ಗೋಳಿತ್ತಡಿ: ಶ್ರೀ ದುರ್ಗಾ ಎಂಟರ್‌ಪ್ರೈಸಸ್ ಶಾಮಿಯಾನ, ಸರ್ವೀಸಸ್ ಶುಭಾರಂಭ

0

ರಾಮಕುಂಜ: ಶ್ರೀ ದುರ್ಗಾ ಎಂಟರ್‌ಪ್ರೈಸಸ್ ಶಾಮಿಯಾನ ಮತ್ತು ಸರ್ವೀಸಸ್ ರಾಮಕುಂಜ ಗ್ರಾಮದ ಗೋಳಿತ್ತಡಿ ಜನನಿ ಎನ್‌ಕ್ಲೇವ್ ಕಾಂಪ್ಲೆಕ್ಸ್‌ನಲ್ಲಿ ಡಿ.6ರಂದು ಶುಭಾರಂಭಗೊಂಡಿತು.


ಜನನಿ ಎನ್‌ಕ್ಲೇವ್ ಕಾಂಪ್ಲೆಕ್ಸ್ ಮಾಲಕರೂ ಆದ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿಯೇ ಜನರಿಗೆ ಎಲ್ಲಾ ಸೌಲಭ್ಯ ದೊರೆತಲ್ಲಿ ಪೇಟೆಗೆ ಹೋಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಗೋಳಿತ್ತಡಿಯಲ್ಲಿ ಆರಂಭಗೊಂಡಿರುವ ಈ ಉದ್ಯಮದ ಯಶಸ್ವಿಗೆ ನಾವೂ ಕೈ ಜೋಡಿಸೋಣ. ಉದ್ದಿಮೆದಾರರೂ ಸಮಾಜಮುಖಿಯಾಗಿ ಜೋಡಿಸಿಕೊಳ್ಳಬೇಕೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಕೆ.,ರವರು ಮಾತನಾಡಿ, ಗೋಳಿತ್ತಡಿ ಪರಿಸರಕ್ಕೆ ಶಾಮಿಯಾನ ಮತ್ತು ಸರ್ವೀಸಸ್ ಅಗತ್ಯವಾಗಿತ್ತು. ಇದನ್ನು ಶ್ರೀ ದುರ್ಗಾ ಎಂಟರ್‌ಪ್ರೈಸಸ್‌ನವರು ನೀಗಿಸಿದ್ದಾರೆ. ನಾವು ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿ ಮಾಡಬೇಕು. ಸ್ವ ಉದ್ಯೋಗಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಈ ನಿಟ್ಟಿನಲ್ಲಿ ಆರಂಭಗೊಂಡಿರುವ ಶ್ರೀ ದುರ್ಗಾ ಎಂಟರ್‌ಪ್ರೈಸಸ್ ಶಾಮಿಯಾನ ಮತ್ತು ಸರ್ವೀಸಸ್ ಈ ಊರಿನ ಜನರಿಗೆ ನೆರಳಾಗಿ ಬೆಳೆಯಲಿ ಎಂದರು.

ಅತಿಥಿಗಳಾಗಿದ್ದ ಅಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ಕಡಬ ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಹಳೆನೇರೆಂಕಿ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಬಿ., ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಕೊಯಿಲ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಕೆ.ಜನಾರ್ದನ ಪೂಜಾರಿ ಕದ್ರ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಭುವನೇಶ್ ಜಿ., ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಂಸ್ಥೆ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು.


