ಪುತ್ತೂರು ಕಾವು, ಪಾಣಾಜೆ, ಆಲಂಕಾರು, ಪುತ್ತೂರ‍್ದ ಮುತ್ತು ಲಯನ್ಸ್ ಕ್ಲಬ್‌ಗಳಿಂದ ಉತ್ತಮ ಯೋಜನಾ ಕಾರ್ಯಕ್ರಮ – ಜಿಲ್ಲಾ ಗವರ್ನರ್ ಮೆಲ್ವಿನ್ ಡಿಸೋಜಾ

0

ಪುತ್ತೂರು: ಪುತ್ತೂರು ಕಾವು ಲಯನ್ಸ್ ಕ್ಲಬ್, ಪುತ್ತುರು ಪಾಣಾಜೆ ಲಯನ್ಸ್ ಕ್ಲಬ್, ಆಲಂಗಾರು ದುರ್ಗಾಂಬ ಲಯನ್ಸ್ ಕ್ಲಬ್ ಮತ್ತು ಪುತ್ತೂರ‍್ದ ಮುತ್ತು ಲಯನ್ಸ್ ಕ್ಲಬ್‌ಗಳು ಹಲವು ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಾ ಬಂದಿದ್ದು ಈ ಭಾಗದ ಅತ್ಯುತ್ತಮ ಕ್ಲಬ್‌ಗಳಾಗಿ ಮೂಡಿ ಬಂದಿದೆ ಎಂದು ಲಯನ್ಸ್ ಕ್ಲಬ್ 317ಡಿ ಇದರ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಲಯನ್ಸ್ ಕ್ಲಬ್ 4 ಕಂದಾಯ ಜಿಲ್ಲೆಗಳಾಗಿ ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಒಟ್ಟಾಗಿ 121 ಕ್ಲಬ್‌ಗಳಿವೆ. ಸುಮಾರು 4,600 ಮಂದಿ ಸದಸ್ಯರಿದ್ದಾರೆ. ಈ ಭಾರಿ ’ಬಿ ಕೈಂಡ್’ (ಕರುಣಾಮಯಿ) ಎಂಬ ಘೋಷವಾಕ್ಯದೊದಿಗೆ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಹಿರಿಯ ನಾಗರಿಕರ ಸೇವೆ, ವಿಶೇಷ ಮಕ್ಕಳಿಗೆ ಪ್ರೇರಣೆ, ಯುವಜನಾಂಗಕ್ಕೆ ಸ್ಪೂರ್ತಿ, ದೇಶಪ್ರೇಮ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಒಳಗೊಂಡಿವೆ. ಇದಲ್ಲದೆ ದೃಷ್ಟಿ, ಯುವಜನ, ವಿಪತ್ತು ಪರಿಹಾರ, ಮಾನವೀಯ ಸೇವೆಗಳು, ಮಧುಮೇಹ, ಬಾಲ್ಯದ ಕ್ಯಾನ್ಸರ್, ಪರಿಸರ ಮತ್ತು ಹಸಿವು ನಿವಾರಣೆಗೆ ಸಂಬಂಧಿಸಿ ಹಲವು ಕಾರ್ಯಕ್ರಮ ನಡೆಸಲು ಉದ್ದೇಶಿಸಿದಂತೆ ಪುತ್ತೂರಿನ ನಾಲ್ಕು ಕ್ಲಬ್‌ಗಳು ಈ ಎಲ್ಲಾ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದು, ಅದರಲ್ಲಿ ಕೆಲವೊಂದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಈ ಸಲದ ಸ್ಮೈಲ್ ವಿಶೇಷ ಕಾರ್ಯಕ್ರಮವಾಗಿದ್ದು, ಇದರ ಅಡಿಯಲ್ಲಿ 121 ಕ್ಲಬ್‌ಗಳು ಸೇವೆ ಸಲ್ಲಿಸುತ್ತಿವೆ. ವಿಶೇಷ ಕಾರ್ಯಕ್ರಮವಾಗಿ ರೂ.1ಕೋಟಿ ಪೌಂಡೇಶನ್‌ ಮೂಲಕ ಸೇವೆ ನೀಡಿದ್ದೇವೆ. 4 ಹೊಸ ಕ್ಲಬ್, 7ಲಿಯೋ ಕ್ಲಬ್‌ಗಳನ್ನು ಉದ್ಘಾಟಿಸಲಾಗುವುದು. 500ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆಯಾಗಲಿದೆ. ಪುತ್ತೂರನಲ್ಲಿ ಲಿಯೋ ಕ್ಲಬ್ ಪುತ್ತೂರು ಮತ್ತು ಶ್ರೀ ರಾಮಕೃಷ್ಣ ಶಾಲೆಯಲ್ಲಿ ಲಿಯೋ ಕ್ಲಬ್ ಉದ್ಘಾಟನೆಯಾಗಲಿದೆ ಎಂದು ಅವರು ಹೇಳಿದರು.

ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಆಲಂಗಾರು ದುರ್ಗಾಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ರೈ ಮನವಳಿಕೆ, ಪುತ್ತೂರ‍್ದ ಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಪೈ ಅವರು ತಮ್ಮ ತಮ್ಮ ಕ್ಲಬ್‌ಗಳಿಂದ ಮಾಡಿರುವ ಸಮಾಜ ಮುಖಿ ಕಾರ್ಯಗಳ ಮತ್ತು ಮುಂದೆ ಆಗುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಲಯನ್ಸ್‌ಕ್ಲಬ್ ಪ್ರಾಂತೀಯ ರಾಯಬಾರಿ ಗಣೇಶ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here