಕ ಆ ಅಗ್ನಿಯ ಅಸ್ತ್ರವು ಸರಿಗೆಯ ಮೂಲಕ ಚಲಿಸುತ್ತಾ ಕ್ರೀಡಾಂಗಣದ ಬಳಿ ಇರಿಸಲಾಗಿದ್ದ ಅಗ್ನಿ ಪೀಠದಲ್ಲಿ ಅದನ್ನು ಉರಿಸಲಾಯಿತು.

LEAVE A REPLY

Please enter your comment!
Please enter your name here