ಟಿಪ್ಪರ್ ಚಾಲಕ ಹನುಮಂತ ಮಾದರ ಕೊಲೆ ಪ್ರಕರಣ-ಪರಾರಿಯಾಗಿದ್ದ ಮೂರನೇ ಆರೋಪಿ ಬಂಧನ-ಕೃತ್ಯಕ್ಕೆ ಬಳಸಿದ್ದ ವಾಹನ, ಸೊತ್ತು ವಶಕ್ಕೆ

0

ಪುತ್ತೂರು:ಕುಂಬ್ರದಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಬಾದಾಮಿ ಡಾಣಕಶಿರೂರು ಮೂಲದ ಹನುಮಂತ ಮಾದರ (22ವ.)ಅವರ ಕೊಲೆ ಪ್ರಕರಣದ ಮೂರನೇ ಆರೋಪಿ ದುರ್ಗಪ್ಪ ಮಾದರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಯಿಂದ, ಅಪಹರಣಕ್ಕೆ ಬಳಸಿದ್ದ ವಾಹನ ಮತ್ತು ಕೊಲೆ ಮಾಡಲು ಬಳಸಲಾಗಿದ್ದ ರಾಡ್ ಅನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.


ಬಾಗಲಕೋಟೆ ಡಾಣಕಶಿರೂರು ರೇಣವ್ವ ಮತ್ತು ಸುರೇಶರವರ ಮಗ ಹನುಮಂತ ಮಾದರ(22ವ.) ಅವರನ್ನು ಕುಂಬ್ರದಿಂದ ಮೂವರು ಸೇರಿ ವಾಹನವೊಂದರಲ್ಲಿ ಕರೆದೊಯ್ದು ಕೊಲೆ ಮಾಡಿ ಮೃತದೇಹವನ್ನು ಆಗುಂಬೆ ಘಾಟಿ ಸಮೀಪ ಎಸೆದು ಹೋಗಿದ್ದರು ಎಂದು ಆರೋಪಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಡಾಣಕಶಿರೂರು ನಿವಾಸಿ ಹನುಮಪ್ಪ ಮಾದರ ಅವರ ಪುತ್ರ ಶಿವಪ್ಪ ಹನುಮಪ್ಪ ಮಾದರ(42ವ.) ಹಾಗೂ ಗದಗ ಜಿಲ್ಲೆಯ ರೋಣ ತಾಲೂಕು ಜಗಳೂರು ಗ್ರಾಮ ಅಂಬೇಡ್ಕರ್ ನಗರ ಹನುಮಪ್ಪ ಮಾದರ ಅವರ ಮಗ ಮಂಜುನಾಥ ಹನುಮಪ್ಪ ಮಾದರ(32ವ.)ಎಂಬೀರ್ವರನ್ನು ಪೊಲೀಸರು ಬಂಧಿಸಿದ್ದರು.ಇನ್ನೋರ್ವ ಆರೋಪಿ, ಬೆಳಗಾವಿ ರಾಮದುರ್ಗಾ ಗ್ರಾಮದ ಮನೇನಕೊಪ್ಪ ನಿವಾಸಿ ದುರ್ಗಪ್ಪ ಮಾದರ(42ವ.)ಪರಾರಿಯಾಗಿದ್ದು,ಇದೀಗ ಆತನನ್ನೂ ಪೊಲೀಸರು ಬಂಧಿಸಿದ್ದಾರೆ.ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಸಿ.ಐ ರವಿ ಬಿ.ಎಸ್ ನೇತೃತ್ವದ ತಂಡ ಆರೋಪಿ ದುರ್ಗಪ್ಪ ಮಾದರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಹನುಮಂತ ಮಾದರ ಅವರನ್ನು ಕುಂಬ್ರದ ಬಾಡಿಗೆ ಮನೆಯಿಂದ ಕರೆದೊಯ್ಯಲಾಗಿದ್ದ ಮಹೇಂದ್ರ ಮ್ಯಾಕ್ಸಿಂ ವಾಹನವನ್ನು ಪೆಟ್ರೋಲ್ ಪಂಪ್ ಒಂದರ ಬಳಿಯಿಂದ ಮತ್ತು ಕೊಲೆ ಮಾಡಲು ಉಪಯೋಗಿಸಿದ ರಾಡ್‌ವೊಂದನ್ನು ಆಗುಂಬೆ ಘಾಟಿಯಲ್ಲಿ ಪೊಲೀಸರು ಬಂಽತ ದುರ್ಗಪ್ಪ ಮಾದರನ ಮೂಲಕ ವಶಕ್ಕೆ ಪಡೆದು ಕೊಂಡಿದ್ದಾರೆ.


