ಉದ್ಯಮದ ಬೆಳವಣಿಗೆಗೆ ಪೂರಕವಾದ ವೇದಿಕೆ-ಪ್ರಕಾಶ್ ಕಾರಂತ್
ಪುತ್ತೂರು: ಉದ್ಯಮ ಕ್ಷೇತ್ರದಲ್ಲಿ ಧನಾತ್ಮಕ ಚಿಂತನೆ, ಮಹತ್ವಾಕಾಂಕ್ಷೆಯ ಯೋಜನೆಗಳಿದ್ದಲ್ಲಿ ಉದ್ಯಮವು ಯಶಸ್ಸಿನ ಹಾದಿಯಲ್ಲಿ ಸಾಗಬಲ್ಲುದಾಗಿದೆ. ಈ ನಿಟ್ಟಿನಲ್ಲಿ ರೋಟರಿ ಸೆಂಟ್ರಲ್ ಉದ್ಯಮದ ಬೆಳವಣಿಗೆಗೆ ಪೂರಕವಾದ ಹೆಜ್ಜೆಯನ್ನಿಟ್ಟಿರುವುದು ಮಾತ್ರವಲ್ಲ ಉದ್ಯಮದ ಬೆಳವಣಿಗೆಗೆ ಪೂರಕವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವುದು ಮೆಚ್ಚತಕ್ಕ ಅಂಶವಾಗಿದೆ ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ನಿಕಟಪೂರ್ವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.
ಪುತ್ತೂರಿನಲ್ಲಿ ಏಳು ರೋಟರಿ ಸಂಸ್ಥೆ ಇದ್ದು ಈ ಏಳೂ ರೋಟರಿ ಸಂಸ್ಥೆಯವರು ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡವರಾಗಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ರೋಟರಿ ಬ್ಯುಸಿನೆಸ್ ಎಕ್ಸ್ಪೋ' ಎಂಬ ಹೆಸರಿನಲ್ಲಿ ಬಪ್ಪಳಿಗೆ ಬೈಪಾಸ್ ರಸ್ತೆಯಲ್ಲಿರುವ ಸಮೃದ್ಧಿ ಸಂಕೀರ್ಣದಲ್ಲಿ
ಡಿ.23 ರಿಂದ 24ರ ತನಕ ವಿನೂತನವಾದ, ವಿಶೇಷವಾದ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇವರು ಹಮ್ಮಿಕೊಂಡಿದ್ದು ಡಿ.23 ರಂದು ಈ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಅಲ್ಲಿ ಬದಲಾವಣೆಗೆ, ನಾವೀನ್ಯತೆಗೆ ಪೂರಕವಾದ ಉತ್ಪನ್ನಗಳಿರಬೇಕು, ಗ್ರಾಹಕರಿಗೆ ಏನನ್ನು ನೀಡಬೇಕು ಎನ್ನುವ ವಿಚಾರ ಮನಸ್ಸಿಗೆ ಬರಬೇಕು, ಜನರ ಅವಶ್ಯಕತೆಗಳಿಗೆ ಸ್ಪಂದಿಸಬೇಕು, ಮತ್ತೊಬ್ಬರಲ್ಲಿ ಸಂತೋಷ, ಸುಖವನ್ನು ಕಾಣಬೇಕು, ಗುಣಮಟ್ಟಕ್ಕೆ ಪ್ರಾಧಾನ್ಯತೆ ನೀಡಬೇಕು, ಸಮಾಜಮುಖಿಯಾಗಿ ಬೆಳೆದಾಗ ಮಾತ್ರ ಸಾಧ್ಯವಾಗುವುದು ಎಂದ ಅವರು ರೋಟರಿ ಸೆಂಟ್ರಲ್ ಹಮ್ಮಿಕೊಂಡ ಈ ಕಾರ್ಯಕ್ರಮ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ ಮಾತ್ರವಲ್ಲ ಈ ಕಾರ್ಯಕ್ರಮ ಜಿಲ್ಲೆಯ ಯಶಸ್ವಿ ಕಾರ್ಯಕ್ರಮ ಎನಿಸಿಕೊಂಡಿದೆ ಎಂದು ಅವರು ಹೇಳಿದರು.
