ಶ್ರೀನಿವಾಸ ಕಲ್ಯಾಣೋತ್ಸವ- ಮಧ್ಯಾಹ್ನ ಹದಿನೈದು ಸಾವಿರ ಭಕ್ತರಿಂದ ಅನ್ನದಾನ ಸ್ವೀಕಾರ – ರಾತ್ರಿ ಐವತ್ತು ಸಾವಿರ ಜನರಿಗೆ ಅಡುಗೆ ತಯಾರಿ

0

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿ ನಡೆಯುತ್ತಿರುವ ಶ್ರೀನಿವಾಸ ಕಲ್ಯಾಣೋತ್ಸವ ಡಿ.24-25ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಜರಗುತ್ತಿದೆ.

ಬೆಳಿಗ್ಗೆ 6.30 ಕ್ಕೆ ಸುಪ್ರಭಾತ ಪೂಜೆಯಿಂದ ಡಿ.25 ರ ಕಾರ್ಯಕ್ರಮ ಪ್ರಾರಂಭವಾಯಿತು.
ಮಂಗಳೂರಿನ ರಾಗ ಲಾಸ್ಯ ತಂಡದಿಂದ ಭಜನಾ ಕಾರ್ಯಕ್ರಮ , ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರಗಿತುಮಧ್ಯಾಹ್ನ ಜರಗಿದ ಅನ್ನಸಂತರ್ಪಣೆಯಲ್ಲಿ ಹದಿನೈದು ಸಾವಿರ ಭಕ್ತಾದಿಗಳು ಅನ್ನದಾನ ಸ್ವೀಕರಿಸಿದರು. ಜಿಲ್ಲೆಯ ಪ್ರತಿಷ್ಠಿತ ಭಜನಾ ತಂಡಗಳಿಂದ ಸಭಾಂಗಣದಲ್ಲಿ ಆಕರ್ಷಕ ಕುಣಿತ ಭಜನೆ ನಡೆಯಿತು. ರಾತ್ರಿ ಐವತ್ತು ಸಾವಿರ ಜನಕ್ಕೆ ಅನ್ನದಾನಕ್ಕೆ ಬೇಕಾದ ವ್ಯವಸ್ಥೆ ಭರದಿಂದ ಸಾಗುತ್ತಿದೆ. ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಪ್ರತಿಷ್ಠಿತ ಪಟಾಕಿ ಮಾರಾಟ ಸಂಸ್ಥೆಯಿಂದ ಸುಡುಮದ್ದು ಪ್ರದರ್ಶನ ಜರಗಲಿದೆ.

LEAVE A REPLY

Please enter your comment!
Please enter your name here