ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನ ವಿರುದ್ದ ಪ್ರತಿಭಟನೆ – 122 ಮಕ್ಕಳ ಪೋಷಕರಿಂದ ಪ್ರತಿಭಟನೆ – ಶಿಕ್ಷಣಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹ

0

ಪುತ್ತೂರು: ಮಕ್ಕಳಿಗೆ ಹೊಡೆಯುವ ಅಧ್ಯಾಪಕರ ವಿರುದ್ದ ಪೋಷಕರು ಪ್ರತಿಭಟನೆ ಮಾಡುವುದನ್ನು ಕೇಳಿದ್ದೇವೆ. ಆದರೆ ಇದು ಹಾಗಲ್ಲ ಬದಲಾಗಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದೆ.

ಮೇನಾಲ ಹಿರಿಯ ಮ್ರಾಥಮಿಕ ಶಾಲೆಯ 6ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನ ವಿರುದ್ದ ಮಕ್ಕಳ ಪೋಷಕರು ಒಂದಾಗಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತನ್ನ ತುಂಟಾಟ, ಕೀಟಲೆ, ಪೋಕರಿತನದಿಂದ ಶಾಲೆಯಲ್ಲಿ ಕುಖ್ಯಾತಿ ಪಡೆದಿದ್ದ ಈ ವಿದ್ಯಾರ್ಥಿ ನಿಷೇಧಿತ ವಸ್ತುಗಳನ್ನು ಸೇವಿಸಿ ಶಾಲೆಗೆ ಬಂದು ಇತರ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತೊಂದರೆ ಕೊಡುತ್ತಿರುವುದಾಗಿ ಆರೋಪಿಸಿರುವ ಮಕ್ಕಳ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 123 ವಿದ್ಯಾರ್ಥಿಗಳಿದ್ದು ಎಲ್ಲಾ ವಿದ್ಯಾರ್ಥಿಗಳ ಹೆತ್ತವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪೋಕರಿ ವಿದ್ಯಾರ್ಥಿಯನ್ನು ಡಿಬಾರ್‌ ಮಾಡುವಂತೆ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ತಮ್ಮ ಮಕ್ಕಳನ್ನು ಶಾಲೆಯಿಂದ ಕರೆದೊಯ್ಯುವುದಾಗಿ ಹೇಳಿರುವ ಪ್ರತಿಭಟನಾ ನಿರತ ಪೋಷಕರು ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿವಂತೆ ಆಗ್ರಹಿಸಿದ್ದಾರೆ. ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಪ್ರತಿಭಟನೆ ಮುಂದುವರಿದೆ.

LEAVE A REPLY

Please enter your comment!
Please enter your name here