ಉದ್ಯಮದಾರರಿಗೆ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಉತ್ತಮ ಹೆಜ್ಜೆ-ವಾಮನ್ ಪೈ
ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ಉದ್ಯಮದಾರರು ತಮ್ಮ ವ್ಯಾಪಾರ ಕ್ಷೇತ್ರವನ್ನು ಅಲ್ಲಲ್ಲಿ ವಿಸ್ತರಿಸಿಕೊಂಡಿದ್ದಾರೆ. ಆದರೆ ಇಲ್ಲಿ ರೋಟರಿ ಸೆಂಟ್ರಲ್ರವರು ಈ ಬಿಸಿನೆಸ್ ಎಕ್ಸ್ಪೋನಲ್ಲಿ ಎಲ್ಲಾ ಉದ್ದಿಮೆದಾರರನ್ನು ಒಂದೇ ಕಡೆ ಸೇರಿಸಿ ವ್ಯವಸ್ಥೆಯನ್ನು ಮಾಡಿರುವುದರ ಉದ್ಧೇಶ ಉದ್ಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾಗಿದೆ. ಇಂತಹ ಕಾರ್ಯಕ್ರಮ ಪ್ರತಿ ವರ್ಷ ನಡೆಯಲಿ, ಜನರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದರು.
ರೋಟರಿ ಪಬ್ಲಿಕ್ ಇಮೇಜಿಗೆ ದೊಡ್ಡ ಕಾಣಿಕೆ-ಕೆ.ವಿಶ್ವಾಸ್ ಶೆಣೈ
ರೋಟರಿ ಪಬ್ಲಿಕ್ ಇಮೇಜ್ ಚೇರ್ಮ್ಯಾನ್ ಕೆ.ವಿಶ್ವಾಸ್ ಶೆಣೈ ಮಾತನಾಡಿ, ರೋಟರಿ ಸೆಂಟ್ರಲ್ರವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಅದರಲ್ಲೂ ವಾಲ್ ಆಫ್ ಹ್ಯೂಮಾನಿಟಿ ಎಂಬ ಕಾನ್ಸೆಪ್ಟ್ ಒಳ್ಳೆಯ ಕಾರ್ಯಕ್ರಮವಾಗಿದೆ. ಉದ್ಯಮದಾರರನ್ನು ಒಂದೇ ಸೂರಿನಡಿ ಸೇರಿಸಿ ಆ ಮೂಲಕ ವ್ಯವಹಾರ ವೃದ್ಧಿಸಿಕೊಳ್ಳುವ ಯೋಜನೆ ಶ್ಲಾಘನೀಯ ಮಾತ್ರವಲ್ಲ ರೋಟರಿ ಪಬ್ಲಿಕ್ ಇಮೇಜಿಗೆ ದೊಡ್ಡ ಕಾಣಿಕೆಯಾಗಿದೆ ಎಂದರು.
ಪುತ್ತೂರಿನ ಜನತೆ ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಲಿ-ಸತ್ಯಗಣೇಶ್
ಪುತ್ತೂರು ಪೇಸ್ ಅಧ್ಯಕ್ಷ ಸತ್ಯಗಣೇಶ್ ಮಾತನಾಡಿ, ವಿವಿಧ ಉದ್ಯಮಗಳನ್ನು ಒಂದೇ ಸೂರಿನಡಿ ತಂದು ಆ ಮೂಲಕ ಉದ್ದಿಮೆದಾರರಿಗೆ, ಗ್ರಾಹಕರಿಗೆ ಎದುರೇದುರು ಮಾತಾಡಿಕೊಂಡು ವ್ಯಾಪಾರ ಮಾಡುವುದಕ್ಕೆ ಉತ್ತಮ ವೇದಿಕೆಯಾಗಿದೆ. ಪುತ್ತೂರಿನ ಜನತೆ ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.
