ಪುತ್ತೂರು ನಗರಸಭೆ: ವಾರ್ಡ್‌ 11ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೋರಿ ಮೌರಿಸ್‌ ಮಸ್ಕರೇನ್ಹಸ್‌ ಮನವಿ

0

ಪುತ್ತೂರು: ಪುತ್ತೂರು ನಗರಸಭೆಯ ವಾರ್ಡ್‌ಸಂಖ್ಯೆ 11ರ ನೆಲ್ಲಿಕಟ್ಟೆಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿ ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಮೌರಿಸ್‌ ಮಸ್ಕರೇನ್ಹಸ್‌ ಪುತ್ತೂರು ಬ್ಲಾಕ್‌ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.

ಪುತ್ತೂರು ನಗರಸಭೆಯ ವಾರ್ಡ್‌ಸಂಖ್ಯೆ 1 ಮತ್ತು 11ರ ನಗರಸಭಾ ಸದಸ್ಯರು ನಿಧನಹೊಂದಿದ ಹಿನ್ನೆಲೆಯಲ್ಲಿ ಡಿ.27ರಂದು ಮರು ಚುನಾವಣೆ ನಡೆಯಲಿದೆ. 33 ವರ್ಷಗಳ ಕಾಲ ಸರಕಾರಿ ಸೇವೆಯಲ್ಲಿದ್ದು ನಿವೃತ್ತಿ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರೀಯರಾಗಿದ್ದು ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಲ್ಲಿ ಉಪಾಧ್ಯಾಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here