ಪುತ್ತೂರು: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್ )ಧಾರವಾಡ, ಸಂಜೀವಿನಿ -ಕೆಎಸ್ಆರ್ಎಲ್ಪಿಎಸ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್ ಪುತ್ತೂರು ಹಾಗೂ ಆರ್ಯಾಪು ಗ್ರಾಮ ಪಂಚಾಯತ್ ಸಂಯೋಜನೆಯಲ್ಲಿ ಸಂಜೀವಿನಿ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಆಯೋಜಿಸಿದ ೬ ದಿನಗಳ ಉದ್ಯಮ ಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಆರ್ಯಾಪು ಗ್ರಾಮ ಪಂಚಾಯತ್ನಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಗೀತಾ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಪಿಡಿಒ ನಾಗೇಶ ಎಂ., ಸಂಪನ್ಮೂಲ ವ್ಯಕ್ತಿ ಸವಿತಾ, ಸರೋವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಭಾರತಿ, ಸಿಡಾಕ್ ಸಂಸ್ಥೆ ಜಿಲ್ಲಾ ಕೋ ಆರ್ಡಿನೇಟರ್ ಶ್ರೀಮತಿ ಪ್ರವಿಶ, ಕೃಷಿಯೇತರ ಚಟುವಟಿಕೆ ತಾಲೂಕು ವ್ಯವಸ್ಥಾಪಕ ನಳಿನಾಕ್ಷಿಯವರು ಶುಭಹಾರೈಸಿದರು. ಸಿಡಾಕ್ ಸಂಸ್ಥೆಯ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯತಿನ ಸಿಬ್ಬಂದಿಗಳು ಹಾಜರಿದ್ದರು.