ನೆ.ಮುಡ್ನೂರು ಸರಕಾರಿ ಪ್ರೌಢಶಾಲಾ ಕ್ರೀಡಾಕೂಟ

0

ಈಶ್ವರಮಮಗಲ: ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿ ಶಾಲಾ ಕ್ರೀಡಾಕೂಟ ವಿದ್ಯಾರ್ಥಿಗಳ ಪಥ ಸಂಚಲನದೊಂದಿಗೆ ಪ್ರಾರಂಭವಾಯಿತು. ಪ್ರೌಢಶಾಲಾ ಕಾರ್ಯಾಧ್ಯಕ್ಷ ಶ್ರೀ ರಾಮ್ ಪಕ್ಕಳ ಕರ್ನೂರು ಗುತ್ತು ವಂದನೆ ಸ್ವೀಕರಿಸಿದರು. ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯ ವೆಂಕಪ್ಪ ನಾಯ್ಕ ನೆರವೇರಿಸಿದರು. ವಿದ್ಯಾರ್ಥಿಗಳು ಆಶಯ ಗೀತೆ ಹಾಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಶಿರ್ಲಾಲು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಶಾಲಾ ಕ್ರೀಡಾಪಟುಗಳು ಶಾಲಾ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ನೆಟ್ಟಣಿಗೆ ಮುಡೂರು ಗ್ರಾಮ ಪಂಚಾಯತಿ ಸದಸ್ಯರಾದ ಇಬ್ರಾಹಿಂ ಪಲ್ಲತ್ತೂರು ಮಾತನಾಡಿ ನಮ್ಮ ಶಾಲೆಯು ಕ್ರೀಡಾಕೂಟದಲ್ಲಿ. ಉತ್ತಮ ಸಾಧನೆ ಮಾಡುತ್ತಿದ್ದು ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿ ಸಾಧಕ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮ ಪಂಚಾಯತ್ ಸದಸ್ಯ ವೆಂಕಪ್ಪ ನಾಯ್ಕ ಮಾತನಾಡಿ ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಎಲ್ಲರೂ ಕ್ರೀಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆಯನ್ನು ಮಾಡಬೇಕು ಎಂದರು.

ಶಾಲಾ ಶಿಕ್ಷಣ ತಜ್ಞರಾದ ಮಹಾಬಲ ರೈ ಕರ್ನೂರು ಮಾತನಾಡಿ ಕ್ರೀಡಾ ಸಾಧನೆ ಮಾಡಲು ನಿರಂತರ ಅಭ್ಯಾಸ ಮಾಡಬೇಕು ಇದರಿಂದ ಉತ್ತಮ ಕ್ರೀಡಾಪಟುಗಳು ಸಿದ್ಧಗೊಳ್ಳುತ್ತಾರೆ. ಇಲ್ಲಿಯ ವಿದ್ಯಾರ್ಥಿಗಳು. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ. ಉಪಾಧ್ಯಕ್ಷ ರಾಮ ಮೇನಾಲ. ನಿಕಟ ಪೂರ್ವ ಅಧ್ಯಕ್ಷ ರಮೇಶ್ ರೈ ಸಾಂತ್ಯ. ಶಿಕ್ಷಣ ತಜ್ಞರಾದ ಸದಾಶಿವ ರೈ . ಪಂಚಾಯತ್ ಸದಸ್ಯರಾದ ಪ್ರದೀಪ ರೈ ಕರ್ನೂರು. ಕುಮಾರನಾಥ ಪೂಜಾರಿ. ಪ್ರಗತಿಪರ ಕೃಷಿಕರಾದ ಮೂಸಾನ್ ಕರ್ನೂರು. ಅಬ್ದುಲ್ ಖಾದರ್ ನರಸಿನಡ್ಕ, ಮಹಮ್ಮದ್ ಪಳ್ಳತ್ತೂರು. ಪ್ರವೀಣ್ ರೈ ಮೇನಾಲ. ಮಹಾಬಲ ಪೂಜಾರಿ ಮೇನಾಲ. ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.ಸಭಾಧ್ಯಕ್ಷತೆಯನ್ನು ವಹಿಸಿದ್ದ ಪ್ರೌಢಶಾಲೆ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ಮಾತನಾಡಿ ಸುವ್ಯವಸ್ಥಿತವಾಗಿ ಸಂಘಟಿಸಿದ ಕ್ರೀಡಾಕೂಟದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿ ನಮ್ಮೂರಿಗೆ ಕೀರ್ತಿಯನ್ನು ತರಬೇಕು ಎಂದರು.


ಶಾಲಾ ಮುಖ್ಯೋಪಾಧ್ಯಾಯರಾದ ಪ್ರೇಮ್ ಕುಮಾರ್ ಸ್ವಾಗತಿಸಿದರು. ಕ್ರೀಡಾ ಪ್ರತಿಜ್ಞೆಯನ್ನು ಮಾಡಿದರು. ಶಿಕ್ಷಕರಾದ ಉದಯ ಎಸ್. ಯಶೋದ. ದಮಯಂತಿ. ಹೇಮಾವತಿ. ವಿವಿಧ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಇಂದಿರಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ದೇವಿ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here