ಪೆರ್ನಾಜೆ:ಉಜಿರೆಎಸ್ ಡಿ ಎಂ ಕಾಲೇಜ್ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಕೃಷಿ ವೀಕ್ಷಣೆ, ಸಂದರ್ಶನ

0

ಪೆರ್ನಾಜೆ: ಡಿ .17 ಸಿಮೆಂಟ್ ಶೀಟ್ ನಲ್ಲೂ ಪುತ್ತೂರು ಕೃಷಿಕನ ನೂತನ ಆವಿಷ್ಕಾರ ಎಂಬ ಶಿರ್ಷಿಕೆಯ ಕವರ್ ಸ್ಟೋರಿಗಾಗಿ ಎಸ್ ಡಿ ಎಂ ಕಾಲೇಜ್ ಉಜಿರೆಯ ವಿದ್ಯಾರ್ಥಿಗಳಾದ ನೈದಿಲೆ I MCJ, ನಮಿತಾ I MCJ ,ಸಮರ್ಥ್ ಭಟ್ IIMCJ ,ಪ್ರಸನ್ನ ಗೌಡ I MCJ ,ಅವರ ತಂಡ ಪುತ್ತೂರು ತಾಲೂಕಿನ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆಯರನ್ನು ಸಂದರ್ಶಿಸಿದರು.

ವಿವಿಧ ಚಾನಲ್ ಗಳಿಗಾಗಿ ಈ ಸಂದರ್ಶನ ನಡೆಸಿದ್ದು ಸಿಮೆಂಟ್ ಶೀಟ್ ನಲ್ಲಿ ಜೇನು ಪೆಟ್ಟಿಗೆ ,ಜೇನು ಕೃಷಿ ಮುಜಂಟಿ ಜೇನು ,ಹನಿ ಪಾರ್ಕ್ , ಕಾಫಿ ಕಾಳು ಮೆಣಸು,ಜೇನು ಪೆಟ್ಟಿಗೆ ಯನ್ನು ತಯಾರಿಸುವ ಮುಂತಾದ ವೈವಿಧ್ಯಮಯ ಕೃಷಿ ಬಗ್ಗೆ ವಿಡಿಯೋ ಫೋಟೋಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸೌಮ್ಯ ಪೆರ್ನಾಜೆ, ನಂದನ್ ,ಚಂದನ್ ಸಹಕರಿಸಿದರು

ಕೃಷಿಕ ಕುಮಾರ್ ಪೆರ್ನಾಜೆ ಈ ಹಿಂದೆ ಅಡಿಕೆಗೆ ಔಷಧಿ ಸಿಂಪಡಿಸುವ ಬೋರ್ಡ ದ್ರಾವಣ ಟೆಕ್ನಿಕ್, ಮಂಗಗಳ ಹಾವಳಿಗೆ ಕೋತಿ ಕೋವಿ ಹೀಗೆ ಹಲವಾರು ಆವಿಷ್ಕಾರಗಳನ್ನು ಮಾಡಿದ್ದಾರೆ.

LEAVE A REPLY

Please enter your comment!
Please enter your name here