ನೆಲ್ಯಾಡಿ ಸಂಯುಕ್ತ ಕ್ರಿಸ್ಮಸ್ ಆಚರಣೆ

0

ನೆಲ್ಯಾಡಿ: ಸಂಯುಕ್ತ ಕ್ರಿಸ್‌ಮಸ್ ಆಚರಣಾ ಸಮಿತಿ ವತಿಯಿಂದ ನೆಲ್ಯಾಡಿ ಪರಿಸರದ ಚರ್ಚ್‌ನ ಸಹಯೋಗದೊಂದಿಗೆ ಡಿ.17ರಂದು ನೆಲ್ಯಾಡಿ ಗಾಂಧಿಮೈದಾನದಲ್ಲಿ ಸಂಯುಕ್ತ ಕ್ರಿಸ್ಮಸ್ ಆಚರಣೆ ನಡೆಯಿತು.


ನೆಲ್ಯಾಡಿ ಮತ್ತು ಆಸುಪಾಸಿನ ಸುಮಾರು ಇಪ್ಪತ್ತಾರು ಚರ್ಚ್‌ಗಳ ಎರಡೂವರೇ ಸಾವಿರಕ್ಕಿಂತಲೂ ಹೆಚ್ಚು ಮಂದಿಯಿಂದ ಆಕರ್ಷಕ ಮೆರವಣಿಗೆ ನಡೆಯಿತು. ಚಿತ್ತಾಕರ್ಷಕ ಸ್ಥಬ್ದ ಮೆರವಣಿಗೆಗೆ ಮೆರುಗು ನೀಡಿತು. ಬೆಳ್ತಂಗಡಿ ಧರ್ಮಪ್ರಾಂತ್ಯದ ಅತಿವಂದನಿಯ ಮಾರ್ ಲಾರೆನ್ಸ್ ಮುಕ್ಕುಯಿಯವರು ಕ್ರಿಸ್ಮಸ್ ಸಂದೇಶ ನೀಡಿ, ಕ್ರಿಸ್ಮಸ್ ಶಾಂತಿ, ಸಹಬಾಳ್ವೆ, ವಿನಯ ಶೀಲತೆ, ನಂಬಿಕೆ ಮತ್ತು ನಿರೀಕ್ಷೆಗಳ ಹಬ್ಬ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಐವನ್ ಡಿ’ಸೋಜರವರು ಮಾತನಾಡಿ, ಜನಸಂಖ್ಯೆಯಲ್ಲಿ ನಗಣ್ಯವಾದ ಕ್ರೈಸ್ತ ಸಮಾಜ ರಾಷ್ಟ್ರ ನಿರ್ಮಾಣದಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿ ದೇಶಕ್ಕೆ ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಮಾದರಿಯ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಂದನಿಯ ಕೋರ್ ಎಪಿಸ್ಕೊಪ ಪಿ.ಕೆ ಅಬ್ರಹಾಂ ವಹಿಸಿದ್ದರು. ಮುಖ್ಯ ಸಂಘಟಕರಾದ ಫಾ.ಜೋಸೆಫ್ ಪಾ೦ಪಕ್ಕಲ್, ಜೋಸೆಫ್ ವಿ ಜೆನಯನ್ ಟ್ರೇಡರ್ಸ್, ಮನೋಜ್ ಬಿಲ್ಡ್‌ಟೆಕ್, ಅಬ್ರಹಾಂ ಕೆ. ಪಿ, ಫಾ.ಸಕ್ಕರಿಯ, ಕೆ.ಪಿ ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂತ ಅಲ್ಫೋನ್ಸ ಚರ್ಚ್‌ಗೆ ಸಮಗ್ರ ಪ್ರಶಸ್ತಿ:
ರ‍್ಯಾಲಿ ಮತ್ತು ಸ್ಥಬ್ದಚಿತ್ರ ವಿಭಾಗದಲ್ಲಿ ಸಂತ ಅಲ್ಫೊನ್ಸ ಚರ್ಚ್ ಸಮಗ್ರ ಪ್ರಶಸ್ತಿಗೆ ಅರ್ಹವಾಯಿತು. ಉದನೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು, ಕೊಣಾಲು ಸೈಂಟ್ ಮೇರಿಸ್ ಚರ್ಚ್ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here