ಪುತ್ತೂರು: ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ , ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗಗಳ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ 2023-24 ಹಾಗೂ ರಂಗಮಂದಿರ ಶಿಲಾನ್ಯಾಸ ಕಾರ್ಯಕ್ರಮವು ಕೆ.ಪಿ.ಎಸ್. ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು ವಹಿಸಿದ್ದರು. ವಿದ್ಯಾರ್ಥಿಗಳಿಂದ ಪಥಸಂಚನ ಕಾರ್ಯಕ್ರಮ ನಡೆಯಿತು. ಕೆ.ಪಿ.ಎಸ್.ಪ್ರೌಢ ಶಾಲಾ ನಿವೃತ್ತ ದೈಹಿಕ ಶಿಕ್ಷಕ ಜಯರಾಮ ಗೌಡ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಕೆ.ಪಿ.ಎಸ್.ಪ್ರಾಥಮಿಕ ಶಾಲಾ ನಿವೃತ್ತ ದೈಹಿಕ ಶಿಕ್ಷಕ ವಿಶ್ವೇಶ್ವರ ಭಟ್ ಗೌರವ ವಂದನೆ ಸ್ವೀಕರಿಸಿದರು. ಕೆಪಿಎಸ್ ಕುಂಬ್ರ ಇಲ್ಲಿಯ ವಿದ್ಯಾರ್ಥಿನಿ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಪಟ ಅರ್ಪಿತಾ ಕ್ರೀಡಾ ಜ್ಯೋತಿಯ ಮುಂದಾಳುತ್ವವನ್ನು ವಹಿಸಿಕೊಂಡು ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ನಂತರ ದಾನಿಗಳೂ ಹಿರಿಯರೂ ಆದ ಅರಿಯಡ್ಕ ಚಿಕ್ಕಪ್ಪ ನಾೖಕ್ ರವರು ಸಂಸ್ಥೆಗೆ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ದಾನವಾಗಿ ನೀಡಲು ಉದ್ದೇಶಿಸಿರುವ ರಂಗ ಮಂದಿರದ ಶಿಲಾನ್ಯಾಸವನ್ನು ನೆರವೇರಿಸಿದರು.
ಅತಿಥಿಗಳಾಗಿ ಆಗಮಸಿದ್ದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ , ಕೆ.ಪಿ.ಎಸ್.ಕುಂಬ್ರ ಇದರ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು , ಪ್ರಾಥಮಿಕ ಶಾಲಾ ನಿವೃತ್ತ ದೈಹಿಕ ಶಿಕ್ಷಕ ವಿಶ್ವೇಶ್ವರ ಭಟ್, ಪ್ರೌಢ ಶಾಲಾ ನಿವೃತ್ತ ದೈಹಿಕ ಶಿಕ್ಷಕ ಜಯರಾಮ ಗೌಡ ಮೊದಲಾದವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ,ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ, ಬಿ ಸಿ ಚಿತ್ರಾ, ಶೀನಪ್ಪ ನಾಯ್ಕ , ಶಾರದಾ , ಸುಂದರಿ ,ರೋಟರಿ ಅಧ್ಯಕ್ಷ ಜಯರಾಜ್ ಭಂಡಾರಿ , ನಿವೃತ್ತ ಸೈನಿಕ ಶ್ರೀನಿವಾಸ ರೈ , ಪಂಚಾಯತ್ ಮಾಜಿ ಸದಸ್ಯ ಶಶಿಕಿರಣ್ ರೈ ನೂಜಿಬೈಲು, ಕರುಣಾ ರೈ ಬಿಜಳ, ಅರುಣಾ ರೈ ಬಿಜಳ, ಕೆಪಿಎಸ್ ಅಭಿವೃದ್ಧಿ ಸಮಿತಿ ಸದಸ್ಯರಾದ ಅಶೋಕ ಪೂಜಾರಿ ಬೊಳ್ಳಾಡಿ, ಮಹಮ್ಮದ್ ಬೊಳ್ಳಾಡಿ, ಮಹಮ್ಮದ್ ಕುಟ್ಟಿನೋಪಿನಡ್ಕ ,ಅಬ್ದುಲ್ ರಝಾಕ್ ಪರ್ಪುಂಜ ,ಉಳ್ಳಾಕುಲು ಕುಕ್ಕುಮುಗೇರು ದೇವಸ್ಥಾನ ದ ಮೊಕ್ತೇಸರ ವಿಜಯಕುಮಾರ್ ರೈ ಮುಗೇರು, ಉದ್ಯಮಿ ಕುಂಬ್ರ ಮೋಹನದಾಸ ರೈ , ರಾಜೀವ್ ರೈ ಕುತ್ಯಾಡಿ, ಸತೀಶ್ ರೈ ಗೋಳ್ತಿಲ, ತಿಮ್ಮಪ್ಪ ರೈ ಅರಿಯಡ್ಕ, ಕೃಷ್ಣ ರೈ, ನಾರಾಯಣ ರೈ ಮಡ್ಯಂಗಳ, ಲಕ್ಷ್ಮೀನಾರಾಯಣ ರೈ ಅರಿಯಡ್ಕ, ಇಂಜಿನಿಯರ್ ನವೀನ ಕುಮಾರ್ ,ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೀಲಾವತಿ ಮತ್ತಿತರರು ಉಪಸ್ಥಿತರಿದ್ದರು.
ಕೆಪಿಎಸ್ ಪ್ರಾಂಶುಪಾಲೆ ನಿರ್ಮಲ ಗ್ಲಾಡಿಸ್ ಅತಿಥಿಗಳನ್ನು ಸ್ವಾಗತಿಸಿದರು. ಕೆಪಿಎಸ್ ಉಪ ಪ್ರಾಂಶುಪಾಲೆ ಮಮತಾ ಕೆ .ಎಸ್. ವಂದಿಸಿದರು. ಕೆಪಿಎಸ್ ಪದವಿಪೂರ್ವ ಕಾಲೇಜು ವಿಭಾಗದ ಉಪನ್ಯಾಸಕಿ ದಿವ್ಯ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾಕೂಟದಲ್ಲಿ ಮಣಿಕರ ಪ್ರೌಢ ಶಾಲಾ ದೈಹಿಕ ಶಿಕ್ಷಕ ಕರುಣಾಕರ ಮಣಿಯಾಣಿ, ಹೊರೈಜೋನ್ ಶಾಲೆ ವಿಟ್ಲದ ದೈಹಿಕ ಶಿಕ್ಷಕ ತಿರುಮಲೇಶ್, ಕೆ ಪಿ ಎಸ್ ಬೆಳ್ಳಾರೆಯ ದೈಹಿಕ ಶಿಕ್ಷಕ ನವೀನ ,ಹಳೆವಿದ್ಯಾರ್ಥಿ ಮನೋಜ್ ರವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಕೆಪಿಎಸ್ ಕುಂಬ್ರ ಪದವಿಪೂರ್ವ ವಿಬಾಗದ ಎಲ್ಲಾ ಉಪನ್ಯಾಸಕರು, ಪ್ರೌಢ ವಿಭಾಗದ ಎಲ್ಲಾ ಶಿಕ್ಷಕರು , ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಎಲ್ಲಾ ಶಿಕ್ಷಕರು ಸಹಕರಿಸಿದ್ದರು.