ನ.17ರಂದು ಮೂವರು ವಾಹನದಲ್ಲಿ ಕರೆದೊಯ್ದಿದ್ದರು:
ನ.17ರಂದು ಮಧ್ಯಾಹ್ನ ಆರೋಪಿ ಶಿವಪ್ಪ ಹನುಮಪ್ಪ ಮಾದರ ಮೃತ ಹನುಮಂತರ ಮಾವ ಮಂಜುನಾಥರಿಗೆ ಕರೆ ಮಾಡಿ, ‘ನಿನ್ನ ಅಕ್ಕನ ಮಗ ಸಿಕ್ಕಿದರೆ ಖಂಡಿತಾ ಬಿಡುವುದಿಲ್ಲ’ ಎಂದು ಹೇಳಿದ್ದಲ್ಲದೆ ಅದೇ ದಿನ ಸಂಜೆ 6.30 ಗಂಟೆಗೆ ಕುಂಬ್ರದಲ್ಲಿ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಹನುಮಪ್ಪ ಮಾದರ ಅವರ ಸ್ನೇಹಿತ ಸಂತೋಷ್ ಎಂಬವರಿಗೂ ಕರೆ ಮಾಡಿದ್ದರು.ಅದೇ ದಿನ ಸಂಜೆ ಆರೋಪಿಗಳಾದ ಶಿವಪ್ಪ ಹನುಮಪ್ಪ ಮಾದರ, ಮಂಜುನಾಥಹನುಮಪ್ಪ ಮಾದರ ಮತ್ತು ದುರ್ಗಪ್ಪ ಮಾದರ ಎಂಬವರು ಮಹೇಂದ್ರ ಮ್ಯಾಕ್ಸಿಂ ವಾಹನ(ಕೆ.ಎ.26ಬಿ:3833)ದಲ್ಲಿ ಕುಂಬ್ರಕ್ಕೆ ಆಗಮಿಸಿ ಕುಂಬ್ರದ ಮಸೀದಿ ಬಳಿ ಬಾಡಿಗೆ ರೂಮಲ್ಲಿದ್ದ ಹನುಮಂತ ಮಾದರ ಅವರನ್ನು ಅದೇ ವಾಹನದಲ್ಲಿ ಪುತ್ತೂರು ಕಡೆಗೆ ಕರೆದುಕೊಂಡು ಹೋಗಿದ್ದರು.ಊರಿಗೆ ಹೋಗುವ ಹಾದಿಯಲ್ಲಿ ವಾಹನದಲ್ಲೇ ಹನುಮಂತ ಮಾದರ ಅವರ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿ ಮೃತ ದೇಹವನ್ನು ಆಗುಂಬೆ ಘಾಟಿ ಸಮೀಪ ಎಸೆದು ಹೋಗಿದ್ದರು ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ ಬಂಧಿತ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತು ಕೃತ್ಯಕ್ಕೆ ಬಳಸಲಾದ ಸೊತ್ತುಗಳ ಸ್ವಾಽನಕ್ಕಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದ ಪೊಲೀಸರು, ಪರಾರಿಯಾಗಿದ್ದ ಮೂರನೇ ಆರೋಪಿಯನ್ನು ಬಂಽಸಿ, ಕೃತ್ಯಕ್ಕೆ ಬಳಸಲಾಗಿದ್ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆರೋಪಿ ಶಿವಪ್ಪಹನುಮಂತ ಮಾದರ ಅವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಹನುಮಂತ ಮಾದರ ಅವರ ಕೊಲೆ ನಡೆದಿತ್ತು ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ

LEAVE A REPLY

Please enter your comment!
Please enter your name here