ಕೊಂಡಾಡಿಕೊಪ್ಪ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ, ಸ್ಥಳೀಯರ ಕ್ರೀಡಾಕೂಟ

0

ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪ ಇದರ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಹಿರಿಯ ವಿದ್ಯಾರ್ಥಿಗಳ ಮತ್ತು ಸ್ಥಳೀಯರ ಕ್ರೀಡಾಕೂಟವು ಕೊಂಡಾಡಿಕೊಪ್ಪ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಾಲು ಉತ್ಪಾದಕರ ಸಹಕಾರಿ ಸಂಘ ಆಲಂಕಾರು ಇದರ ಉಪಾಧ್ಯಕ್ಷರಾದ ಪರಮೇಶ್ವರ ಗೌಡ ಕೊಂಡಾಡಿಕೊಪ್ಪ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಡಾಡಿಕೊಪ್ಪ ಶಾಲಾ ಶಾಲಾಭಿವೃದ್ಧಿ ಸಮಿತಿ ಪೂರ್ವಾಧ್ಯಕ್ಷರಾದ ಶೀನಪ್ಪ ಕುಂಬಾರ ವಹಿಸಿದ್ದರು.ಕಾರ್ಯಕ್ರಮದಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ನಗ್ರಿ ಶಾಲಾಭಿವೃದ್ಧಿ ಸಮಿತಿ ಸ್ಥಾಪಕಾಧ್ಯಕ್ಷರಾದ ವಾಮನ ದೇವಾಡಿಗ ಪೂರ್ವಾಧ್ಯಕ್ಷರಾದ ಮೇದಪ್ಪ ಕುಂಬಾರ ಶ್ರೀಧರ ಪೂಜಾರಿ ಸನ್ನಿಧಿ ಅರ್ತ್ ಮೂವರ್ಸ್ ನ ಅಶೋಕ ಶರವೂರು ಉಪಸ್ಥಿತರಿದ್ದರು . ಮೋಹನ ಕಮಿತ್ತಿಲು ಲತಾ ಶರವೂರು ಆರ್ ದಿವಾಕರ ಕುಂಬಾರ ವಾಸಪ್ಪಕುಂಬಾರ ಚಂದ್ರಶೇಖರ ಕುಂಬಾರ ಆಶಾ ಕೊಂಡಾಡಿಕೊಪ್ಪ ರೇವತಿ ಶರವೂರು ಅತಿಥಿಗಳನ್ನು ಗೌರವಿಸಿದರು.ಶಾಲಾ ಮುಖ್ಯ ಗುರು ಜಯಂತ್ ವೈ ಸ್ವಾಗತಿಸಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್ ಕೊಂಡಾಡಿಕೊಪ್ಪ ವಂದಿಸಿದರು.ಶಾಲಾ ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here