




ಈಶ್ವರಮಂಗಲ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ವಲಯದ ವಾರ್ಷಿಕೋತ್ಸವದ ಕುರಿತು ಪೂರ್ವಭಾವಿ ಸಭೆ ಈಶ್ವರ ಮಂಗಲ ಅನುಗ್ರಹ ಹಾಲ್ ನಲ್ಲಿ ನಡೆಯಿತು. ವೇದಿಕೆಯಲ್ಲಿ ವಲಯ ಅಧ್ಯಕ್ಷ ಶಿವರಾಮ ಪೂಜಾರಿ ಕೆರೆ ಮಾರು ಹಾಗೂ ಪುತ್ತೂರು ತಾಲೂಕು ಮೇಲ್ವಿಚಾರಕಿ ಸವಿತಾ ರೈ ನೆಲ್ಲಿ ತಡ್ಕ ಉಪಸ್ಥಿತಿಯಲ್ಲಿ ವಲಯ ಸಂಯೋಜಕಿ ಮಹಿತಾ ರೈ ಇವರು ಕಾರ್ಯಕ್ರಮದ ಜವಾಬ್ದಾರಿಯನ್ನು ಪದಾಧಿಕಾರಿಗಳಿಗೆ ವಿಸ್ತರಿಸಿದರು.



ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಸೀತಾರಾಮ ರೈ ಕಲ್ಲಡ್ಕ ಗುತ್ತು ಕಾರ್ಯದರ್ಶಿ ತಾರಾನಾಥ ನೂಜಿಬೈಲು ಸಂಘಟನಾ ಕಾರ್ಯದರ್ಶಿ ಅಪ್ಪೋಜಿ ಇವರು ಉಪಸ್ಥಿತರಿದ್ದರು. ಸೇವಾ ದೀಕ್ಷಿತರಾದ ಭಾಗ್ಯಶ್ರೀ ಪುಲಿ ಮಾರಡ್ಕ. ಅನುರಾಧ, ದಿವ್ಯ ಶ್ರೀ ಹಾಗೂ. ಕಾವು, ಪೇರ್ಲಂಪಾಡಿ, ಮೈಂದನಡ್ಕ, ಪಡುಮಲೆ, ದೇಲಂಪಾಡಿ, ಅಡೂರು, ಕುಂಟಾರು, ಕರ್ನೂರ್, ಈಶ್ವರ ಮಂಗಲ ಘಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬಾಬು ಸ್ವಾಗತಿಸಿ,ಅಮೃತ ವಂದಿಸಿದರು.














