ಬೆಟ್ಟಂಪಾಡಿ: ದ. 30 ಮತ್ತು 31 ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಜರಗಲಿರುವ ಲಕ್ಷ ಬಿಲ್ವಾರ್ಚನೆ, ಮೂಡಪ್ಪ ಸೇವೆ, ದುರ್ಗಾಪೂಜೆ, ಶಿವಪಂಚಾಕ್ಷರಿ ಹವನ, ವರದಶಂಕರ ಪೂಜೆ ವಿಶೇಷ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ದ. 10 ರಂದು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ಬಳಿಕ ನಡೆದ ಸಭೆಯಲ್ಲಿ ಲಕ್ಷ ಬಿಲ್ವ ಪತ್ರೆ ಸೇರಿದಂತೆ ಹಲವು ಸುವಸ್ತುಗಳ ಕ್ರೋಢೀಕರಣ, ಶ್ರಮಸೇವೆ ಇತ್ಯಾದಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಅಭಿವೃದ್ಧಿ ಸಮಿತಿ ಸಂಚಾಲಕ ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ, ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ಕಾನುಮೂಲೆ, ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಶಿವಕುಮಾರ್ ಬಲ್ಲಾಳ್, ಆಡಳಿತ ಸಮಿತಿ ಸದಸ್ಯರಾದ ಅರುಣ್ ಪ್ರಕಾಶ್ ರೈ, ಸೀತರಾಮ ಗೌಡ ಮಿತ್ತಡ್ಕ, ಶೇಷಪ್ಪ ರೈ ಮೂರ್ಕಾಜೆ, ದುರ್ಗಾಪ್ರಸಾದ್ ಜೆ., ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಮಂದಿರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ತೋಟದಮೂಲೆ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಮೂಲ್ಯ, ಪದಾಧಿಕಾರಿಗಳು, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಗಂಗಾಧರ ಎಂ.ಎಸ್. ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು, ಭಗವದ್ಭಕ್ತರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.