ಕುಂಬ್ರದ ಹಿರಿಯ ಹೊಟೇಲ್ ಉದ್ಯಮಿ ರಾಮಣ್ಣ ರೈ ನಿಧನ

0

ಪುತ್ತೂರು: ಕುಂಬ್ರದ ಹಿರಿಯ ಹೊಟೇಲ್ ಉದ್ಯಮಿ ಹೊಟೇಲ್ ರಾಮಣ್ಣ ಎಂದೇ ಚಿರಪರಿಚಿತರಾಗಿದ್ದ ರಾಮಣ್ಣ ರೈ ಕುಂಬ್ರ (78) ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.9 ರಂದು ಕುಂಬ್ರದ ಸ್ವಗೃಹದಲ್ಲಿ ನಿಧನರಾದರು.


ಕುಂಬ್ರದಲ್ಲಿ ಹೊಟೇಲ್ ವ್ಯವಹಾರ ನಡೆಸುತ್ತಿದ್ದ ರಾಮಣ್ಣ ಅವರ ಹೊಟೇಲ್ ನಲ್ಲಿ ಸಿಗುತ್ತಿದ್ದ ಸೇಮಿಗೆ ಅಂದಿನ ಕಾಲದಲ್ಲಿ ಭಾರೀ ಫೇಮಸ್ಸಾಗಿತ್ತು.ಸೇಮಿಗೆ ತಿನ್ನಲೆಂದೇ ಜನ ಬಹಳ ದೂರದಿಂದಲೂ ಬರುತ್ತಿದ್ದರು. ಕನಿಷ್ಟ ದರದಲ್ಲಿ ಗರಿಷ್ಠ ಆಹಾರ ಕೊಡುತ್ತಿದ್ದ ಇವರು ಅನೇಕ ವರ್ಷಗಳ ಕಾಲ ಹೊಟೇಲ್ ವ್ಯವಹಾರ ನಡೆಸಿದ್ದರು.
ಮೃತರು ಪತ್ನಿ ಲಕ್ಷ್ಮಿ, ಪುತ್ರಿಯರಾದ ಚಂದ್ರಾವತಿ,ಗೀತಾ, ಪುತ್ರರಾದ ಅನಿಲ್ ಹಾಗೂ ಹರೀಶ ರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here