ಮೊ|ಆಂಟನಿ ಪತ್ರಾವೋ ಇವರ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆ

0

ನವೀಕೃತ ಯೋಜನೆಗಳ ಉದ್ಘಾಟನೆ, ಪ್ರತಿಮೆಆನಾವರಣ


ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣಿಕರ್ತರಾದ ಮೊ| ಆಂಟನಿ ಪತ್ರಾವೊ ರವರ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆಯನ್ನು ಡಿ.11ರಂದು ಆಚರಿಸಲಾಯಿತು. ಬೆಳಿಗ್ಗೆ 9 ಘಂಟೆಗೆ ಮಾಯ್ ದೆ ದೇವುಸ್ ಚರ್ಚಿನಲ್ಲಿ ಪ್ರದಾನ ದಿವ್ಯ ಬಲಿಪೂಜೆ ನೆರವೇರಿತು. ನಂತರ 10 ಗಂಟೆಗೆ ಸಂತ ಪಿಲೋಮಿನಾ ಕ್ಯಾಂಪಸ್ ಆವರಣದಲ್ಲಿ ಮೊ| ಆಂಟನಿ ಪತ್ರಾವೊ ರವರ ನೂತನ ಪ್ರತಿಮೆಯನ್ನು ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮಾಜಿ ಸಂಚಾಲಕರಾದ ವಂದನೀಯ ವಲೇರಿಯನ್ ಡಿ ಸೋಜ ರವರು ಆನಾವರಣಗೊಳಿಸಿದರು. ಈ ನೂತನ ಪ್ರತಿಮೆಯನ್ನು ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅನಿವಾಸಿ ಉದ್ಯಮಿ ಮೈಕಲ್ ಡಿ ಸೋಜರವರು ದಾನವಾಗಿ ನೀಡಿದ್ದಾರೆ

ಇದೇ ಸಂದರ್ಭದಲ್ಲಿ ಸಂತ ಫಿಲೋಮಿನಾಕಾಲೇಜಿನ ನವೀಕೃತ ಹವಾನಿಯಂತ್ರಿತ ಕಂಪ್ಯೂಟರ್ ಪ್ರಯೋಗಾಲಯ, ನವೀಕೃತ ಸಂತ ಫಿಲೋಮಿನಾ ಆಂಗ್ಲ ಮಾದ್ಯಮ ಶಾಲೆ, ನೂತನ ಮೊ| ಆಂಟನಿ ಪತ್ರಾವೊ ಸಭಾಂಗಣದ ಉದ್ಘಾಟನೆಯನ್ನು ಮಾಡಲಾಯಿತು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ವಹಿಸಿ ಆಶೀರ್ವಚನ ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂಧರ್ಭದಲ್ಲಿ ಮರೀಲ್ ಚರ್ಚ್ ಪ್ರದಾನ ಧರ್ಮಗುರುಗಳಾದ ವಂ.ನಿಲೇಶ್ ಕ್ರಾಸ್ತಾ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷರಾದ ಜೆರಾಲ್ಡ್ ಡಿ ಕೋಸ್ತಾ, ಕಾರ್ಯದರ್ಶಿಯಾದ ಎವ್ಲಿನ್ ಡಿ ಸೋಜ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ.ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿ.ಲೋರಾ ಪಾಯಸ್, ಸಂತ ಫಿಲೋಮಿನಾ ಮಹಿಳಾ ವಸತಿ ನಿಲಯದ ವಾರ್ಡನ್ ಸಿ.ಲೂರ್‍ಡ್ ಮೇರಿ, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸರ್ವ ಸದಸ್ಯರು, ಹಳೆ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳು, ಶಿಕ್ಷಕ-ರಕ್ಷಕ ಸಂಘಗಳ ಪದಾಧಿಕಾರಿಗಳು, ಶಿಕ್ಷಕ- ಶಿಕ್ಷಕೇತರ ಬಳಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮಗಳನ್ನು ಸಂಘಟಿಸುವ ಜವಬ್ದಾರಿಯನ್ನು ಆಚ್ಚುಕಟ್ಟಾಗಿ ನಿಭಾಯಿಸಿದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂದನೀಯ ಸ್ಟ್ಯಾನಿ ಪಿಂಟೊರವರು ಸಹಕರಿಸಿದ ಸರ್ವರನ್ನು ವಂದಿಸಿದರು.

LEAVE A REPLY

Please enter your comment!
Please enter your name here