ಕ್ರೀಡೆಗಳಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ: ವಿಶ್ವೇಶ್ವರ ಭಟ್
ಕೆಯ್ಯೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಪ್ರೌಢಶಾಲಾ, ಹಾಗೂ ಕಾಲೇಜು ವಿಭಾಗದ ವಾರ್ಷಿಕ ಕ್ರೀಡಾಕೂಟವು ಕೆಪಿಎಸ್ ಕೆಯ್ಯೂರಿನಲ್ಲಿ ದ.14ರಂದು ಶಾಲಾ ವಠಾರದಲ್ಲಿ ನಡೆಯಿತು. ಧ್ವಜಾರೋಹಣ ವನ್ನು ಕೆಪಿಎಸ್ ಕೆಯ್ಯೂರು ಸಿ.ಆರ್.ಪಿ ಶಶಿಕಲಾ ನೆರವೇರಿಸಿ ಶುಭ ಹಾರೈಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಕೆಯ್ಯೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಕ್ರೀಡೆಗಳು ಶಾರೀರಿಕವಾಗಿ ಬೆಳೆಯಲು ಸಹಕಾರಿಯಾಗುವುದಲ್ಲದೆ, ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ ಕ್ರೀಡೆಗಳು ನಮ್ಮ ಜೀವನದ ಅವಿಭಾಜ್ಯ ಅಂಗದಂತಿರಬೇಕು ಎಂದರು.
ಕೆಪಿಎಸ್ ಕೆಯ್ಯೂರು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್ ಪಿ ಬೆಳಗಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಯು ಅಗತ್ಯ , ಕ್ರೀಡೆಗಳಲ್ಲಿ ಸೋಲು ಗೆಲುವು ಸಮನವಾಗಿ ಸ್ವೀಕರಿಸಿ ಎಂದು ಶುಭ ಹಾರೈಸಿದರು.ಕ್ರೀಡಾಕೂಟದ ಪಥ ಸಂಚಲನದ ದ್ವಜ ವಂದನೆ ಮತ್ತು ಅದ್ಯಕ್ಷತೆಯನ್ನು ಕೆಯ್ಯೂರು ಗ್ರಾ.ಪಂ.ಉಪಾದ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ ವಹಿಸಿ ಸ್ಪೂರ್ತಿದಾಯಕ ಮಾತುಗಳಿಂದ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್, ಎಸ್.ಡಿ.ಸಿ.ಸದಸ್ಯರಾದ ಯಶಸ್ವಿನಿ, ಶಾಹಿನಾ, ಆಯುಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು,ಮಕ್ಕಳ ಪೋಷಕರು, ಉಪಾನ್ಯಸಕರು, ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ವಿಧ್ಯಾರ್ಥಿಗಳು, ಉಪಸ್ಥಿತರಿದ್ದರು ಕ್ರೀಡಾಕೂಟದ ಪ್ರಾಯೋಜಕತ್ವವನ್ನು ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ.ಪಿ. ನಿರ್ವಹಿಸಿದರು.
ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ .ಪಿ ವಂದಿಸಿ, ಕಾರ್ಯಕ್ರಮ ನಿರೂಪಣೆಯನ್ನು ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಪದವೀದೇತರ ಮುಖ್ಯ ಗುರು ಬಾಬು.ಎಂ. ಕೆಪಿಎಸ್ ಕೆಯ್ಯೂರು ಶಿಕ್ಷಕ ಬಾಲಕೃಷ್ಣ ನಿರ್ವಹಿಸಿದರು.