ಪುತ್ತೂರಿನ ಪ್ರಜ್ವಲ್ ಕರ್ಪೆ ನಿರ್ದೇಶನದ ’ಓಂ ಸಾಯಿ ರಾಮ್’ ಆಲ್ಬಮ್ 7 ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ನಾಮ ನಿರ್ದೇಶನ

0

ಪುತ್ತೂರು: ಪುತ್ತೂರು ಬೊಳುವಾರು ಬೈಪಾಸ್ ನಿವಾಸಿ ಪ್ರಜ್ವಲ್ ಕರ್ಪೆ ಡೈರೆಕ್ಷನಲ್ಲಿ ಕನ್ನಡ ಮ್ಯೂಸಿಕ್ ವಿಡಿಯೋ ’ಓಂ ಸಾಯಿ ರಾಮ್’ ಪ್ರತಿಷ್ಠಿತ ಇಂಡಿಯನ್ ಫಿಲ್ಮ್ ಹೌಸ್ ಫೆಸ್ಟಿವಲ್‌ನಲ್ಲಿ ವಿವಿಧ ವಿಭಾಗಗಳಲ್ಲಿ 7 ರಾಷ್ಟ್ರೀಯ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.
ಭಗವಾನ್ ಶ್ರೀ ಶಿರಡಿ ಸಾಯಿ ಬಾಬಾ ಅವರ ಪವಾಡಗಳನ್ನು ಆಧರಿಸಿದ ಕನ್ನಡ ಆಲ್ಬಂ ಹಾಡು ’ಓಂ ಸಾಯಿ ರಾಮ್’ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಈಗ ವಿವಿಧ ವಿಭಾಗಗಳಲ್ಲಿ 7 ರಾಷ್ಟ್ರೀಯ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ, ಸಂಗೀತ ವೀಡಿಯೊವನ್ನು ಪ್ರಜ್ವಲ್ ಕರ್ಪೆ ಬರೆದು ನಿರ್ದೇಶಿಸಿದ್ದಾರೆ. ಶಿರಡಿ ಸಾಯಿಬಾಬಾ ಪಾತ್ರವನ್ನು ದಿ| ಡಾ.ಕಾಸರಗೋಡು ಅಶೋಕ್ ಕುಮಾರ್ ಮಾಡಿದ್ದರು. ಇನ್ನೊಂದು ಪ್ರಮುಖ ಪಾತ್ರವನ್ನು ಎಂ ಸುಬ್ರಹ್ಮಣ್ಯ ಪೈ ನಿರ್ವಹಿಸಿದ್ದು, ಚಿರಾಗ್, ಅನ್ವಿತಾ ಅರವಿಂದ್, ಪ್ರಜ್ವಲ್ ಕರ್ಪೆ ಮುಂತಾದವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ೨೦೨೪ರ ಮಾರ್ಚ್ ೨ ಮತ್ತು ೩ ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here