ಉದನೆ: ಡಿವೈಡರ್‌ಗೆ ಡಿಕ್ಕಿಯಾದ ಇನ್ನೋವಾ

0

ನೆಲ್ಯಾಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉದನೆ ಪೇಟೆಯಲ್ಲಿ ರಸ್ತೆ ಮಧ್ಯದ ಡಿವೈಡರ್‌ಗೆ ಇನ್ನೋವಾ ಕಾರು ಡಿಕ್ಕಿಯಾದ ಘಟನೆ ಡಿ.7ರಂದು ಮುಂಜಾನೆ ನಡೆದಿದೆ.


ಇನ್ನೋವಾ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದು ನಿದ್ದೆಯ ಮಂಪರಿನಲ್ಲಿ ಚಾಲಕ ಅರಿವಿಗೆ ಬಾರದೇ ಚಲಾಯಿಸಿದ ಪರಿಣಾಮ ಇನ್ನೋವಾ ರಸ್ತೆ ಮಧ್ಯೆ ಹಾಕಿರುವ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದು ಇಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಶಿರಾಡಿ 108 ಆಂಬುಲೆನ್ಸ್‌ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

LEAVE A REPLY

Please enter your comment!
Please enter your name here