ಕಾಡು ಪೊದೆಗಳಿಂದ ಆವೃತ್ತಿಯಾದ ಪಟ್ಟೆ ಗೆಜ್ಜೆಗಿರಿ- ಈಶ್ವರಮಂಗಲ ಸಂಪರ್ಕ ರಸ್ತೆ

0


ಬಡಗನ್ನೂರುಃ ಪಟ್ಟೆ ಗೆಜ್ಜೆಗಿರಿ- ಈಶ್ವರಮಂಗಲ ಜಿ.ಪಂ ಸಂಪರ್ಕ ರಸ್ತೆಯ ಶರವು ಎಂಬಲ್ಲಿ ಅಪಾಯಕಾರಿ ತಿರುವು ಇದ್ದು ರಸ್ತೆ ಬದಿಯಲ್ಲಿ ಬೆಳೆದು ನಿಂತ ಹುಲ್ಲು ಹಾಗೂ ಪೊದೆಗಳಿಂದ  ರಸ್ತೆ ಸಂಪೂರ್ಣ ಮಾಯವಾಗಿ ತಿರುವು ಕಾಣದೆ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಈ ರಸ್ತೆಯಲ್ಲಿ ಪ್ರವಾಸಿಗರು ಗೆಜ್ಜೆಗಿರಿ ಕ್ಷೇತ್ರಕ್ಕೆ ಮತ್ತು ಅಲ್ಲಿಂದ ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು ಮುಂದೆ ಸಂಭವಿಸಬಹದಾದ ಅವಘಡಗಳ ಮುಂಚಿತವಾಗಿ ಸಂಬಂಧ ಪಟ್ಟ ಅಧಿಕಾರಿಗಳು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here