ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಟ್ರಸ್ಟ್ ಆಡಳಿತದಲ್ಲಿ ನಡೆಸಲ್ಪಡುತ್ತಿರುವ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಡಿ.22ರಂದು ಮೆಟ್ರಿಕ್ ಮೇಳ ನಡೆಯಿತು.
ಪುಳಿತ್ತಡಿ ಮಠ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಜೂಲಿಯನ್ ವಾಸ್ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ, ಗಣಿತದಿಂದ ಕಲಿಯುವ ಲೆಕ್ಕವನ್ನು ಪ್ರಾಯೋಗಿಕವಾಗಿ ಕಲಿತಾಗ ಅನುಭವ ಶಿಕ್ಷಣ ದೊರೆಯುತ್ತದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಮೆಟ್ರಿಕ್ ಮೇಳ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಮುಕುಂದ ಗೌಡ ಬಜತ್ತೂರು, ವಿಶ್ವನಾಥ ಗೌಡ ಮಾಯಿತ್ತಾಲ್, ಪರಿವೀಕ್ಷಕರಾದ ಬಾಲಕೃಷ್ಣ ಬಿ.ಟಿ., ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರ ಗೌಡ, ಸದಸ್ಯರಾದ ನೋಣಯ್ಯ ಗೌಡ ಆಲಂಕಾರು, ಶೀನಪ್ಪ ಗೌಡ ಬೊಳ್ಳಾವು, ಶೇಷಪ್ಪ ಗೌಡ ಬೊಳ್ಳಾವು, ಗೀತ ಕಂಪ ಮಧುರ, ಝೈಬುನ್ನೀಸ ಹಾಗೂ ಉದ್ಯಮಿ ಪ್ರತಾಪ್ರವರು ಶುಭಹಾರೈಸಿದರು. ಮುಖ್ಯೋಪಾಧ್ಯಾಯನಿ ಲಕ್ಷ್ಮೀ ಪಿ.ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗಣಿತ ಶಿಕ್ಷಕಿ ಶಕುಂತಲಾ ಕೆ.ವಂದಿಸಿದರು. ಶಿಕ್ಷಕರಾದ ಸವಿತಾ ಪಿ.ಸಿ., ಮೋಹನ್ ಎಚ್., ರಜನಿ ಎಚ್., ಭವ್ಯ ವೈ, ಡೊಂಬಯ್ಯ ಗೌಡ ಅವರು ಸಹಕರಿಸಿದರು.