ರಾಮಕುಂಜ: ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿರುವ ಜನನಿ ಎನ್ಕ್ಲೇವ್ ಕಾಂಪ್ಲೆಕ್ಸ್ನಲ್ಲಿ ಶ್ರೀ ಜನನಿ ಗಾರ್ಮೆಂಟ್ಸ್ ಡಿ.15ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ನರಹರಿ ಇರ್ಕಿಮಠ ಹಾಗೂ ಕೃಷ್ಣರಾಜ ತೋಟಂತಿಲ ಅವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿ, ಜನನಿ ಎನ್ಕ್ಲೇವ್ ಕಾಂಪ್ಲೆಕ್ಸ್ನ ಮಾಲಕರೂ ಆದ ಕೆ.ಸೇಸಪ್ಪ ರೈಯವರು ಉದ್ಘಾಟಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಕೆ.ಸೇಸಪ್ಪ ರೈ ಅವರು, ಶ್ರೀ ಜನನಿ ಗಾರ್ಮೆಂಟ್ಸ್ ಮೂಲಕ ಊರಿನ ಜನರಿಗೆ ತೃಪ್ತಿದಾಯಕ ಸೇವೆ ಸಿಗಲಿ. ಮಾಲಕರಿಗೂ ಸೇವೆಯಲ್ಲಿ ಸಂತೃಪ್ತಿ ಸಿಗಲಿ. ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್ರವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡಿರುವ ಶ್ರೀ ಜನನಿ ಗಾರ್ಮೆಂಟ್ಸ್ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು. ಅತಿಥಿಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಹಾಸ ರೈ ಬುಡಲ್ಲೂರು ಶುಭಹಾರೈಸಿದರು. ಮಾಲಕರಾದ ಸದಾನಂದ ಆಚಾರ್ಯ ಶಾರದಾನಗರ, ವೇದ ಸದಾನಂದ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಜನನಿ ಎನ್ಕ್ಲೇವ್ ಕಾಂಪ್ಲೆಕ್ಸ್ನ ಮಾಲಕರಾದ ಕೆ.ಸೇಸಪ್ಪ ರೈ ಹಾಗೂ ಪುಷ್ಪಾ ಎಸ್ ರೈ ದಂಪತಿಗೆ ಶಾಲು, ಫಲತಾಂಬೂಲ, ಮಾಲಾರ್ಪಣೆ ಮಾಡಿ ಜನನಿ ಗಾರ್ಮೆಂಟ್ಸ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರು ಕೋಡಿಕ್ಕಲ್ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಾಹ್ನವಿ ಆರ್.ಶೆಟ್ಟಿ, ಭರತ್ ಪುತ್ತೂರು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಗೋಳಿತ್ತೊಟ್ಟು ವಲಯ ಮೇಲ್ವಿಚಾರಕರಾದ ಸುಜಾತ, ಶೀಲಾ, ವಲಯದ ಸೇವಾಪ್ರತಿನಿಧಿಗಳು, ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಬಾನಡ್ಕ, ಶ್ರೀದುರ್ಗಾ ಶಾಮಿಯಾನ ಮಾಲಕ ನವೀನ್, ರಮ್ಯ ನವೀನ್, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ ಹಾಗೂ ಶಿಕ್ಷಕರು, ಪ್ರಮುಖರಾದ ಎ.ಎನ್.ಕೊಳಂಬೆ ಶಾರದಾನಗರ, ಆನಂದ ಇರ್ಕಿ, ಪದ್ಮನಾಭ ಶೆಟ್ಟಿ ನೆಕ್ಕರೆ, ಗಿರೀಶ್ ಗೋಣಿಕೊಪ್ಪ, ಯಶೋಧ ಕಡಬ, ಗೀತಾಅಜೀಶ್ ಶಿರೂರು, ಪೂರ್ಣಿಮಾ ಮೋಹನ್ ಮಂಗಳೂರು, ಶೋಭಾವಸಂತ ಅನಂತಾಡಿ, ಪುರಂದರ ಕುಂತೂರು, ಸ್ವಪ್ನಾಪುರಂದರ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು. ಸೇವಾಪ್ರತಿನಿಧಿ ನವೀನ್ ಸ್ವಾಗತಿಸಿದರು. ಹರೀಶ್ ಬಾರಿಂಜ ನಿರೂಪಿಸಿ, ವಂದಿಸಿದರು. ರಾಮಚಂದ್ರ ಹೂಂತಿಲ ಪ್ರಾರ್ಥಿಸಿದರು.
ಲಭ್ಯವಿರುವ ಸೇವೆಗಳು:
ಮಾಲಕರಾದ ವೇದ ಸದಾನಂದ ಆಚಾರ್ಯ ಹಾಗೂ ಪ್ರೇಮಾ ರಾಮಕುಂಜ ಅವರು ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿ, ನಮ್ಮಲ್ಲಿ ಚೂಡಿದಾರ್, ಸಾರಿ, ಬ್ಲೌಸ್, ಶರ್ಟ್, ಪ್ಯಾಂಟ್, ಶಾಲಾ ಕಾಲೇಜು ಮಕ್ಕಳ ಯುನಿಫಾರಂ ಮತ್ತು ಎಲ್ಲಾ ರೀತಿಯ ಬಟ್ಟೆಗಳ ಹೊಲಿಗೆಗಳು ಹಾಗೂ ಮದುವೆಯ ಸಾರಿ ಮತ್ತು ಬ್ಲೌಸ್ಗಳ ಎಲ್ಲಾ ರೀತಿಯ ಎಂಬ್ರಾಯಿಡರಿ ಮಾಡಿಕೊಡಲಾಗುವುದು ಎಂದು ಹೇಳಿ ಸಹಕಾರ ಕೋರಿದರು.