ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ ‘ಸಪ್ತೋತ್ಸವ’ದ ಸಂದರ್ಭ ನಡೆದ ಡ್ರಾದಲ್ಲಿ ವಿಜೇತ ಏಳು ಮಂದಿ ಗ್ರಾಹಕರಿಗೆ ಚಿನ್ನದ ನಾಣ್ಯ ವಿತರಣೆ

0

ವಿಟ್ಲ: ವಿಟ್ಲ – ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಪ್ತ ಜ್ಯುವೆಲ್ಸ್ ಚಿನ್ನಾಭರಣ ಮಳಿಗೆಯಲ್ಲಿ ಏಳನೇ ವರ್ಷಾಚರಣೆ ಪ್ರಯುಕ್ತ ಆಯೋಜನೆ ಮಡಿರುವ ‘ಸಪ್ತೋತ್ಸವ’ ದ ಸಂದರ್ಭದಲ್ಲಿ ಆಯೋಜನೆ ಮಾಡಿರುವ ಲಕ್ಕಿಡ್ರಾ ದಲ್ಲಿ ಏಳುಮಂದಿ ಗ್ರಾಹಕರು ಚಿನ್ನದ ನಾಣ್ಯ ಗೆದ್ದಿದ್ದಾರೆ.

ಸಪ್ತ ಜ್ಯುವೆಲ್ಸ್ ತನ್ನ ಏಳನೇ ವರ್ಷಾಚರಣೆ ಪ್ರಯುಕ್ತ ಸಂಸ್ಥೆಯಲ್ಲಿ ಏಳುದಿನಗಳ ಕಾಲ ವಿಶೇಷ ಕೊಡುಗೆ ಗಳೊಂದಿಗೆ ಪ್ರತಿ ದಿನ ಓರ್ವ ಗ್ರಾಹಕರಿಗೆ ಚಿನ್ನದ ನಾಣ್ಯ ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿತ್ತು. ಇದರಲ್ಲಿ ಬೆಂಗಳೂರು ನಿವಾಸಿ ಸಾಯಿ ವಿನೋದ್, ಪಾಲ್ತಾಜೆ ನಿವಾಸಿ ಅಶ್ವಿನಿ ಬಿ.ಕೆ., ಧರ್ಮಸ್ಥಳ ಅಗ್ರಹಾರ ನಿವಾಸಿ ಗುರುಕಿರಣ್,ಪಾಂಡೇಲು ನಿವಾಸಿ ಚೈತ್ರ,ಮುರುವ ನಿವಾಸಿ ವೀಣಾ ಸರಸ್ವತಿ, ಪೈಸಾರಿ ನಿವಾಸಿ ಶ್ರೀನಿಧಿ, ಖಂಡಿಗೆ ನಿವಾಸಿ ರಾಜೇಶ್ ಶೆಟ್ಟಿ ರವರು ಚಿನ್ನದ ನಾಣ್ಯ ವಿಜೇತರಾದರು.


ಚಂದಳಿಕೆ ನಿವಾಸಿ ಜತ್ತಪ್ಪ ಎಮ್, ವೀಣಾ ಭಟ್, ಕನ್ಯಾನ ಅಕ್ಕೆರಿಕೊಡಿ ನಿವಾಸಿ ಯಮುನಾ, ಸೇರಾಜೆ ನಿವಾಸಿ ಸುಧಾ, ನೀರ್ಚಾಲು ನಿವಾಸಿ ವಾಸು ಎನ್.,
ಕಾಸರಗೋಡು ಗುಡ್ಡೆಟೆಂಪಲ್ ನಿವಾಸಿ ನಮಿಷ್ ಹಾಗೂ ದೀಪಾ ಯಶವಂತ್, ಪಲ್ಲತ್ತಡ್ಕ ನಿವಾಸಿ ರಂಜಿತ್ ರವರು ಡ್ರಾ ನಡೆಸಿಕೊಟ್ಟರು. ಸಂಸ್ಥೆಯ ಪಾಲುದಾರರು ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here