ಎಕ್ಸ್ಪೋದಲ್ಲಿ ಮಿಂಚಲಿರುವ ಸ್ಟಾಲ್ಗಳು
ನ್ಯಾಚುರಲ್ ಐಸ್ಕ್ರೀಮ್, ಕೈಮಗ್ಗದ ಎಲ್ಲಾ ವಯೋಮಾನದ ಉಡುಪುಗಳು, ಖಾದಿ(ಪುರುಷ ಮತ್ತು ಸ್ತ್ರೀಯರ ಉಡುಪು), ಆಯುರ್ವೇದಿಕ್ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ಹಲಸಿನ ಹೋಳಿಗೆ, ಚಟ್ನಿ ಹುಡಿ, ಗೆರಟೆಯ ಉತ್ಪನ್ನಗಳು, ಟೈಲ್ಸ್, ಪೀಠೋಪಕರಣಗಳು, ರಾಸಾಯನಿಕ ಮುಕ್ತ ಶುದ್ದೀಕರಣ ಉತ್ಪನ್ನಗಳು, ಅಲೆವೆರಾ ತಂಪು ಉತ್ಪನ್ನಗಳು, ರಿಯಾಯಿತಿ ದರದ ಬ್ಯಾಗುಗಳು, ಕೈ ನೇಯ್ಗೆ ಬ್ಯಾಗುಗಳು, ರಾಗಿ ಬೋಟಿ, ತರಕಾರಿ ಕತ್ತರಿಸುವ ಸಾಧನಗಳು, ಮಸಾಜ್ ಸಾಧನಗಳು, ಡಿಟರ್ಜಂಟ್, ಮಕ್ಕಳ ಆಟಿಕೆಗಳು, ಗೋಮಯ ಉತ್ಪನ್ನಗಳು, ರುಮಾಲಿ ರೋಟಿ, ಸ್ವೀಟ್ ಕೋರ್ನ್, ಗ್ಯಾಸ್ ಸ್ಟೌವ್ ಉತ್ಪನ್ನಗಳು, ಚರುಂಬುರಿ, ನರ್ಸರಿ, ಮ್ಯಾಜಿಕ್ ಟವೆಲ್, ಗುಜುರಿ ಖರೀದಿ ಅಂಗಡಿ, ಕರಿದ ತಿಂಡಿ ತಿನಸು, ಸೋಡಾ, ತರಕಾರಿ ಬೀಜ, ಅಯಸ್ಕಾಂತೀಯ ಚಾಪೆಗಳು, ಗಾಳಿಪಟ, ಸಿದ್ದ ಚಪಾತಿ(ನಿತ್ಯ ಚಪಾತಿ), ವಿದ್ಯುತ್ ಉಳಿಕೆ ಉಪಕರಣಗಳು, ಚೋಳಮಂಡಲ ಫೈನಾನ್ಸ್, ರಿಯಲ್ ಎಸ್ಟೇಟ್, ನ್ಯಾಚುರಲ್ ಜ್ಯೂಸ್, ಹಳೆಯ ಅನುಪಯುಕ್ತ ನ್ಯೂಸ್ ಪೇಪರ್ ಹಾಗೂ ಇತರ ವಸ್ತುಗಳನ್ನು ಕೊಂಡುಕೊಳ್ಳುವ ಸ್ಟಾಲ್, ಕಬ್ಬಿಣ, ಪ್ರೊ ಪ್ರೆಸ್ಟೀಜ್ ಸ್ಯಾನಿಟರಿ & ಟೈಲ್ಸ್, ಆಕರ್ಷಣ್ ಇಂಡಸ್ಟ್ರೀಸ್, ಶ್ರೀ ಲಕ್ಷ್ಮೀ ಹರ್ಬಲ್ಸ್, ಮುಳಿಯ ಜ್ಯುವೆಲ್ಸ್, ಮುಳಿಯ ಪ್ರಾಪರ್ಟೀಸ್, ಬಿ.ಕೆ ಬಿಲ್ಡ್ ಮಾರ್ಟ್, ದ.ಕ ತೆಂಗು ರೈತ ಉತ್ಪಾದಕರ ಸಂಸ್ಥೆ, ಯಶಸ್ವಿ ಸಂಜೀವಿನಿ ಹರ್ಬಲ್ ಆಯುರ್ವೇದ(ಸ್ವದೇಶಿ ಉತ್ಪನ್ನ), ಎಸ್.ಟಿ.ವಿ.