ಕುಂಬ್ರ:ಟಿಪ್ಪರ್ ಚಾಲಕನ ಕೊಲೆ ಪ್ರಕರಣ-ಆರೋಪಿತ್ರಯರಿಗೆ ನ್ಯಾಯಾಂಗ ಬಂಧನ

0

ಕೃತ್ಯಕ್ಕೆ ಬಳಸಿದ ಗೂಡ್ಸ್ ಮಿನಿ ಟೆಂಪೋ, ಸೊತ್ತು ವಶಕ್ಕೆ

ಪುತ್ತೂರು:ಕುಂಬ್ರದಲ್ಲಿ ಟಿಪ್ಪರ್ ಚಾಲಕರಾಗಿದ್ದ ಬಾಗಲಕೋಟೆ ಬಾದಾಮಿ ಡಾಣಕ ಶಿರೂರು ಮೂಲದ ಹನುಮಂತ (22ವ)ಎಂಬವರನ್ನು ಅಪಹರಣ ಮಾಡಿ ಕರೆದೊಯ್ದು ಕೊಲೆ ಮಾಡಿರುವ ಮೂವರು ಆರೋಪಿಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಈ ಪೈಕಿ ಇಬ್ಬರು ಆರೋಪಿಗಳು ಮೊದಲೇ ಬಂಧಿತರಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿದ್ದರು.ತಲೆಮರೆಸಿಕೊಂಡಿದ್ದ ಇನ್ನೋರ್ವನನ್ನು ಪೊಲೀಸರು ದ.12ರಂದು ಬಂಧಿಸಿದ್ದರು.ಕೃತ್ಯಕ್ಕೆ ಬಳಸಿದ ಗೂಡ್ಸ್ ಮಿನಿ ಟೆಂಪೋ ಮತ್ತು ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಬಾಗಲಕೋಟೆ ಡಾಣಕಶಿರೂರು ರೇಣವ್ವ ಮತ್ತು ಸುರೇಶರವರ ಮಗ ಹನುಮಂತ (22ವ.)ಕೊಲೆಯಾದವರು.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಡಾಣಕಶಿರೂರು ನಿವಾಸಿ ಹನುಮಪ್ಪ ಮಾದರ ಅವರ ಪುತ್ರ ಶಿವಪ್ಪ ಹನುಮಪ್ಪ ಮಾದರ(42ವ.) ಹಾಗೂ ಗದಗ ಜಿಲ್ಲೆಯ ರೋಣ ತಾಲೂಕು ಜಗಳೂರು ಗ್ರಾಮ ಅಂಬೇಡ್ಕರ್ ನಗರ ಹನುಮಪ್ಪ ಮಾದರ ಅವರ ಮಗ ಮಂಜುನಾಥ ಹನುಮಪ್ಪ ಮಾದರ(32ವ.)ಮತ್ತು ಬೆಳಗಾವಿ ರಾಮದುರ್ಗಾ ಗ್ರಾಮದ ಮನೇನಕೊಪ್ಪ ನಿವಾಸಿ ದುರ್ಗಪ್ಪ ಮಾದರ(42ವ.)ಬಂಧಿತ ಆರೋಪಿಗಳು.ಆರೋಪಿಗಳು ಹನುಮಂತ ಅವರನ್ನು ಕುಂಬ್ರದ ಬಾಡಿಗೆ ಮನೆಯಿಂದ ವಾಹನವೊಂದರಲ್ಲಿ ಕರೆದೊಯ್ದು ದಾರಿ ಮಧ್ಯೆ ಕೊಲೆ ಮಾಡಿ ಮೃತದೇಹವನ್ನು ಆಗುಂಬೆ ಘಾಟಿ ಸಮೀಪ ಎಸೆದು ಹೋಗಿದ್ದರು.


