ಚಾರ್ವಾಕದಲ್ಲಿ ಜಾತಿನಿಂದನೆ – ವ್ಯಕ್ತಿಗೆ ಹಲ್ಲೆ ಆರೋಪ – ಹಲ್ಲೆಗೊಳಗಾದ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಿದ ಶಾಸಕ ಅಶೋಕ್ ರೈ

0

ಪುತ್ತೂರು: ಚಾರ್ವಾಕದಲ್ಲಿ ಹಲ್ಲೆಗೊಳಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತ ಮನೋಹರ್‌ ನನ್ನು ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಸಾಂತ್ವಾನ ಹೇಳಿದ್ದಾರೆ. ಬಳಿಕ ಮಾದ್ಯಮದೊಂದಿಗೆ ಮಾತನಾಡಿದ ಶಾಸಕ ರೈ ಘಟನೆ ಪಕ್ಷ ಪಕ್ಷದೊಳಗೆ ನಡೆದಿದೆಯೇ, ವೈಯಕ್ತಿಕವಾಗಿ ನಡೆದಿದೆಯೋ ಗೊತ್ತಿಲ್ಲ, ಯಾವುದೇ ಸತ್ಯಾಸತ್ಯತೆ ತಿಳಿಯದೆ ಮಾತನಾಡುವುದು ಸರಿಯಲ್ಲ , ಪೊಲೀಸರ ತನಿಖೆಯ ಬಳಿಕ ಸಂಪೂರ್ಣ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ. ಯಾವುದೇ ಸಮಯದಲ್ಲಿ ಪಕ್ಷ ಪಕ್ಷಕ್ಕಾಗಿ ನಾವು ಇಂತಹ ಕೆಲಸ ಮಾಡಬಾರದು. ಕಾರ್ಯಕರ್ತರು ನಾಯಕರ ಮಾತನ್ನು ಕೇಳಿಕೊಂಡು ಹೊಡೆದಾಡಿಕೊಳ್ಳಲು ಹೋಗಬಾರದು, ದೊಡ್ಡಮಟ್ಟದಲ್ಲಿ ನಾಯಕರೆಲ್ಲರೂ ಕೂಡ ಒಂದೇ, ತಳಮಟ್ಟದ ಕಾರ್ಯಕರ್ತರು ಈ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಅಭಿವೃದ್ಧಿ ಮೂಲಕ ಓಟು ಪಡೆಯುವ ಕೆಲಸವನ್ನು ನಾವು ಮಾಡಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಡಿ.17ರಂದು ಮನೋಹರ್‌ ಮನೆಗೆ ನುಗ್ಗಿದ ಕೆಲವು ದುಷ್ಕರ್ಮಿಕರು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು.

LEAVE A REPLY

Please enter your comment!
Please enter your name here