ಸಹ್ಯಾದ್ರಿ ಕಾಲೇಜಿನ ಸಿನರ್ಜಿ- 23 – ಕೊಂಬೆಟ್ಟು ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ಡಿ.7, 8, 9ರಂದು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ನಡೆದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ 2023ರ 10ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪುತ್ತೂರು ಕೊಂಬೆಟ್ಟು ಸ.ಪ.ಪೂ. ಕಾಲೇಜಿನ ಅಟಲ್ ಟಿಂಕರಿಂಗ್ ಲ್ಯಾಬ್‌ನ ವಿದ್ಯಾರ್ಥಿಗಳು ಭಾಗಹಿಸಿ ಬಹುಮಾನ ಗಳಿಸಿದ್ದಾರೆ.


ಕೊಂಬೆಟ್ಟು ಪ್ರೌಢಶಾಲೆಯ 9 ವಿಜ್ಞಾನ ಮಾದರಿಗಳೂ ಸ್ಪರ್ಧಿಸಿದ್ದು, ಎಲ್ಲಾ ಮಾದರಿಗಳೂ ಕೂಡ ಬಂಡವಾಳ ಹೂಡಿಕೆಗೆ ಆಯ್ಕೆಯಾದವು. ಅವುಗಳಲ್ಲಿ 6 ವಿಜ್ಞಾನ ಮಾದರಿಗಳು ಬಹುಮಾನಗಳನ್ನು ಪಡೆದವು. ಸಾತ್ವಿಕ್ ಕಾರಂತ್ ಮತ್ತು ಅಭಿರಾಮ (ಕೃತಕ ಕೈ), ಅನನ್ಯ, ನಿಧಿ. ಆರ್ , ಶಿವಾನಿ. ಕೆ, ಆಶ್ರಿತಾ ಕುಲಾಲ್ (ಮೆಡಿಕಲ್), ಅನಿರುದ್ಧ ದೋಟ, ಆಕಾಶ್ ರಾಜ್, ಅರುಣ್ ಕುಮಾರ್. ವಿ. (ಸುರಕ್ಷಿತ ಕೃಷಿ) ನಿಧೀಕ್ಷ ಬಿ., ರಕ್ಷಿತಾ, ಲಾವಣ್ಯ (ಸ್ವಯಂಚಲಿತ ತೊಟ್ಟಿಲು) ರಿತಿಕಾ ಬಿ.ಆರ್., ಲತಾ ಎಂ. ಕೆ, ಸಿಂಚನ ಪಿ.ಜಿ., ಲಿಥಿಕ (ಗೋಡಂಬಿ ಸಿಪ್ಪೆ ತೆಗೆಯುವ ಸಾಧನ) ಮಾದರಿಗಳು ಬಹುಮಾನ ಗಳಿಸಿವೆ. ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಜೋಕಿಂ ಡಿಸೋಜ, ಶಾಲಾ ಉಪಪ್ರಾಂಶುಪಾಲ ವಸಂತ ಮೂಲ್ಯ, ಸದಸ್ಯರು, ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಅಟಲ್ ಟಿಂಕರಿಂಗ್ ಲ್ಯಾಬ್ ಶಿಕ್ಷಕಿ ಸಿಂಧು ವಿ.ಕೆ. ಇವರಿಗೆ ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here