ಕುಂಬ್ಲಾಡಿ ಮಾಚಿಲ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ, ರಂಗಪೂಜೆ

0

ಕಾಣಿಯೂರು: ಕುಂಬ್ಲಾಡಿ ಮಾಚಿಲ ಶ್ರಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಮತ್ತು ರಂಗಪೂಜೆಯು ಡಿ 18ರಂದು ನಡೆಯಿತು. ಬೆಳಿಗ್ಗೆ ಗಣಹೋಮ, ಕೊಪ್ಪರಿಗೆ ಏರಿಸುವುದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಭಜನೆ ಕಾರ್ಯಕ್ರಮ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಚಂದ್ರಕಲಾ ಜಯರಾಮ್ ಅರುವಗುತ್ತು,ಪ್ರದೀಪ್ ಆರ್ ಗೌಡ ಅರುವಗುತ್ತು,ಆಡಳಿತ ಮೊಕ್ತೇಸರರಾದ ನಾರ್ಣಪ್ಪ ಗೌಡ ಮಾಚಿಲ,ಅರ್ಚಕ ಗಣಪತಿ ಭಟ್, ಆಡಳಿತ ಪಂಗಡದ ಸಂಚಾಲಕ ಶೀನಪ್ಪ ಗೌಡ ಮಾಚಿಲ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು, ಕೂಡುಕಟ್ಟಿನವರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here