ಮುರ: ಪುಣ್ಯಕುಮಾರ್ ದೈವಸ್ಥಾನದ ರಸ್ತೆ ಉದ್ಘಾಟನೆ

0

ಮುಂದಿನ ಒಂದು ತಿಂಗಳೊಳಗೆ 100 ಕೋಟಿ ರೂ ಕಾಮಗಾರಿಗೆ ಶಿಲಾನ್ಯಾಸ: ಅಶೋಕ್ ಕುಮಾರ್ ರೈ

ಪುತ್ತೂರು: ಮುಂದಿನ ಒಂದು ತಿಂಗಳೊಳಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 100 ಕೋಟಿ ರೂ. ವಿವಿಧ ಕಾಮಗಾರಿಗೆ ಶಿಲಾನ್ಯಾಸ ಕಾರ್ಯ ನಡೆಯಲಿದ್ದು, ಮುಂದಿನ ಐದು ವರ್ಷದೊಳಗೆ ಪುತ್ತೂರಿನ ಸಮಗ್ರ ಅಭಿವೃದ್ದಿಯಾಗಲಿದ್ದು ಯಾವುದೇ ಸಂಶಯ ಬೇಡ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಅವರು ಕಬಕ ಗ್ರಾಮದ ಮುರ ಪುಣ್ಯಕುಮಾರ್ ದೈವಸ್ಥಾನದ ನೂತನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 27 ದಿನಗಳ ಹಿಂದೆ ಈ ರಸ್ತೆಗೆ ಶಿಲಾನ್ಯಾಸ ನಡೆಸಲಾಗಿದೆ. ರಸ್ತೆ ಶೀಘ್ರದಲ್ಲೇ ನಡೆಯಬೇಕು ಎಂಬ ಇಲ್ಲಿನ ಜನರ ಬೇಡಿಕೆಯಿತ್ತು ಅದರಂತೆ ಕಾಮಗಾರಿ ವೇಗದಲ್ಲಿ ನಡೆದಿದ್ದು ಉದ್ಘಾಟನೆಯೂ ನಡೆದಿದೆ. ಗ್ಯಾರಂಟಿ ಯೋಜನೆ ನೀಡಿದ ಕಾಂಗ್ರೆಸ್ ಸರಕಾರಕ್ಕೆ ಅಭಿವೃದ್ದಿ ಕಾಮಗಾರಿಗೆ ನೀಡಲು ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿರುವುದರ ನಡುವೆಯೇ ಕೋಟಿ ಕೋಟಿ ಅನುದಾನ ಕ್ಷೇತ್ರಕ್ಕೆ ಹರಿದು ಬರುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪಣ ತೊಟ್ಟಿದ್ದೇನೆ. ಗ್ರಾಮೀಣ ರಸ್ತೆಗಳು, ಕುಡಿಯುವ ನೀರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಕಾಂಗ್ರೆಸ್ ಅಭಿವೃದ್ದಿ ಪರ ಎಂಬುದು ಜನತೆಗೆ ಗೊತ್ತಿದೆ, ಜನತೆಗೆ ಗ್ಯಾರಂಟಿ ಯೋಜನೆಯ ಜೊತೆಗೆ ಅಭಿವೃದ್ದಿ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.

ಯಾರೋ ಬಂದು ರಸ್ತೆ ಉದ್ಘಾಟನೆ ಮಾಡಬಹುದು ಎಚ್ಚರವಾಗಿರಿ:
ಸರಕಾರದಿಂದ ವಿವಿಧ ಕಾಮಗಾರಿಗೆ ನೀಡುತ್ತಿರುವುದು ಸಾರ್ವಜನಿಕರ ತೆರಿಗೆ ಹಣವಾಗಿದೆ, ಯಾರೂ ಸ್ವಂತ ಹಣದಿಂದ ಕಾಮಗಾರಿ ಮಾಡಿಲ್ಲ, ಈ ಹಿಂದೆಯೂ ಮಾಡಿಲ್ಲ. ಕಾಂಗ್ರೆಸ್ ಸರಕಾರದ ಅನುದಾನದಿಂದ ನಿರ್ಮಾಣವಾದ ಕಾಮಗಾರಿಯನ್ನು ಯಾರೋ ಬಂದು ಕದ್ದು ಉದ್ಘಾಟನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ, ಗ್ರಾಮಸ್ಥರು ಈ ವಿಚಾರದಲ್ಲಿ ಎಚ್ಚರವಾಗಿರಬಹುದು. ಅಧಿಕಾರ ಇಲ್ಲದೇ ಇದ್ದರೂ ಸರಕಾರಿ ಸಂಹಿತೆಯನ್ನು ಉಲ್ಲಂಘಿಸಿ ಶಿಲಾನ್ಯಾಸ ಮಾಡಿದರೂ ಅಚ್ಚರಿಯಿಲ್ಲ ಎಂದು ಶಾಸಕರು ವ್ಯಂಗ್ಯವಾಡಿದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಮಾತನಾಡಿ, ಪುತ್ತೂರು ಶಾಸಕರು 7 ತಿಂಗಳಲ್ಲೇ ಉತ್ತಮ ಜನಮನ್ನನೆಗಳಿಸಿದ್ದಾರೆ. ಬಡವರ ಪರ ಕೆಲಸ ಮಾಡುವ ಶಾಸಕರು ಪುತ್ತೂರನ್ನು ಭೃಷ್ಟಾಚಾರ ಮುಕ್ತ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪುತ್ತೂರು ಅಭೂತಪೂರ್ವವಾಗಿ ಅಭಿವೃದ್ದಿ ಹೊಂದಲಿದೆ ಎಂದು ಹೇಳಿದರು.

ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ, ಪುಣ್ಯಕುಮಾರ್ ರಸ್ತೆಗೆ ಮಾಜಿ ಶಾಸಕ ಮಠಂದೂರು 5 ಲಕ್ಷ ಅನುದಾನ ನೀಡಿದ್ದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಶಾಸಕ ಅಶೋಕ್ ಕುಮಾರ್ ರೈ ತಲಾ 20 ಲಕ್ಷ ಅನುದಾನ ನೀಡಿದ್ದಾರೆ. ಈ ಪ್ರದೇಶಕ್ಕೆ ಅನುದಾನ ನೀಡುವಲ್ಲಿ ಬಿಜೆಪಿ ತಾರತಮ್ಯ ಮಾಡಿದ್ದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಪ್ರದೇಶಕ್ಕೆ ಇನ್ನಷ್ಟು ಅನುದಾನವನ್ನು ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ, ಶ್ರೀಪ್ರಸಾದ್ ಪಾಣಾಜೆ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಬಾತಿಷಾ ಅಳಕೆಮಜಲು, ಹಿಂದುಳಿದ ವರ್ಗದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಝೀರ್ ಮಠ, ಅಕ್ರಮ ಸಕ್ರಮ ಸಮಿತಿಯ ಸದಸ್ಯ ರಾಮಣ್ಣ ಪಿಲಿಂಜ, ಕಾಂಗ್ರೆಸ್ ಪ್ರಮುಖರಾದ ಮುಕೇಶ್ ಕೆಮ್ಮಿಂಜೆ, ಬಶೀರ್ ಪರ್ಲಡ್ಕ, ಜಿನ್ನಪ್ಪ ಪೂಜಾರಿ, ನಗರಸಭಾ ಸದಸ್ಯ ರೋಬಿನ್ ಜೆ ಪಿ ಸಂತೋಷ್ ಮುರ, ಜಾನಕಿ ಬಾಲಕೃಷ್ಣ ಗೌಡ ಮುರ, ರಾಜೇಶ್ ಸಫಲ್ಯ ನಗರ, ನಾರಾಯಣ ಗೌಡ, ವಲಯಾಧ್ಯಕ್ಷರಾದ ದಾಮೋದರ್ ಮುರ, ದಿನೇಶ್ ಶೆವಿರೆ, ಪ್ರಶಾಂತ್ ಮುರ, ರಶೀದ್ ಮುರ, ಸುಂದರ ಸಫಲ್ಯ, ಹಸೈನಾರ್ ಬನಾರಿ, ಹರೀಶ್ ಕುಲಾಲ್ ಶೇವಿರೆ, ನವೀನ್ ನಾಯ್ಕ್, ಜಿನ್ನಪ್ಪ ನಾಯ್ಕ್, ಜಯಂತ್ ಕಾರೆಕ್ಕಾಡು, ಹೊನ್ನಪ್ಪ ನಲಿಕೆ, ಪ್ರವೀಣ್ ಸೆಟ್ಟಿ ಅಳಕೆಮಜಲು, ಕೇಶವ ಪೂಜಾರಿ ಅರ್ಕ, ಕೃಷ್ಣಪ್ಪ ಪೂಜಾರಿ ಶಿವನಗರ, ಹರೀಶ್ ನಾಯ್ಕ, ಶೇಖರ ನಾಯ್ಕ, ಚೇತನ್ ಪೂಜಾರಿ ಅಳಕೆಮಜಲು, ವೆಂಕಪ್ಪ ಗೌಡ ಶೇವಿರೆ, ಜಯಂತಿ ಆಚಾರ್ಯ, ನಳಿನಿ ಕಲ್ಲೆಗ, ರಾಮಣ್ಣ ಗೌಡ ಮಾಡತ್ತಾರು, ಗುತ್ತಿಗೆದಾರ ರಾಜೇಂದ್ರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here