ಡಿ.20: ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ

0

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮಿಯವರ ದಿವ್ಯ ಮಾರ್ಗದರ್ಶನದಲ್ಲಿ ಡಿ.20ರಿಂದ ಡಿ.26ರ ವರೆಗೆ ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ಸುಸಂದರ್ಭ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಇವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹವು ನಡೆಯಲಿದೆ.
ಡಿ.20ರಂದು ಬೆಳಗ್ಗೆ ಘಂಟೆ 9.೦೦ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ, ಘಂಟೆ 9.3೦ರಿಂದ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದತ್ತಮಾಲಾಧಾರಣೆ ನಡೆಯಲಿದೆ. ಘಂಟೆ 1೦.3೦ಕ್ಕೆ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ ಘಂಟೆ 12.30ರಿಂದ ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದೆ.
ಅಪರಾಹ್ನ 2.೦೦ಘಂಟೆಗೆ ‘ಆದಿನಾರಾಯಣ ದರ್ಶನ’ ಯಕ್ಷಗಾನ ತಾಳಮದ್ದಳೆ, ಸಂಜೆ ಘಂಟೆ 6.೦೦ರಿಂದ ಶ್ರೀ ದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ, ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ. ಸಂಜೆ ಗಂಟೆ 6.3೦ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ರಾಜಾಂಗಣದ ಮುಂಭಾಗ ‘ಭಾರತ ಜನನಿ’ ಯಕ್ಷಗಾನ ಬಯಲಾಟ ನಡೆಯಲಿದೆ.
ಡಿ.2೦ರಿಂದ ಡಿ. 26ರ ತನಕ ಪ್ರತಿದಿನ ಬೆಳಿಗ್ಗೆ ವೇದ-ಗುರುಚರಿತ್ರೆ ಪಾರಾಯಣ. ಘಂಟೆ 10.30ರಿಂದ ಶ್ರೀಮದ್ಭಾಗವತ ಪ್ರವಚನ, ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ, ಮಹಾಸಂತರ್ಪಣೆ, ಅಪರಾಹ್ನ ಘಂಟೆ 2.೦೦ರಿಂದ ಯಕ್ಷಗಾನ ತಾಳಮದ್ದಳೆ ರಾತ್ರಿ ಘಂಟೆ 7.೦೦ರಿಂದ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ ಜರಗಲಿದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here