ಬಸ್ಸಿನಡಿಗೆ ಬಿದ್ದು ಕುಂಞಿರಾಮ ಮಣಿಯಾಣಿ ಸಾವು-ಈಶ್ವರಮಂಗಲದ ಗಾಳಿಮುಖದಲ್ಲಿ ನಡೆದ ಘಟನೆ

0

ಪುತ್ತೂರು:ಈಶ್ವರಮಂಗಲದ ಗಾಳಿಮುಖ ಎಂಬಲ್ಲಿ  ಖಾಸಗಿ ಬಸ್ಸಿನ ಅಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ.8ರಂದು ನಡೆದಿದೆ.ಮೃತಪಟ್ಟವರನ್ನು ಮುಳ್ಳೇರಿಯಾದ ಕೋಳಿಕಾಲ ನಿವಾಸಿ, ಕೃಷಿಕ ಕುಂಞಿರಾಮ ಮಣಿಯಾಣಿ ಎಂದು ಗುರುತಿಸಲಾಗಿದೆ.

ಗಾಳಿಮುಖಕ್ಕೆ ಬಂದಿದ್ದ ಅವರು, ಬಸ್ಸಿನಿಂದ ಇಳಿದು ರಸ್ತೆ ದಾಟುವ ಸಂದರ್ಭದಲ್ಲಿ ಬಸ್ಸ್‌ ಅವರ ಮೇಲೆ ಚಲಿಸಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹಿಂಬದಿ ಬಾಗಿಲಿನಿಂದ ಇಳಿದಿದ್ದ ಕುಂಞಿರಾಮ ಮಣಿಯಾಣಿ ಅವರು, ಇನ್ನೊಂದು ಬದಿಗೆ ದಾಟುವಷ್ಟರಲ್ಲಿ ಬಸ್ ಚಲಿಸಿದ್ದು, ಬಸ್ಸಿನ ಮುಂಭಾಗದ ಚಕ್ರ ಕುಂಞಿರಾಮ ಅವರ ಎದೆಯ ಭಾಗದಿಂದ ಬಸ್ ಹರಿದಿದೆ.


ಮೃತರು ಪತ್ನಿ ನಾರಾಯಣಿ, ಪುತ್ರರಾದ ಮಣಿ, ಸಂತೋಷ್, ಪುತ್ರಿಯರಾದ ಶ್ಯಾಮಲಾ, ಸಾವಿತ್ರಿ ಅವರನ್ನು ಅಗಲಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here