ಸಿ, ಯುನಿಕ್ ಕೇನ್ ವುಡ್ ವಕ್ಸ್೯, ಸದ್ಗುರು ಆಯುರ್ವೇದ, ಸ್ವದೇಶಿ ಸಂಭ್ರಮ ಕೈಮಗ್ಗದ ಸಿದ್ಧ ಉಡುಪುಗಳು, ಸಿಂಚು ಮಾರ್ಕೆಟಿಂಗ್, ಶಿವಳ್ಳಿ ಬ್ರಾಹ್ಮಣರ ದೋಸೆ ಕ್ಯಾಂಪ್, ನಾನ್ ವೆಜ್ ಸ್ಟಾಲ್, ಗೋಳಿ ಸೋಡ, ಹಲಸಿನ ಹೋಳಿಗೆ, ನಿನ್ನಿಕಲ್ಲು ನರ್ಸರಿರವರ ವಿವಿಧ ಸಸ್ಯಗಳು ಹೀಗೆ ನೂರಕ್ಕೂ ಮಿಕ್ಕಿ ಸ್ಟಾಲ್ಗಳು ಎಕ್ಸ್ಪೋದಲ್ಲಿ ಕಾಣ ಸಿಗಲಿದೆ.ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯ ಸೇನಾನಿ ನವೀನ್ಚಂದ್ರ ನಾಕ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಸದಸ್ಯ ವಸಂತ್ ಶಂಕರ್ ಪ್ರಾರ್ಥಿಸಿದರು. ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ಮಾಜಿ ಅಧ್ಯಕ್ಷ ರಫೀಕ್ ದರ್ಬೆ ವಂದಿಸಿದರು.
ಕಾರ್ಯಕ್ರಮದ ವಿಶೇಷತೆಗಳು..
ಮಧ್ಯಾಹ್ನ ಆದರ್ಶ ದಂಪತಿ ಸ್ಪರ್ಧೆ, ಕಾಮಿಡಿ ಕಿಲಾಡಿ ಖ್ಯಾತಿಯ ಶಿವಮೊಗ್ಗದ ಕವಿತಾ ಸುಧೀಂದ್ರರವರು ಭಾಗಿಯಾಗಲಿದ್ದಾರೆ. ಪುತ್ತೂರಿನ ಉದ್ಯಮ ಸಂಸ್ಥೆಗಳಿಗೆ ತಮ್ಮ ವಿಶೇಷ ಗಿಫ್ಟ್ ಕೂಪನ್ಗಳನ್ನು ನೀಡಲು ಅವಕಾಶವಿದೆ. ಪ್ರತಿದಿನ ಆಕರ್ಷಕ ಬಹುಮಾನಗಳು, ಮೂರು ದಿನವೂ ವೈದ್ಯಕೀಯ ಶಿಬಿರ, ರಕ್ತ ಪರಿಶೋಧನಾ ಶಿಬಿರ, ವ್ಯವಹಾರಗಳಿಗೆ ವಿಚಾರ ಸಂಕಿರಣ, ನೂತನ ಉತ್ಪನ್ನಗಳ ಬಿಡುಗಡೆಗೆ ವೇದಿಕೆ ಕಲ್ಪಿಸಲಾಗುವುದು. ಸ್ವಚ್ಛತಾ ದೃಷ್ಟಿಯಿಂದ ಹಳೆ ವಸ್ತುಗಳ ಅಥವಾ ಪೇಪರ್ಗಳ ಮಾರಾಟಕ್ಕೂ ಅವಕಾಶ ನೀಡಲಾಗುತ್ತದೆ. ನಮ್ಮ ವೇದಿಕೆ-ನಿಮ್ಮ ಪ್ರತಿಭೆ’ ಎಂಬ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮದಲ್ಲಿ ಭರತನಾಟ್ಯ, ಸುಗಮ ಸಂಗೀತ, ಜಾನಪದ ಹಾಡು/ನೃತ್ಯ, ವೈಯಕ್ತಿಕ ನೃತ್ಯ/ಸಂಗೀತ, ಸಮೂಹ ನೃತ್ಯ/ಗಾನ ಇತ್ಯಾದಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಲು ಅವಕಾಶವಿದೆ. ಧ್ವನಿ ಮತ್ತು ಬೆಳಕು ಒದಗಿಸಲಾಗುವುದು. ಸ್ಪರ್ಧೆಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿದೆ.
ಜಿಲ್ಲಾಮಟ್ಟದಲ್ಲಿ ಆಯೋಜಿಸಲಿದ್ದೇವೆ..
ರೋಟರಿ ಸದಸ್ಯರ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಪುತ್ತೂರಿನಲ್ಲಿ ಪ್ರಥಮ ಬಾರಿಗೆ `ರೋಟರಿ ಬ್ಯುಸಿನೆಸ್ ಎಕ್ಸ್ಪೋ’ ಎಂಬ ಹೆಸರಿನಲ್ಲಿ ನಾನು ಭೀಜ ಮಾತ್ರ ಭಿತ್ತಿದೆ. ಆದರೆ ಅದನ್ನು ಮರವಾಗಿಸಿದ್ದು ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿಯವರು. ಈ ಕಾನ್ಸೆಪ್ಟ್ ಬಗ್ಗೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ವಿಷಯವನ್ನು ಹಾಕಿದ್ದೇವು. ಇದು ಇಡೀ ಕರ್ನಾಟಕದಾದ್ಯಂತ ತಲುಪಿ ಇಂದು ಇಲ್ಲಿ ಮಂಗಳೂರು, ಮೂಡಬಿದ್ರೆ, ಕುಂದಾಪುರ, ಹುಬ್ಬಳ್ಳಿ ಹೀಗೆ ಎಲ್ಲೆಡೆಯ ಉದ್ಯಮಗಳು ಸ್ಟಾಲ್ ಹಾಕಿರುತ್ತಾರೆ. ರೋಟರಿ ಸಂಸ್ಥೆ ತುಂಬಾ ಕೆಲಸ ಮಾಡುತ್ತದೆ ಮಾತ್ರವಲ್ಲ ಅದು ಸಮುದಾಯಕ್ಕೆ ತಲುಪಿದಾಗ ಅದರ ಮೌಲ್ಯ ಹೆಚ್ಚುತ್ತದೆ. ಇದೀಗ ನಾವು ತಾಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ 3181 ರೋಟರಿ ಜಿಲ್ಲೆಯ ರೋಟರಿ ಸದಸ್ಯರ ವ್ಯವಹಾರ ವೃದ್ಧಿಸಿಕೊಳ್ಳಲು ಜಿಲ್ಲಾಮಟ್ಟದಲ್ಲಿ ಆಯೋಜಿಸುವ ಬಗ್ಗೆ ಚಿಂತಿಸುತ್ತಿದ್ದೇವೆ.
-ಡಾ.ರಾಜೇಶ್ ಬೆಜ್ಜಂಗಳ, ಅಧ್ಯಕ್ಷರು, ರೋಟರಿ ಕ್ಲಬ್ ಸೆಂಟ್ರಲ್