ಗೇರುಕಟ್ಟೆ ಎಸ್.ಆರ್ ಶಾಮಿಯಾನ ಮತ್ತು ಸರ್ವೀಸಸ್ ಮಾಲಕ ಯೋಗೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲಕರಾದ ಪದ್ಮಯ ಪೂಜಾರಿ, ನವೀನ್, ರಮ್ಯ ನವೀನ್, ಸುಧಾಕರ, ವಸಂತ ಬೆಳ್ಳಿಪ್ಪಾಡಿ, ರತ್ನ, ರಘು, ದಿವಾಕರ, ಪ್ರಸಾದ್ ಗೇರುಕಟ್ಟೆ, ಉಷಾ ಬೆಳ್ಳಿಪ್ಪಾಡಿ ಅತಿಥಿಗಳಿಗೆ ಶಾಲು ಹಾಕಿ, ಹೂ ನೀಡಿ ಗೌರವಿಸಿದರು. ರಾಮಕುಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಾಲತಿ ಕದ್ರ, ಸವಿತಾ ಕದ್ರ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಕೆ., ನಿವೃತ್ತ ಮುಖ್ಯ ಶಿಕ್ಷಕ ಚಂದ್ರಹಾಸ ರೈ, ಸದಾನಂದ ಆಚಾರ್ಯ ಶಾರದಾನಗರ, ಮಹಾಬಲ ರೈ ರಾಮಜಾಲು, ಸಚಿನ್ ಪಾಲೇರಿ, ಯಶೋಧಾ ಕೆ.ಕದ್ರ, ಪುಷ್ಪಾ ಎಸ್ ರೈ., ದೇವಕಿ ಕದ್ರ, ಲಲಿತಾ ಕದ್ರ, ಶೀನಪ್ಪ ಗೌಡ ಬರಮೇಲು, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಶಿಕ್ಷಕರಾದ ಗಾಯತ್ರಿ ಯು.ಎನ್, ರಾಧಾಕೃಷ್ಣ, ಹರೀಶ್, ಕಿಶೋರ್, ವಸಂತ್, ಹರೀಶ್, ಗೋಪಾಲ್, ಜಯೇಂದ್ರ, ಶ್ರೀಮತಿ ಸರಿತಾ, ಶ್ರೀಮತಿ ಸಂಚಿತಾ, ಪ್ರತೀಕ್ಷಾ, ಶ್ರೀಮತಿ ಸುಮಲತಾ, ಶ್ರೀಮತಿ ಸುಮನಾ, ಶ್ರೀಮತಿ ಮಲ್ಲಿಕಾ, ಶ್ರೀಮತಿ ಶಶಿಕಲಾ, ಶ್ರೀಮತಿ ಪವಿತ್ರ, ಶ್ರೀಮತಿ ಕಾವ್ಯ, ಶ್ರೀಮತಿ ಸುಜಾ, ಸಿಬ್ಬಂದಿಗಳಾದ ಸುಪ್ರಿಯಾ, ಕವಿತಾ, ಪೂರ್ಣಿಮ, ವಿಮಲ, ಪುಷ್ಪಾವತಿ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಸಚಿನ್ ಸ್ವಾಗತಿಸಿ ನಿರೂಪಿಸಿದರು. ರಮ್ಯ ನವೀನ್ ಪ್ರಾರ್ಥಿಸಿದರು.


ನಮ್ಮನ್ನು ಪ್ರೋತ್ಸಾಹಿಸಿ…
ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿದ ಮಾಲಕರಾದ ರಮ್ಯ ನವೀನ್ ಅವರು, ನಮ್ಮಲ್ಲಿ ಎಲ್ಲಾ ಸಮಾರಂಭಗಳಿಗೆ ಬೇಕಾದ ವಿವಿಧ ವಿನ್ಯಾಸದ ಪೆಂಡಲ್, ಶಾಮಿಯಾನ, ಸ್ಟೇಜ್ ಸೆಟ್ಟಿಂಗ್, ಟ್ರಸ್ಸ್, ಶೀಟ್, ಚಯರ್, ವಿಐಪಿ ಕುರ್ಚಿಗಳು, ಫ್ಯಾನ್ ಮತ್ತು ಕೂಲರ್ ಫ್ಯಾನ್, ವಾಟರ್ ಟ್ಯಾಂಕ್, ಮ್ಯಾಟ್, ತರಕಾರಿ ಹಾಗೂ ಮಾಂಸಾಹಾರಿಗೆ ಪ್ರತ್ಯೇಕ ಅಡುಗೆ ಪಾತ್ರೆಗಳು, ಸೌಂಡ್ಸ್, ಲೈಟಿಂಗ್ಸ್ ಮತ್ತು ಡೆಕೋರೇಶನ್ ಸೇವೆಗಳು ಲಭ್ಯವಿದೆ. ಗ್ರಾಹಕರು ನಮ್ಮೊಂದಿಗೆ ವ್ಯವಹರಿಸಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.
ಸನ್ಮಾನ:

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ, ಜನನಿ ಎನ್‌ಕ್ಲೇವ್ ಕಾಂಪ್ಲೆಕ್ಸ್ ಮಾಲಕರಾದ ಕೆ.ಸೇಸಪ್ಪ ರೈಯವರನ್ನು ಶ್ರೀ ದುರ್ಗಾ ಎಂಟರ್‌ಪ್ರೈಸಸ್ ಶಾಮಿಯಾನ ಮತ್ತು ಸರ್ವೀಸಸ್‌ನ ಪರವಾಗಿ ಶಾಲು,ಹಾರಾರ್ಪಣೆ, ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here