





ಪುತ್ತೂರು: ಉತ್ತರ ಪ್ರದೇಶದ ಲಕ್ನೋದಲ್ಲಿ ಡಿ.16ರಿಂದ 20ರವರೆಗೆ ನಡೆಯುತ್ತಿರುವ 14ರ ವಯೋಮಾನದ 67ನೇ ರಾಷ್ಟ್ರಮಟ್ಟದ ( ಎಸ್ ಜಿ ಎಫ್ ಐ) ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೀರ್ತಿ ಜಿ ಎಂ 8ನೇ ತರಗತಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.ಕರ್ನಾಟಕ ವಿದ್ಯಾಭಾರತಿ ವತಿಯಿಂದ ನಡೆದ ಅಥ್ಲೆಟಿಕ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎತ್ತರ ಜಿಗಿತ ಮತ್ತು 4*100ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಎಸ್ ಜಿ ಏಫ್ ಐ ಗೆ ಆಯ್ಕೆಯಾಗಿದ್ದರು ಮಾತ್ರವಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ದ.ಕ ಜಿಲ್ಲೆಯ ಪುತ್ತೂರು ತಾಲೂಕು ಬೆಟ್ಟಪ್ಪಾಡಿ ಗ್ರಾಮದ ಗುಮ್ಮಟ ಗದ್ದೆಯ ಮೋನಪ್ಪ ಗೌಡ ಮತ್ತು ಲಲಿತ ಕೆ ದಂಪತಿಯ ಪುತ್ರಿ.
















