ಕೆಯ್ಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು, ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಇವುಗಳ ಆಶ್ರಯದಲ್ಲಿ ಶಾಲಾ ಕಾಲೇಜು, ಮಕ್ಕಳ ವಲಯ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಸಪ್ತಾಹ 2023 ಕೆಪಿಎಸ್ ಕೆಯ್ಯೂರು ಶಾಲಾ ಸಭಾಂಗಣದಲ್ಲಿ ದ.16ರಂದು ನಡೆಯಿತು.
ಕೆಯ್ಯೂರು ಒಕ್ಕೂಟ ಅಧ್ಯಕ್ಷ ಚಂದ್ರಶೇಖರ ಕೆ.ಎಸ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ದುಶ್ಚಟಗಳ ಸಹವಾಸದಿಂದ ಎದುರಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುತ್ತಿರುವ ಜನಜಾಗೃತಿಯ ಕಾರ್ಯ ಶ್ಲಾಘನೀಯ, ಜನರು ಮಾದಕ ವ್ಯಸನಿಗಳಿಗೆ ಬಲಿಯಾಗುವುದನ್ನು ತಪ್ಪಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಂಘಟಕರ ಕಾರ್ಯ ಸಂತೋಷದಾಯಕ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ಸ್ವಾಸ್ಥ್ಯ ಸಂಕಲ್ಪದ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟಾಗ ಮಾತ್ರ ಒಳ್ಳೆಯ ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಯುವ ಜನತೆ, ವಿದ್ಯಾರ್ಥಿಗಳು ದುಶ್ಚಟ ಮುಕ್ತ ಜೀವನವನ್ನು ನಡೆಸಬೇಕು. ಜತೆಗೆ ದುಶ್ಚಟಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವನ್ನು ಮೂಡಿಸಿ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದ ಮಾಹಿತಿ, ಮಾರ್ಗದರ್ಶನ ಪಡೆದುಕೊಂಡರು. ದ.14 ರಂದು ನಡೆದ ವಾರ್ಷಿಕ ಕ್ರೀಡಾಕೂಟದ ವಿಜೇತ ವಿಧ್ಯಾರ್ಥಿಗಳಿಗೆ ಶಾಲಾ ವತಿಯಿಂದ ಪ್ರಶಸ್ತಿ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕೆಯ್ಯೂರು ಒಕ್ಕೂಟದ ಮಾಜಿ ಅದ್ಯಕ್ಷ ಸತೀಶ್ ಕಣಿಯಾರು, ಪ್ರೌಢಶಾಲಾ, ಕಾಲೇಜು ವಿಭಾಗದ ಉಪನ್ಯಾಸಕರು, ಶಿಕ್ಷಕ ವೃಂದ, ಸಹಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಪ್ರಾಸ್ತವಿಕವಾಗಿ ಸ್ವಾಗತಿಸಿ, ಪ್ರೌಡಶಾಲಾ ವಿಭಾಗದ ಶಿಕ್ಷಕ ಮೋಲಿ ವಿಲ್ಮಾ ಪಿಂಟೋ ವಂದಿಸಿ, ಕೆದಂಬಾಡಿ ವಲಯ ಮೇಲ್ವಿಚಾರಕಿ ಶುಭವತಿ ಪಿ.ಸಿ ಕಾರ್ಯಕ್ರಮ ನಿರೂಪಿಸಿ, ಕೆಯ್ಯೂರು ಕಾರ್ಯಕ್ಷೇತ್ರ ಸೇವಾಪ್ರತಿನಿದಿ ವಾರಿಜ ವೈ, ದೇವಿನಗರ ಕಾರ್ಯಕ್ಷೇತ್ರ ಸೇವಾಪ್ರತಿನಿಧಿ ಶ್ರೀಮತಿ ಸಹಕರಿಸಿದರು.