ತಪ್ಪೊಪ್ಪಿಕೊಂಡ ಆರೋಪಿಗಳು:
ಆರಂಭದಲ್ಲಿ ಬಂಧಿತರಾಗಿದ್ದ ಆರೋಪಿಗಳಾದ ಶಿವಪ್ಪ ಹನುಮಂತ ಮಾದರ ಮತ್ತು ಮಂಜುನಾಥಹನುಮಂತ ಮಾದರರನ್ನು ನ್ಯಾಯಾಲಯದಿಂದ ತಮ್ಮ ಕಸ್ಟಡಿಗೆ ಪಡೆದುಕೊಂಡ ಪೊಲೀಸರು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಆಗುಂಬೆ ಘಾಟಿಯಲ್ಲಿ ಮೃತದೇಹವನ್ನು ಎಸೆದಿದ್ದ ಜಾಗವನ್ನು ತೋರಿಸಿದ್ದರು.ಆಗುಂಬೆ ಘಾಟಿಯ 13ನೇ ತಿರುವಿನಲ್ಲಿ ಕೊಲೆಯಾದ ಹನುಮಂತರವರ ಮೃತ ದೇಹ ಪತ್ತೆಯಾಗಿತ್ತು.ಈ ನಡುವೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ದುರ್ಗಪ್ಪ ಮಾದರನನ್ನು ಪೊಲೀಸ್ ವಿಶೇಷ ತಂಡ ಬಂಧಿಸಿ ಆತನ ಮೂಲಕ, ಪ್ರಕರಣಕ್ಕೆ ಉಪಯೋಗಿಸಿದ ವಾಹನವನ್ನೂ ವಶಕ್ಕೆ ಪಡೆದುಕೊಂಡಿದ್ದರು.ಶಿವಪ್ಪ ಹನುಮಂತ ಮಾದರರ ಪತ್ನಿ ಜೊತೆ ಕೊಲೆಯಾದ ಹನುಮಂತರಿಗಿದ್ದ ಅನೈತಿಕ ಸಂಬಂಧವೇ ಕೃತ್ಯಕ್ಕೆ ಕಾರಣ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಈ ಪ್ರಕರಣವನ್ನು ಭೇದಿಸುವಲ್ಲಿ ದ.ಕ.ಜಿಲ್ಲಾ ಪೊಲೀಸ್ ಅಽಕ್ಷಕ ರಿಷ್ಯಂತ್ ಸಿ.ಬಿ ಮತ್ತು ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಽಕ್ಷಕ ಧರ್ಮಪ್ಪ ಎಮ್.ಎನ್‌ರವರ ನಿರ್ದೇಶನದಲ್ಲಿ ಪುತ್ತೂರು ಉಪಅಽಕ್ಷಕರಾದ ಅರುಣ್ ನಾಗೇ ಗೌಡರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್‌ರವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ ಅಕ್ಷಯ್ ಡವಗಿ, ಎ.ಎಸ್.ಐ ಮುರುಗೇಶ್ ಬಿ, ಶ್ರೀಧರ್ ರೈ, ಸಿಬ್ಬಂದಿಗಳಾದ ಅದ್ರಾಮ, ಹರೀಶ್ ಜಿ.ಎನ್, ಸಲೀಂ, ಪ್ರವೀಣ್ ರೈ, ದಯಾನಂದ, ವಸಂತ ಗೌಡ, ಸತೀಶ್ ಎನ್, ಮುನಿಯಾ ನಾಯ್ಕ್, ನಾಗೇಶ್ ಕೆ.ಸಿ, ಜಗದೀಶ್ ಅತ್ತಾಜೆ, ಚಾಲಕ ಯೋಗೀಶ್ ನಾಯ್ಕ್, ಹರೀಶ್ ನಾಯ್ಕ್, ಪ್ರವೀಣ್ ಹಾಗು ಜಿಲ್ಲಾ ಗಣಕಯಂತ್ರ ವಿಭಾಗದ ದಿವಾಕರ್ ಮತ್ತು ಸಂಪತ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here