ಜೋಸ್ ಆಲುಕ್ಕಾಸ್ ಸಂಸ್ಥೆಯು ವಿದ್ಯಾಸಂಸ್ಥೆಗಳಿಗೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ-ರಮೇಶ್ ಗೌಡ
ಪುತ್ತೂರು: ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಪುತ್ತೂರಿನ ಹೃದಯ ಭಾಗದಲ್ಲಿರುವ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ತನ್ನ ಸಿಎಸ್ಆರ್ ಫಂಡ್ನಿಂದ ವಿದ್ಯಾಸಂಸ್ಥೆಗಳಿಗೆ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ, ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆದು ಯಶಸ್ಸನ್ನು ಕಾಣಲಿ ಎಂದು ಮುಂಡೂರು ಸ.ಉ.ಹಿ.ಪ್ರಾ. ಎಸ್ಡಿಎಂಸಿ ಅಧ್ಯಕ್ಷ ರಮೇಶ ಗೌಡ ಪಜಿಮಣ್ಣು ತಿಳಿಸಿದರು. ಮುಂಡೂರು ಶಾಲೆಗೆ ಜೋಸ್ ಆಲುಕ್ಕಾಸ್ ಸಂಸ್ಥೆಯ ವತಿಯಿಂದ 1 ಲಕ್ಷ ರೂ. ಮೌಲ್ಯದ ನಲಿ-ಕಲಿ ತರಗತಿಗಳಿಗೆ ಕುರ್ಚಿ ಹಾಗೂ ಟೇಬಲ್ಗಳ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೋಸ್ ಆಲುಕ್ಕಾಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರತೀಶ್ ಕೊಡುಗೆಗಳನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನರಿಮೊಗರು ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಶುಭ ಹಾರೈಸಿದರು.ಸಂಸ್ಥೆಯ ಅಸಿಸ್ಟೆಂಟ್ ಡೈರೆಕ್ಟರ್ ರಾಜೇಶ್, ಮುಂಡೂರು ಗ್ರಾ.ಪಂ ಸದಸ್ಯರು, ಮುಂಡೂರು ಶಾಲಾ ಎಸ್ಡಿಎಂಸಿ ನಾಮನಿರ್ದೇಶದ ಸದಸ್ಯರು ಆಗಿರುವ ಉಮೇಶ್ ಅಂಬಟ, ಎಸ್ಡಿಎಂಸಿ ಉಪಾಧ್ಯಕ್ಷೆ ಸಂಗೀತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೋಸ್ ಆಲುಕಾಸ್ ಸಂಸ್ಥೆಯ ಜನರಲ್ ಮ್ಯಾನೇಜರ್ ಡೈರೆಕ್ಟರ್ ರತೀಶ್ ಇವರನ್ನು ಶಾಲಾ ಪರವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯಗುರು ವಿಜಯ ಪಿ ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರು. ಜಿಪಿಟಿ ಶಿಕ್ಷಕಿ ಅನ್ನಪೂರ್ಣ ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಬಿ ವನಿತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.